ಸಕಲೇಶಪುರ : ಬಗರ್ ಹುಕುಂ ಕಮಿಟಿಯ ಸದಸ್ಯರು ಹಾಗೂ ಅಲುವಳ್ಳಿ ಗ್ರಾಮಸ್ಥರಿಂದ ತಹಸೀಲ್ದಾರ್ ಗೆ ಮನವಿ.
ಸಾಗುವಳಿ ಚೀಟಿ ವಿತರಣೆಗೆ ರೈತರ ಅಗ್ರಹ.
ಸಕಲೇಶಪುರ: ಅಕ್ರಮ ಭೂ ಸಾಗುವಳಿ ಸಮೀಕರಣ ಸಮಿತಿಯಲ್ಲಿ ದಾಖಲೆ ಮಂಜೂರಾಗಿ ಹಲವಾರು ವರ್ಷಗಳು ಕಳೆದಿದ್ದರೂ ಕೂಡ ಇದುವರೆಗೂ ಸಾಗುವಳಿ ಚೀಟಿ ವಿತರಣೆ ಆಗದೆ ಇರುವುದರಿಂದ ಕಸಬಾ ಹೋಬಳಿ, ಆಲವಳ್ಳಿ ಗ್ರಾಮದ ಎಂಟು ಜನ ರೈತರು ಸಕಲೇಶಪುರ ತಹಸೀಲ್ದಾರ್ ರವರನ್ನು ಭೇಟಿ ಮಾಡಿ ಆದಷ್ಟು ಬೇಗ ಸಾಗುವಳಿ ಚೀಟಿಯನ್ನ ವಿತರಿಸಬೇಕೆಂದು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ರವರನ್ನು ಭೇಟಿ ಮಾಡಿದ. ಬಗರ್ ಹುಕುಂ ಕಮಿಟಿಯ ಸದಸ್ಯರಾದ.ಡಿ .ರಾಜ್ ಕುಮಾರ್ ಮತ್ತು ಮಾಸವಳ್ಳಿ ಚಂದ್ರುರವರು ಆದಷ್ಟು ಶೀಘ್ರ ಬಗರ್ ಹುಕುಂ ಸಮಿತಿ ಸಭೆಯನ್ನು ಕರೆದು ಕಾನೂನು ಬದ್ಧವಾಗಿರುವುದತಕ್ಕ ಅರ್ಜಿಗಳನ್ನು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಹಲವಾರು ವರ್ಷಗಳಿಂದ ಸಕಲೇಶಪುರದಲ್ಲಿ ರೈತರಿಗೆ ಭೂ ಮಂಜೂರಾತಿ ಬಗ್ಗೆ ಸರ್ಕಾರಿ ಕಚೇರಿಗೆ ಅಲೆದು ಬೇಸತ್ತು ಹೋಗಿದ್ದಾರೆ . ಇದುವರೆಗೂ ಸಕಲೇಶಪುರದಲ್ಲಿ ಅಕ್ರಮ ಸಕ್ರಮಕ್ಕೆ ಅರ್ಜಿ ಹಾಕಿರುವಂತಹ ರೈತರು ಭೂ ಮಂಜೂರಾತಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆದ್ದರಿಂದ ಅತಿ ಶೀಘ್ರದಲ್ಲಿ ಸಭೆ ಕರೆದು ಚರ್ಚಿಸಿ ಶೀಘ್ರ ಕಡತ ವಿಲೇವಾರಿ ಮಾಡಲು ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ತಾಲೂಕಿನ ಭೂ ಮಂಜೂರಾತಿಗೆ ಕಾನೂನು ಬದ್ಧವಾದ ಎಲ್ಲ ಕಡತ ಗಳನ್ನು ಇತ್ಯರ್ಥ ಮಾಡಲು ಕೂಡಲೇ ಬಗರ್ ಹುಕುಂ ಸಮಿತಿ ಸಭೆ ದಿನಾಂಕ ನಿಗದಿ ಪಡಿಸಲು ಕ್ರಮವಹಿಸಲು ತಹಸೀಲ್ದಾರ್ ಮೇಘನಾ ಅವರಿಗೆ ಕೋರಲಾಯಿತು ಮತ್ತು ಸ್ಥಳ ಪರಿಶೀಲನೆ ಮಾಡಿ ವರದಿ ನೀಡಲು ತಿಳಿಸಲಾಯಿತು.