ಸಕಲೇಶಪುರ : ಬೆಂಕಿ ಕಿಡಿಗೆ ಹೊತ್ತಿ ಉರಿದ ಕಾಫಿ ತೋಟ
ಬೆಂಕಿ ನಂದಿಸಿದ ಅಗ್ನಿಶಾಮಕದಳದ ಸಿಬ್ಬಂದಿಗಳು.
ಸಕಲೇಶಪುರ : ಆಕಸ್ಮಿಕವಾಗಿ ಕಾಫಿ ತೋಟಕ್ಕೆ ಬೆಂಕಿ ತಗುಲಿ ನೂರಾರು ಕಾಫಿ ಗಿಡಗಳು ಬಸ್ಮವಾದ ಘಟನೆನೆಡೆದಿದೆ.
ತಾಲೂಕಿನ ಬೆಳಗೋಡು ಹೋಬಳಿ ಮೂಗಲಿ ಗ್ರಾಮದ ನಂಜಪ್ಪ ಶೆಟ್ಟಿ ಎಂಬುವರಿಗೆ ಸೇರಿದ ಕಾಫಿ ತೋಟಕ್ಕೆ ಇಂದು ಸಂಜೆ 4:30 ರ ವೇಳೆಗೆ ಬೆಂಕಿ ತಗುಲಿ ನೂರಾರು ಕಾಫಿ ಗಿಡಗಳು ಬೆಂಕಿಗಾವತಿಯಾಗಿವೆ. ಬೆಂಕಿ ಕೆನ್ನೆಲ್ಗೆ ಹೆಚ್ಚಾಗುತ್ತಿದ್ದಂತೆ ಸ್ಥಳೀಯರು ಅಗ್ನಿಶಾಮಕ ಠಾಣೆಗೆ ಕರೆ ಮಾಡಿದ್ದರಿಂದ ಸಕಾಲದಲ್ಲಿ ಆಗಮಿಸಿದ ಅಗ್ನಿಶಾಮಕ ದಳದ ಅಧಿಕಾರಿ ರಾಜು ನೇತೃತ್ವದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೂ ಕೂಡ ನೂರಾರು ಕಾಫಿ ಗಿಡಗಳು ಬೆಂಕಿಯ ಜ್ವಾಲೆಗೆ ಸುಟ್ಟು ಕರಕಲಾಗಿದ್ದು ಮಾಲೀಕರು ಹತಾಶಗೊಂಡಿದ್ದಾರೆ.