ಬಾಳ್ಳುಪೇಟೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಬಿ.ಬಿ ಲೋಕೇಶ್ ಅವಿರೋದವಾಗಿ ಆಯ್ಕೆ.
ಬೆಳಗೋಡು ಹೋಬಳಿ, ಬಾಳ್ಳುಪೇಟೆ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 5 ವರ್ಷದ ಅವಧಿಗೆ ನಿರ್ದೇಶಕರ ಆಯ್ಕೆಗೆ ಬುಧುವಾರ ಚುನಾವಣೆ ನಡೆಯಿತು.
ಒಟ್ಟು 13 ಜನ ಸದಸ್ಯ ಬಲದ ಸಹಕಾರ ಸಂಘಕ್ಕೆ 12 ಜನ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಪರಿಶಿಷ್ಟ ಪಂಗಡ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಹಿನ್ನಲೆಯಲ್ಲಿ 12 ಜನರು ಅವಿರೋಧದಿಂದ ನಿರ್ದೇಶಕರಾಗಿ ಆಯ್ಕೆಯಾದರು.
ಅಧ್ಯಕ್ಷರಾಗಿ ಬಿ .ಬಿ ಲೋಕೇಶ್ ನಿರ್ದೇಶಕರುಗಳಾಗಿ ಎಂ..ಬಿ ನಾಗೇಶ್ (ಮೆಣಸಮಕ್ಕಿ)ಎಂ. ಎಸ್ ಧರ್ಮಪ್ರಕಾಶ್ (ಹೊಸಗದ್ದೆ)ಎಂ.ಜಿ ಶಶಿಧರ್ (ಹೊಸಗದ್ದೆ)ಶ್ರೀ ವನಿತಾ ಶ್ರೀಧರ್ (ಬನವಾಸೆ) ಎಂ. ಎಂ ಸತ್ಯ ಪ್ರಕಾಶ್ (ಮೆಣಸಮಕ್ಕಿ) ಸಿ..ವಿ . ಕೊಮಲೇಶ್ (ಚಿಕ್ಕನಾಯಕನಹಳ್ಳಿ ) ಬಿ ಹೆಚ್ ಶಂಭುಲಿಂಗ(ಬಾಳ್ಳುಪೇಟೆ) ವಿಕ್ರಂ ಸಕ್ಷಾಲ್( ಬನವಾಸೆ) ಆನಂದ್ ಮೂರ್ತಿ (ರಾಜೇಂದ್ರಪುರ) ವೀಣಾ ಚಂದ್ರಶೇಖರ್ (ರಾಜೇಂದ್ರಪುರ) ದೃಶ್ಯ ಮಣಿ ರವಿ (ಹಳೆಕೆರೆ)ಅವಿರೋಧವಾಗಿ ಆಯ್ಕೆಯಾದ ನೂತನ ನಿರ್ದೇಶಕರಾಗಿದ್ದಾರೆ.
ಈ ವೇಳೆ ಕಳೆದ 9 ವರ್ಷಗಳಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಇಂದು ಪುನಃ ಅಧ್ಯಕ್ಷ ರಾಗಿ ಆಯ್ಕೆಯಾದ ಬಿ.ಬಿ ಲೋಕೇಶ್ ಮಾತನಾಡಿ, ಸಂಘದ ಎಲ್ಲ ನಿರ್ದೇಶಕರನ್ನು ವಿಶ್ವಾಸಕ್ಕೆ ಪಡೆದು ಕೆಲಸ ಮಾಡಲಾಗುವುದು. ಅಲ್ಲದೆ ಸರ್ಕಾರದಿಂದ ಹಾಲು ಉತ್ಪಾದಕರಿಗೆ ಸಿಗುವ ಸವಲತ್ತುಗಳನ್ನು ಸಮರ್ಪಕವಾಗಿ ಸಿಗುವಂತೆ ಮಾಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣಾಧಿಕಾರಿಯಾಗಿ ಸಹಕಾರ ಸಂಘಗಳ ಸಹಾಯಕ ನಿರ್ದೇಶಕ ಕುಮಾರ್ ನಿರ್ವಹಿಸಿದರು. ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಪ್ರಕಾಶ್ ಮೆಣಸಮಕ್ಕಿ ಉಪಸ್ಥಿತರಿದ್ದರು.