ಸಕಲೇಶ್ವರ ಸ್ವಾಮಿ ರಥೋತ್ಸವಕ್ಕೆ ಸಹಕರಿಸಿದ ಸರ್ವರಿಗೂ ಅಭಿನಂದನೆ ಸಲ್ಲಿಸಿದ ಶಾಸಕ ಸಿಮೆಂಟ್ ಮಂಜುನಾಥ್.
ಶಾಸಕರ ಕಾರ್ಯಕ್ಕೆ ವ್ಯಾಪಕ ಜನಮನ್ನಣೆ
ಸಕಲೇಶಪುರ : ಐತಿಹಾಸಿಕ ಸಕಲೇಶ್ವರ ಸ್ವಾಮಿ ರಥೋತ್ಸವ ಹಾಗೂ 66ನೇ ದನಗಳ ಜಾತ್ರೆ ಹಾಗೂ ವಸ್ತು ಪ್ರದರ್ಶನ ಯಶಸ್ವಿಯಾಗಿ ಸಾಕಾರಗೊಂಡಿದ್ದಕ್ಕೆ ಶಾಸಕ ಸಿಮೆಂಟ್ ಮಂಜುನಾಥ್ ನ ಸರ್ವರಿಗೂ ಅಭಿನಂದನೆ ಸಲ್ಲಿಸಿದ್ದಾರೆ.
ಇಂದಿನ ಬ್ರಹ್ಮ ರಥೋತ್ಸವಕ್ಕೆ ಬೆಳಿಗ್ಗೆ 11 ಗಂಟೆಗೆ ಸಿವಿಲ್ ನ್ಯಾಯಾಧೀಶ ಧನ
ಲಕ್ಷ್ಮಿ ಉಪವಿಭಾಗಾಧಿಕಾರಿ ಶ್ರುತಿ, ತಹಸೀಲ್ದಾರ್ ಮೇಘನಾ ಜೊತೆಗೂಡಿ ಚಾಲನೆ ನೀಡಿದರು. ಪಟ್ಟಣದ ಬ್ರಾಹ್ಮಣರ ಬೀದಿಯಿಂದ ಪ್ರಾರಂಭಗೊಂಡ ರಥೋತ್ಸವ ನಗರದ ಪ್ರಮುಖ ಬಿಎಂ ರಸ್ತೆಯಲ್ಲಿ ಸಾಗಿ ನಂತರ ಸಕಲೇಶಪುರ ಸ್ವಾಮಿ ದೇವಸ್ಥಾನದ ಬಳಿ ಬಂದು ಸಂಪನ್ನಗೊಂಡಿತು.
ನಂತರ ಮಾತನಾಡಿದ ಶಾಸಕ ಸಿಮೆಂಟ್ ಮಂಜುನಾಥ್, ರಥೋತ್ಸವದ ವೇಳೆ ಈ ಬಾರಿ ರಥೋತ್ಸವಕ್ಕೆ, ಪುರಸಭೆಯ ಎಲ್ಲ ಸದಸ್ಯರು, ಪುರಸಭಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ, ತಾಲೂಕು ಆಡಳಿತ, ತಾಲೂಕಿನ ಎಲ್ಲಾ ಸಂಘ ಸಂಸ್ಥೆಗಳಿಗೂ, ಕನ್ನಡ ಪರ ಸಂಘಟನೆಗಳು, ನಗರದ ಸಮಸ್ತ ಜನತೆಗೂ ರಥೋತ್ಸವ ಯಶಸ್ವಿಯಾಗಿ ಕೊನೆಗೊಂಡಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದೇನೆ.ಯಾವುದೇ ಅಹಿತಕರ ಘಟನೆ ನಡೆದಂತೆ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟ ಪೊಲೀಸ್ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳಿಗೂ ಧನ್ಯವಾದ ಅರ್ಪಿಸುತ್ತಿದ್ದೇನೆ. ಮುಂದೆ ಕೂಡ ತಾಲೂಕಿನ ಅಭಿವೃದ್ಧಿ ಕಾರ್ಯಗಳಿಗೆ ನಿಮ್ಮಗಳ ಸಹಕಾರ ಇದೇ ರೀತಿ ಇರಲಿ ಎಂದು ಹೇಳಿದರು. 66ನೇ ವಸ್ತು ಪ್ರದರ್ಶನಕ್ಕೆ ಉಚಿತ ಸ್ಥಳವಕಾಶ ನೀಡಿದ ಡಿ. ಕೆ ಡೆವೆಲಪರ್ಸ್ ಮಾಲೀಕರಾದ ಕರುಣಾಕರ್ ಹಾಗೂ ಆರ್ ಎಲ್ ದೇವರಾಜ್ ರವರಿಗೂ ಧನ್ಯವಾದ ಅರ್ಪಿಸಿದರು.