ಪ್ರಸವದ ವೇಳೆ ಅಧಿಕ ರಕ್ತಸ್ರಾವ ಗ್ರಾಮ ಲೆಕ್ಕಾಧಿಕಾರಿ ಸಾವು
ಸಕಲೇಶಪುರದ ಕ್ಯಾನಹಳ್ಳಿ ವಲಯದಲ್ಲಿ ಕರ್ತವ್ಯ ನಿರ್ವಹಿಸಿದ್ದ ರಾಜೇಶ್ವರಿ.
ಸಕಲೇಶಪುರ :ತಾಲೂಕಿನ ಕ್ಯಾನಹಳ್ಳಿ ವಲಯದಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ರಾಜೇಶ್ವರಿ ಪ್ರಸವ ಸಮಯದಲ್ಲಿ ಅಧಿಕ ರಕ್ತಸ್ರಾವವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹೊಸದುರ್ಗ ಮೂಲದ ರಾಜೇಶ್ವರಿ (26) ತಾಲೂಕಿನಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಹಾಗೂ ತಾಲೂಕು ಕಚೇರಿಯಲ್ಲಿ ಮೂರು ವರ್ಷಗಳಿಂದ ನಿರ್ವಹಿಸಿದ್ದರು. ಇತ್ತೀಚಿಗಷ್ಟೇ ಹೊಸದುರ್ಗ ತಾಲೂಕಿಗೆ ನಿಯುಕ್ತಿಗೊಂಡಿದ್ದರು. ಈಗಾಗಲೇ ರಾಜೇಶ್ವರಿ ಅವರಿಗೆ ಮೊದಲನೇ ಮಗುವಿದ್ದು ಎರಡನೇ ಮಗುವಿನ ಹೆರಿಗೆ ಸಮಯದಲ್ಲಿ ಅಧಿಕ ರಕ್ತಸ್ರಾವದಿಂದ ರಕ್ತದೊತ್ತಡದಲ್ಲಿ ಏರುಪೇರಾಗಿ ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ರಾಜೇಶ್ವರಿ ನಿಧನಕ್ಕೆ ಸಕಲೇಶಪುರ ತಾಲೂಕಿನ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ನೌಕರರು, ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿಗಳು ಸಂತಾಪ ಸೂಚಿಸಿದ್ದಾರೆ.