ಮೆಣಸು ಕುಯ್ಯುವಾಗ ವಿದ್ಯುತ್ ಶಾಕ್ : ಸ್ಥಳದಲ್ಲೇ ಕಾರ್ಮಿಕ ದಾರುಣ ಸಾವು
ಹಾಸನ : ಮೆಣಸು ಕುಯ್ಯುವಾಗ ದುರಂತವೊಂದು ನಡೆದಿದ್ದು ವಿದ್ಯುತ್ ಶಾಕ್ ತಗುಲಿ ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ನಡೆದಿದೆ.
ಕಾಸರಗೋಡಿನ ಮಂಜೇಶ್ವರ ಮೂಲದ ಸಮೀರ್ (32) ಮೃತ ವ್ಯಕ್ತಿ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ದೊಡ್ಡ ಸಾಲವರ ಗ್ರಾಮದಲ್ಲಿ ಹುಕ್ಕುಂ ಚಂದ್ ಎನ್ನುವವರ ಮೆಣಸಿನ ತೋಟದಲ್ಲಿ ಮೆಣಸು ಕುಯ್ಯುವಾಗ ಅಚಾನಕ್ಕಾಗಿ ವಿದ್ಯುತ್ ಸ್ಪರ್ಶವಾಗಿ ಸಮೀರ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಈ ಘಟನೆಯೂ ಅರೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.