ಬಜೆಟ್ ನಲ್ಲಿ ಸಕಲೇಶಪುರ ಕ್ಷೇತ್ರ ಕಡೆಗಣನೆ ಶಾಸಕ ಸಿಮೆಂಟ್ ಮಂಜು.
ನಾಲೆಗಳ ದುರಸ್ಥಿ ಕುರಿತು ಗಮನ ಸೆಳೆದಿದ್ದರು ಬಿಡುಗಾಸು ನೀಡದ ಕಾಂಗ್ರೆಸ್ ಸರ್ಕಾರದ ವಿರುದ್ಧ ಶಾಸಕರ ಅಸಮಾಧಾನ.
ಸಕಲೇಶಪುರ : ಈ ಬಾರಿಯ ಬಜೆಟ್ ನಲ್ಲಿ ಮಲೆನಾಡು ಹಾಗೂ ಅರೆ ಮಲೆನಾಡು ಕ್ಷೇತ್ರವಾದ ಸಕಲೇಶಪುರ, ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರವನ್ನು ಕಡೆಗಣಿಸಲಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಅಸಮಾಧಾನ ಹೊರ ಹಾಕಿದ್ದಾರೆ.
ಸುಮಾರು ಮೂರು ಗಂಟೆಗು ಹೆಚ್ಚು ಕಾಲ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ 3.71 ಲಕ್ಷ ಕೋಟಿಯ ಬಜೆಟ್ ನಲ್ಲಿ ಕ್ಷೇತ್ರಕ್ಕೆ ಬಿಡಿಗಾಸು ನೀಡದೆ ಇರುವುದು ವಿಪರ್ಯಾಸ ಎಂದಿದ್ದಾರೆ.
ನನ್ನ ಕ್ಷೇತ್ರ ಮಲೆನಾಡು ಹಾಗೂ ಅರೆ ಮಲೆನಾಡಿನಿಂದ ಕೂಡಿದ್ದು 224 ವಿಧಾನಸಭಾ ಕ್ಷೇತ್ರಗಳ ಪೈಕಿ ಅತಿ ದೊಡ್ಡ ಕ್ಷೇತ್ರವಾಗಿದ್ದು ಬಜೆಟ್ ನಲ್ಲಿ ಕಡೆಗಣಿಸಿರುವುದು ಕಾಂಗ್ರೆಸ್ ಸರ್ಕಾರ ಕ್ಷೇತ್ರ ಜನರಿಗೆ ಮಾಡಿರುವ ದ್ರೋಹವಾಗಿದೆ. ಒಟ್ಟಾರೆ ಇಡೀ ಜಿಲ್ಲೆಗೆ ಬಜೆಟ್ ನಲ್ಲಿ ಕಾಂಗ್ರೆಸ್ ಕೊಡುಗೆ ಶೂನ್ಯವಾಗಿದೆ ಎಂದರು.
ಯಗಚಿ, ವಾಟೆಹೊಳೆಯ ನೀರು ಹರಿಯುವ ಕಾಲುವೆಗಳನ್ನು ದುರಸ್ತಿಗೊಳಿಸುವಂತೆ ಪ್ರಸಕ್ತ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದಿದ್ದರು ನಾಲೆಗಳ ದುರಸ್ತಿಗೆ ಬಿಡಿಗಾಸು ನೀಡದೆ ರೈತರನ್ನು ವಂಚಿಸಿದೆ. ಕಾಡಾನೆ ಹಾವಳಿಯಿಂದ ಈಗಾಗಲೇ ಕ್ಷೇತ್ರದ ರೈತರು, ಬೆಳೆಗಾರರು ನಲುಗಿ ಹೋಗಿದ್ದಾರೆ ಕಾಡಾನೆ ನಿಯಂತ್ರಣಕ್ಕೆ ಈ ಸರ್ಕಾರದಿಂದ ಯಾವುದೇ ಹಣ ಬಿಡುಗಡೆ ಮಾಡದಿರುವುದು ನೋಡಿದರೆ ರೈತರು ಹಾಗೂ ಕಾಫಿ ಬೆಳೆಗಾರರ ಮೇಲೆ ಸರ್ಕಾರಕ್ಕೆ ಯಾವುದೇ ಕಾಳಜಿ ಇಲ್ಲ ಎಂದೇನಿಸಿದೆ.
ಕಾಫಿ ಬೆಳೆಗಾರರ ಬಹುದಿನಗಳ ಬೇಡಿಕೆಯಾದ ವಿದ್ಯುತ್ ಶುಲ್ಕದ ಮೇಲಿರುವ ಬಡ್ಡಿಯನ್ನು ಮನ್ನಾ ಮಾಡುವಂತೆ ಹಲವಾರು ಬಾರಿ ಸರ್ಕಾರವನ್ನು ಒತ್ತಾಯಿಸಿದರು ಪ್ರಯೋಜನವಾಗಿಲ್ಲ ಒಟ್ಟಾರೆಯಾಗಿ ಈ ಬಾರಿಯ ಬಜೆಟ್ ನಿಂದ ಜಿಲ್ಲೆಯ ಹಾಗೂ ಕ್ಷೇತ್ರದ ಜನರಿಗೆ ಅನ್ಯಾಯವಾಗಿದೆ ಎಂದು ತಿಳಿಸಿದರು.