Saturday, November 30, 2024
Homeಸುದ್ದಿಗಳುಸಕಲೇಶಪುರಸರ್ಕಲ್ ಇನ್ಸ್ಪೆಕ್ಟರ್ ಜಗದೀಶ್ ಮೇಲೆ ಕ್ರಮಕ್ಕೆ ಪತ್ರಕರ್ತರ ಸಂಘದಿಂದ ಒತ್ತಾಯ.

ಸರ್ಕಲ್ ಇನ್ಸ್ಪೆಕ್ಟರ್ ಜಗದೀಶ್ ಮೇಲೆ ಕ್ರಮಕ್ಕೆ ಪತ್ರಕರ್ತರ ಸಂಘದಿಂದ ಒತ್ತಾಯ.

ಸರ್ಕಲ್ ಇನ್ಸ್ಪೆಕ್ಟರ್ ಜಗದೀಶ್ ಮೇಲೆ ಕ್ರಮಕ್ಕೆ ಪತ್ರಕರ್ತರ ಸಂಘದಿಂದ ಒತ್ತಾಯ.

* ಪತ್ರಕರ್ತರ ಮೇಲೆ ಸುದ್ದಿ ಶಿರೋನಾಮೆ ವ್ಯತ್ಯಾಸ ದೂರು ದಾಖಲಿಸಲು ಮುಂದಾಗಿರುವ ಇನ್ಸ್ಪೆಕ್ಟರ್ ಜಗದೀಶ್.

ಸಕಲೇಶಪುರ: ಸುದ್ದಿಗೋಷ್ಠಿಯಲ್ಲಿ ನಡೆಸಿದ ಸುದ್ದಿಯಲ್ಲಿ ಶಿರೋನಾಮೆ ವ್ಯತ್ಯಾಸ ಇರುವುದಾಗಿ ವ್ಯಕ್ತಿಯೊಬ್ಬ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪತ್ರಕರ್ತರನ್ನು ಠಾಣೆಗೆ ಕರೆಸಿ ಉಡಾಪೆಯಿಂದ ವರ್ತಿಸಿರುವ

ಸರ್ಕಲ್ ಇನ್ಸ್ಪೆಕ್ಟರ್ ಜಗದೀಶ್ ಮೇಲೆ ಕ್ರಮ ಕೈಗೊಳ್ಳುವಂತೆ ತಾಲೂಕು ಕಾರ್ಯದ ಪತ್ರಕರ್ತರ ಸಂಘ ಒತ್ತಾಯಿಸಿದೆ.

ಕೆಲವು ದಿನಗಳ ಹಿಂದೆ ಎಂ ಬಿ ಸ್ವಾಮಿ ಎಂಬ ವ್ಯಕ್ತಿ, ಭೂ ವಿವಾದಕ್ಕೆ ಸಂಬಂಧಿಸಿದಂತೆ ಆತನ ಶಿರೋನಾಮೆಯಲ್ಲಿ ದಲಿತ ಮುಖಂಡ ಎಂದು ಪ್ರಕಟವಾಗಿತ್ತು, ತಾನು ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯಾಗಿದ್ದರು, ನನ್ನನ್ನು ದಲಿತ ಮುಖಂಡ ಎಂದು ಪ್ರಕಟಿಸಿರುವುದು ನನಗೆ ಅವಮಾನ ಮಾಡಿದಂತಾಗಿದೆ. ನನ್ನನ್ನು ಸಮಾಜ ಸೇವಕ ಎಂದು ಪ್ರಕಟಿಸಬೇಕಾಗಿತ್ತು ಎಂದು ಎಂ ಬಿ ಸ್ವಾಮಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

ಪ್ರಕರಣವನ್ನು ದಾಖಲು ಮಾಡಿಕೊಂಡಿರುವ ಸರ್ಕಲ್ ಇನ್ಸ್ಪೆಕ್ಟರ್ ಜಗದೀಶ್ ಪತ್ರಕರ್ತರನ್ನು ಠಾಣೆಗೆ ಕರೆಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪೊಪ್ಪಿಗೆ ಪತ್ರ ಬರೆದು ಕೊಡುವಂತೆ ತಿಳಿಸಿದ್ದಾರೆ. ಇದಕ್ಕೆ ಪತ್ರಕರ್ತರು ಒಪ್ಪದೇ ಪತ್ರಿಕಾ ಸೃಷ್ಟೀಕರಣ ನೀಡಿದರೆ ನಾವುಗಳು ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಆದರೆ ಇದಕ್ಕೆ ಒಪ್ಪದ ಜಗದೀಶ್ ಉಡಾಫೆಯಿಂದ ವರ್ತಿಸಿದ್ದಾರೆ.

ಪತ್ರಕರ್ತರ ಮೇಲೆ ಚುಲ್ಲಕ ಕಾರಣಕ್ಕೆ ದೂರುಗಳು ಬಂದಾಗ ತಾವುಗಳು ಪಡೆದುಕೊಂಡು ಪ್ರಕರಣ ದಾಖಲಿಸುವುದು ಸರಿಯಾದ ಕ್ರಮವಲ್ಲ ಎಂದು ಸಾಕಷ್ಟು ಸಮಜಾಯಿಸಿ ನೀಡಿ, ಕ್ರಿಮಿನಲ್ ಅಥವಾ ಇತರೆ ದೂರುಗಳು ದೂರುಗಳು ಬಂದಾಗ ತಾವು ಕ್ರಮ ತೆಗೆದುಕೊಳ್ಳಿ ಇದಕ್ಕೆ ನಮ್ಮ ಅಭ್ಯಂತರವಿಲ್ಲ ಆದರೆ ಇದು ಸುದ್ದಿಗೆ ಸಂಬಂಧಿಸಿದಂದೆ ಅದರಲ್ಲೂ ಶಿರೋನಾಮೆಗೆ ಸಂಬಂದಿಸಿದಂತೆ ದೂರುಗಳು ಬಂದಾಗ ಪ್ರಕರಣ ದಾಖಲಿಸಿದರೆ. ಪತ್ರಕರ್ತರು 

ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಬಹಳ ತೊಂದರೆ ಆಗುತ್ತದೆ ಎಂದು ಹೇಳಿದಾಗ. ಈ ಮಾತುಗಳನ್ನು ತಿರಸ್ಕರಿಸಿ ತಾವು ಹೋಗಬಹುದು ಬೇರೆಯವರಿಗೆ ಅವಕಾಶ ಮಾಡಿಕೊಡಿ ಎಂದು ಹೇಳಿದ್ದ ಕಳಿಸಿದ್ದಾರೆ. 

ಇಂದು ಈ ರೀತಿಯಾಗಿ ವರ್ತನೆ ಮಾಡಿರುವ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ತಾಲ್ಲೂಕು ಸಂಘ ದೂರು ನೀಡಿದೆ.

ಬಾಕ್ಸ್: ಸರ್ಕಾರಿ ಇನ್ಸ್ಪೆಕ್ಟರ್ ಜಗದೀಶ ರವರ ವರ್ತನೆ ಅತಿರೇಕ ವರ್ತನೆ ಇದೇನು ಮೊದಲಲ್ಲ.

 ಇತ್ತೀಚಿಗೆ ಹಲಸುಲಿಗೆ ಗ್ರಾಮದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಯತ್ನ ನಡೆದಿತ್ತು. ಇದನ್ನು ಸಂತ್ರಸ್ತೆ ಹೇಳಿಕೊಂಡಿದ್ದರು, ಸರಿಯಾದ ಹೇಳಿಕೆ ಪಡೆಯದೆ . ಬಟ್ಟೆ ಹರಿದ ಪ್ರಕರಣ ದಾಖಲಿಸಿದ್ದರು. ನಂತರ ಸಂತ್ರಸ್ತೆಯ ಮೇಲೆ ದೂರು ದಾಖಲಾಗಿಸಲಾಗಿದೆ. ಪಟ್ಟಣದಲ್ಲಿ 

ಮರಳು ದಂಧೆ, ಇಸ್ಪೀಟ್ ಕ್ಲಬ್ ಗಳು, ಮಟ್ಕಾ, ಬಹಿರಂಗವಾಗಿ ನಡೆಯುತ್ತಿದೆ. ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಅಧೋಗತಿಗೆ ಇಳಿದು ಹೋಗಿದೆ.

RELATED ARTICLES
- Advertisment -spot_img

Most Popular