ಸಕಲೇಶಪುರ : ರಥೋತ್ಸವದ ವೇಳೆ ಚಪ್ಪಲಿ ಧರಿಸಿ ತೇರು ಎಳೆದ ಕಾಂಗ್ರೆಸ್ ಮುಖಂಡರು.
ಸಾರ್ವಜನಿಕರಿಂದ ವ್ಯಾಪಕ ಖಂಡನೆ
ಸಕಲೇಶಪುರ : ಭಕ್ತಿ ಭಾವದ ಐತಿಹಾಸಿಕ ಸಕಲೇಶ್ವರ ಸ್ವಾಮಿ ರಥೋತ್ಸವದ ವೇಳೆ ಕೆಲ ಕಾಂಗ್ರೆಸ್ ಮುಖಂಡರು ಚಪ್ಪಲಿ ಧರಿಸಿಯೇ ತೇರು ಎಳೆಡಿರುವ ಘಟನೆ ನೆಡೆದಿದೆ.
ಭಾನುವಾರ ಸಕಲೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಸಂಧರ್ಭದಲ್ಲಿ ಸಕಲೇಶಪುರ, ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಮುರುಳಿ ಮೋಹನ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರಮುಡಿ ಚಂದ್ರು, ಮುಫಿಜ್ ಸೇರಿದಂತೆ ಕೆಲ ಕಾಂಗ್ರೆಸ್ ಮುಖಂಡರು ಪಾದರಕ್ಷೆ ಧರಿಸಿಕೊಂಡು ತೇರು ಎಳೆದಿರುವುದು ಖಂಡನೀಯ, ಈ ರೀತಿಯ ವರ್ತನೆ ಭಕ್ತರ ಮನಸ್ಸಿಗೆ ನೋವುಂಟು ಮಾಡಿದೆ. ಹಾಗೂ ಸಕಲೇಶ್ವರ ಸ್ವಾಮಿಗೆ ಅಪಮಾನ ಮಾಡಿದಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಲ್ ಇನ್ಸ್ಪೆಕ್ಟರ್ ಮಾದರಿಯಾಗಬೇಕು: ಸಕಲೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಮೂರು ದಿನದಿಂದ ಶೂ ಧರಿಸದೆ ಕರ್ತವ್ಯ ನಿರ್ವಹಿಸಿರುವುದು ಅವರಿಗೆ ದೇವರ ಮೇಲಿರುವ ಭಕ್ತಿಯನ್ನು ಎತ್ತಿ ತೋರಿಸುವಂತಿತ್ತು. ಸರ್ಕಲ್ ಇನ್ಸ್ಪೆಕ್ಟರ್ ನಡೆ ಕಾಂಗ್ರೆಸ್ ಮುಖಂಡರಿಗೆ ಮಾದರಿಯಾಗಬೇಕು ಎಂದು ಬಿಜೆಪಿ ಯುವ ಮುಖಂಡ ರಘು ಗೌಡ ಕುಟುಕಿದ್ದಾರೆ.