ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ಕಾಡಾನೆ ದಾಳಿ: ಇಬ್ಬರಿಗೆ ಗಾಯ
ಸಕಲೇಶಪುರ: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ಕಾಡಾನೆಯೊಂದು ದಾಳಿ ನಡೆಸಿದ್ದು ಇಬ್ಬರು ಗಾಯಗೊಂಡರೆ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಮತ್ತಿಬ್ಬರು ಪಾರಾಗಿರುವ ಘಟನೆ ತಾಲೂಕಿನ ಹೊಸಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ವಸಂತ್ (52), ತಿಮ್ಮೇಗೌಡ ಗಾಯಗೊಂಡ ವ್ಯಕ್ತಿಗಳಾಗಿದ್ದು ಶಾಂತಪ್ಪ, ಲೋಕೇಶ್ ಪ್ರಾಣಾಪಾಯದಿಂದ ಪಾರಾದವರಾಗಿರುತ್ತಾರೆ. ತಾಲ್ಲೂಕಿನ, ಹೊಸಕೊಪ್ಪಲು ಗ್ರಾಮದಲ್ಲಿ ದನಗಳನ್ನು ಮೇಯಿಸಿಕೊಂಡು ಕುಳಿತಿದ್ದ ತಿಮ್ಮೇಗೌಡ, ಶಾಂತಪ್ಪ, ಲೋಕೇಶ್ ಎಂಬುವರ ಮೇಲೆ ಏಕಾಏಕಿ ನರಹಂತಕ ಕರಡಿ ಕಾಡಾನೆ ದಾಳಿ ನಡೆಸಿದ್ದು ಕಾಡಾನೆಯಿಂದ ತಪ್ಪಿಸಿಕೊಳ್ಳಲು ಸಮೀಪದ ಕಾಫಿ ತೋಟದೊಳಗೆ ಮೂವರು ಓಡಿಹೋಗಿರುತ್ತಾರೆ. ಈ ಸಂದ‘ರ್ದಲ್ಲಿ ಮೂವರನ್ನು ಬಿಟ್ಟು ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವಸಂತ್ ಮೇಲೆ ನರಹಂತಕ ಒಂಟಿಸಲಗ ಕರಡಿ ದಾಳಿ ನಡೆಸಿರುತ್ತದೆ.ವಸಂತ್ ಎಂಬುವರನ್ನು ಸೊಂಡಿಲಿನಿಂದ ಕಾಡಾನೆ ಎಸೆದಿದ್ದು
ತಂತಿ ಬೇಲಿ ಮೇಲೆ ಬಿದ್ದು ವಸಂತ್ ಗಾಯಗೊಂಡಿರುತ್ತಾರೆ. ಕಾಡಾನೆಯಿಂದ ತಪ್ಪಿಸಿಕೊಳ್ಳುವಾಗ ತಿಮ್ಮೇಗೌಡ ಬಿದ್ದು ಗಾಯಗೊಂಡಿರುತ್ತಾರೆ. ಗಾಯಾಳು ವಸಂತ್ ಹಾಗೂ ತಿಮ್ಮೇಗೌಡರವರನ್ನು ಸಕಲೇಶಪುರ ಕ್ರಾರ್ಡ್‌ಗೆ ರವಾನೆ ಮಾಡಲಾಗಿದೆ.
ಬು‘ವಾರ ಕಲ್ಕುಂದ ಗ್ರಾಮದಲ್ಲಿ ಇಬ್ಬರ ಮೇಲೆ ದಾಳಿ ಇದೇ ಕರಡಿ ದಾಳಿ ನಡೆಸಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಗಾಯಾಳುಗಳನ್ನು ‘ೇಟಿ ಮಾಡಿ ಪರಿಶೀಲನೆ ಮಾಡುತ್ತಿದ್ದಾರೆ.