ಸಕಲೇಶಪುರ : ಮಹಾಶಿವರಾತ್ರಿ ಅಂಗವಾಗಿ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟ ಭಕ್ತಾದಿಗಳಿಗೆ ಬಾಳುಪೇಟೆ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮುಸ್ಲಿಮರು ಊಟ ಪಾನೀಯ, ಹಣ್ಣುಗಳನ್ನು ವಿತರಣೆ ಮಾಡಿದರು.
ಕಳೆದ ಮೂರು ವರ್ಷಗಳಿಂದ ಬಾಳುಪೇಟೆಯ ಮುಸ್ಲಿಂರು ಮಹಾಶಿವರಾತ್ರಿ ಅಂಗವಾಗಿ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಡುವ ಭಕ್ತಾದಿಗಳಿಗೆ ಮೂರು ದಿನಗಳ ಕಾಲ ಭೋಜನ ತಂಪು ಪಾನೀಯ ನೀರು ಹಣ್ಣು ಹಂಪಲುಗಳನ್ನು ವಿತರಿಸುತ್ತಾ ಬಂದಿದ್ದೇವೆ ಎಂದು ಆಯೋಜಕರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಾದೆಯಾತ್ರಿ, ಒಂದು ಧರ್ಮದವರು, ಇನ್ನೊಂದು ಧರ್ಮದವರನ್ನು ಬರಮಾಡಿಕೊಳ್ಳುವುದು, ಸಹಕಾರ ನೀಡುವುದು ಸೌಹಾರ್ದಕ್ಕೆ ಪ್ರತೀಕವಾಗಿದೆ. ಭಕ್ತಾದಿಗಳನ್ನು ಬರಮಾಡಿಕೊಂಡು ಅವರಿಗೆ ಹಣ್ಣು, ಪಾನೀಯಗಳನ್ನು ಕಳೆದ ಮೂರು ನಾಲ್ಕು ವರ್ಷಗಳಿಂದ ವಿತರಿಸಿರುವ ಮುಸ್ಲಿಂ ಬಾಂಧವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ಪ್ರಸ್ತುತ ಕಾಲಘಟ್ಟದಲ್ಲಿ ಮನುಷ್ಯ ಮನುಷ್ಯರ ನಡುವೆ ಭಿನ್ನಾಭಿಪ್ರಾಯಗಳು ಮೂಡುತ್ತಿರುವ ಸಂದರ್ಭದಲ್ಲಿ ನೂರಾರು ಕಿಲೋಮೀಟರ್ ಪಾದಯಾತ್ರೆ ಹೊರಟ ಭಕ್ತಾದಿಗಳಿಗೆ ಜಾತಿ ಧರ್ಮದ ಹಂಗನ್ನು ತೊರೆದು ಸೇವೆಯ ಕಾರ್ಯದಲ್ಲಿ ತೊಡಗಿರುವ ಬಾಳುಪೇಟೆಯ ಮುಸ್ಲಿಂ ಸಹೋದರರ ಕೆಲಸ ದೇವರು ಮೆಚ್ಚುವಂತದ್ದು ಎಂದು ಹೇಳಿದರು.
ಈ ಸಂದರ್ಭದಲ್ಲಿ ತೌಸೀಫ್, ಸುಲೇಮಾನ್, ಲತೀಫ್, ಮೊಹಮ್ಮದ್, ಅಸ್ಲಾಂ, ಸಿರಾಜ್ ಮತ್ತು ರಫೀಕ್ ಇದ್ದರು