Saturday, November 23, 2024
Homeಸುದ್ದಿಗಳುಸಕಲೇಶಪುರಬಿಜೆಪಿ ಮಹಿಳಾ ಘಟಕದಿಂದ ಪ್ರವಾಸ. ಕೇಂದ್ರದ ಯೋಜನೆಗಳ ಮಾಹಿತಿ 

ಬಿಜೆಪಿ ಮಹಿಳಾ ಘಟಕದಿಂದ ಪ್ರವಾಸ. ಕೇಂದ್ರದ ಯೋಜನೆಗಳ ಮಾಹಿತಿ 

ಬಿಜೆಪಿ ಮಹಿಳಾ ಘಟಕದಿಂದ ಪ್ರವಾಸ. ಕೇಂದ್ರದ ಯೋಜನೆಗಳ ಮಾಹಿತಿ

 

ಸಕಲೇಶಪುರ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಮೋರ್ಚಾದಿಂದ ಪ್ರವಾಸ ಹಮ್ಮಿಕೊಳ್ಳಗಿದೆ ಎಂದು ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಸುನೀತಾ ಜಗದೀಶ್ ತಿಳಿಸಿದರು.

ರಾಷ್ಟ್ರೀಯ ಅಧ್ಯಕ್ಷೆ ವಾಣಿತಿ ಶ್ರೀನಿವಾಸ್ ಸೂಚನೆಯಂತೆ ರಾಜ್ಯಾಧ್ಯಕ್ಷ ಮಂಜುಳಾ ನೇತೃತ್ವದಲ್ಲಿ 25 ಜಿಲ್ಲೆಗಳಲ್ಲಿ ವಿವಿಧ ತಂಡಗಳಾಗಿ  ವಿವಿಧ ಇಲಾಖೆಗಳ  ಕುಂದು ಕೊರತೆಗಳ ಬಗ್ಗೆ  ಅಧ್ಯಯನ ನಡೆಸಿ  ವರದಿ ನೀಡಲಾಗುವುದು ಎಂದು  ತಿಳಿಸಿದರು.

ಮಂಗಳವಾರ ಪಟ್ಟಣಕ್ಕೆ ಆಗಮಿಸಿದ ಮಹಿಳಾ ಮೋರ್ಚಾದ ತಂಡ ಎಂ. ಕೆ ಗಣಪಯ್ಯ ಶ್ರವಣದಶವುಳ್ಳ ಮಕ್ಕಳ ಶಾಲೆಗೆ ಭೇಟಿ ನೀಡಿ ಮಕ್ಕಳ ಶಿಕ್ಷಣದ ಗುಣಮಟ್ಟ ಮಕ್ಕಳ ಕ್ರಿಯಾಶೀಲತೆ  ಹಾಗೂ  ಶಾಲೆಯಲ್ಲಿ ಶ್ರವಣದ ಸೌಲಭ ಮಕ್ಕಳಿಗೆ  ಕಲ್ಪಿಸಿರುವ ವ್ಯವಸ್ಥೆಗಳ ಬಗ್ಗೆ  ಅಧ್ಯಯನ ನಡೆಸಿದರು. ನಂತರ ಶಾಲೆಯ ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಿ  ವರದಿ ಪಡೆದುಕೊಂಡಿರುವ. ನಂತರ ತಾಲೂಕಿನ ಬಾಗೇ ಗ್ರಾಮದ ಅರಸು ನಗರದಲ್ಲಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ  ಫಲಾನುಭವಿಗಳ  ಸಭೆ ನಡೆಸಿದರು. ಈ ವೇಳೆ ಮಾತನಾಡಿದ  ರಾಜ್ಯ ಉಪಾಧ್ಯಕ್ಷ ಸುನಿತಾ ಜಗದೀಶ್,ರಾಜ್ಯ ಸರ್ಕಾರದ ಗ್ಯಾರಂಟಿಗಳೆಲ್ಲ ವಿಫಲವಾಗಿವೆ. ಶೇ.೧೦ ರಷ್ಟು ಫಲಾನುಭವಿಗಳನ್ನು ಅದು ತಲುಪಿಲ್ಲ. ಮುಖ್ಯಮಂತ್ರಿಗಳು ರಾಷ್ಟ್ರಪತಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉರುಳುವುದು ದೂರವಿಲ್ಲ. ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ೨೮ ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ. ಮಹಿಳಾ ಮೋರ್ಚಾದ ತನ್ನದೇ ಆದ ಪಾತ್ರವನ್ನು ಚುನಾವಣೆಯಲ್ಲಿ ಬಲಿಷ್ಟವಾಗಿ ಹೊಂದಿದೆ ಎಂದರು.ಕೇಂದ್ರದ ಮೋದಿ ಸರಕಾರ ದೇಶದ ಮಹಿಳೆಯರಿಗಾಗಿ ಹಲವು ವಿಶೇಷ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇದರ ಅಡಿಯಲ್ಲಿ ಮಹಿಳೆಯರಿಗೆ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ ಇದರ ಸದುಪಯೋಗವನ್ನು ಮಹಿಳೆಯರು ಪಡೆದುಕೊಳ್ಳುವಂತೆ ಕರೆ ನೀಡಿದರು.

 

ವಲಯ ಉಸ್ತುವಾರಿಯಾಗಿರುವ ಆಂಧ್ರ ಪ್ರದೇಶದ ಬಿ. ಉಮಾ ಮಹೇಶ್ವರಿ ಮಾತಾನಾಡಿ, ಎರಡು ಸಂಘಟನಾ ಪ್ರವಾಸದಲ್ಲಿ ಫೆ.12 ರಂದು ಐತಿಹಾಸಿಕ ಸ್ಮಾರಕಗಳು ಅಥವಾ ದೇವಸ್ಥಾನಗಳ ಭೇಟಿ ಆಶಾ ಕಾರ್ಯಕರ್ತರ ಅಂಗನವಾಡಿ ಕಾರ್ಯಕರ್ತರ ಜೊತೆಗೆ ಸಂವಾದ ಶಾಲಾ ಕಾಲೇಜುಗಳಲ್ಲಿ ಯುವ ಮತದಾರರ ಭೇಟಿ ಮಹಿಳಾ ಕಾರ್ಯಕರ್ತರ ಮನೆಯಲ್ಲಿ ಭೋಜನ ಫಲಾನುಭವಿಗಳ ಜೊತೆ ಸೆಲ್ಫಿ ಬೂತ್ ಮಟ್ಟದಲ್ಲಿ ಸಭೆ ನಡೆಸಲಾಗಿದೆ. ಎರಡನೇ ದಿನವಾದ ಫೆ.13 ಸರ್ಕಾರಿ ಶಾಲಾ ಕಾಲೇಜುಗಳ ಭೇಟಿ, ಜಿಲ್ಲಾ ಪದಾಧಿಕಾರಿಗಳ ಸಭೆ ಎನ್‌ಜಿಒ ಹಾಗೂ ಸ್ವಯಂ ಸೇವಕ ಜೊತೆ ಸಂವಾದ ಎಸ್ಸಿ ಎಸ್ಟಿ ಮಹಿಳಾ ಕಾರ್ಯಕರ್ತರ ಮನೆಯಲ್ಲಿ ಊಟ ಹಿರಿಯ ಮಹಿಳೆ ಕಾರ್ಯಕರ್ತರೊಂದಿಗೆ ಸಭೆ ಸಭೆ ನಡೆಸಲಾಗಿದ್ದು  ಇದರ ಸಂಪೂರ್ಣ ಅವರೇ ವರದಿಯನ್ನು ರಾಜ್ಯ ಘಟಕಕ್ಕೆ ತಲುಪಿಸಲಾಗುವುದು ಎಂದು ತಿಳಿಸಿದರು.

 

ಈ ಸಂಧರ್ಭದಲ್ಲಿ ಎಂ.ಕೆ ಗಣಪಯ್ಯ ಶ್ರವಣದೋಷವುಳ್ಳ ಶಾಲೆಯ ವಿದ್ಯಾರ್ಥಿಗಳಿಗೆ ಕಲಿಕಾ ಸಲಕರಣೆಗಳು ಹಾಗೂ ಹಣ್ಣುಹಪ್ಪಲು ವಿತರಿಸಿದರು.

ಈ ಸಂದರ್ಭದಲ್ಲಿ ತಾಲೂಕು ಮಹಿಳಾ ಘಟಕದ  ಅಧ್ನಕ್ಷೆ ನೇತ್ರಾವತಿ ಮಂಜುನಾಥ್, ಶಾಸಕ ಸಿಮೆಂಟ್ ಮಂಜುನಾಥ್ ಪತ್ನಿ ಪ್ರತಿಭಾ ಮಂಜು ಜಿಲ್ಲಾಧ್ಯಕ್ಷೆ ರತ್ನ ಪ್ರಕಾಶ್ ,ಉಪಾಧ್ಯಕ್ಷರಾದ ಅಂಬಿಕಾ, ಚಂದ್ರಕಲಾ 

ಜಿಲ್ಲಾ ಪ್ರಧಾನ ಕಾರ್ಯದರ್ಶಿ ತುಳಿಸಿ,ದಿವ್ಯ, ಉದಯ್,ಬೇಲೂರು ತಾಲೂಕು ಅಧ್ಯಕ್ಷೆ ಶೋಭಾ,ತಾಲೂಕು ಬಿಜೆಪಿ ಮಹಿಳಾ ಘಟಕದ, ವನಜಾಕ್ಷಿ, ಬಬಿತ ವಿಶ್ವನಾಥ್,ರೇಖಾ ವಿರೂಪಾಕ್ಷ ಹಾಗೂ ಬಾಳ್ಳುಪೇಟೆ ಗ್ರಾಪಂ ಸದಸ್ಯೆ ಶೋಭಾ ಸೇರಿದಂತೆ ಮುಂತಾದವರಿದ್ದರು.

RELATED ARTICLES
- Advertisment -spot_img

Most Popular