ಸಕಲೇಶಪುರ : ದೇಶದೆಲ್ಲೆಡೆ ಮೇಲು-ಕೀಳು ಜಾತಿ ಪದ್ಧತಿಯನ್ನು ಹೋಗಲಾಡಿಸುವ ಉದ್ದೇಶದಿಂದ ಬಲವಾದ ಸಂವಿಧಾನವನ್ನು ರಚಿಸಲಾಯಿತು. ಸಂವಿಧಾನ ಧ್ಯೇಯದಲ್ಲಿ ನಾವು ಬದುಕುತ್ತಿದ್ದು, ಅದರ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸಂವಿಧಾನ ಜಾಗೃತಿ ಜಾಥಾ ರಥವು ತಾಲೂಕಿನದ್ಯಂತ ಸಂಚಾರ ಮಾಡುತ್ತಿದ್ದು ಗುರುವಾರ ಹಾನುಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಪ್ರವೇಶ ಮಾಡಿತ್ತು.
ಸಂವಿಧಾನ ಜಾಗೃತಿ ರಥದೊಂದಿಗೆ ವಿವಿಧ ಇಲಾಖೆಯ ಅಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿ ಸಂವಿಧಾನ ಘೋಷವಾಕ್ಯದೊಂದಿಗೆ ಶೋಭಾಯಾತ್ರೆ ನಡೆಸಿದರು.
ಜಾಗೃತಿ ಜಾಥದ ರಥವನ್ನು ವೆಂಕಟಹಳ್ಳಿ ಸ್ವಾಗತ ಕಾಮಾನು ಬಳಿ ಸ್ವಾಗತಿಸಿ, ಗ್ರಾಮ ಪಂಚಾಯಿತಿಯಿಂದ ಪುಷ್ಪಮಾಲೆ ಅರ್ಪಿಸಿ, ನಾಸಿಕ್ ಡೋಲು, ಪೂರ್ಣಕುಂಭ ಸೇರಿದಂತೆ ವಿವಿಧ ಕಲಾತಂಡಗಳ ಜೊತೆ ಬರಮಾಡಿಕೊಳ್ಳಲಾಯಿತು. ಮೆರವಣಿಗೆಯಲ್ಲಿ 500ಕ್ಕೂ ಹೆಚ್ಚುಜನರು 100 ಕ್ಕೂ ಹೆಚ್ಚು ಬೈಕ್ ಜಾಥದ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು.
ಕಾರ್ಯಕ್ರಮದ ಅಧ್ಯಕ್ಷೆತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷ ಸಂತೋಷ್ ಅಧ್ಯಕ್ಷತೆ ವಹಿಸಿದ್ದರು
ಈ ಸಂಧರ್ಭದಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ರಾಮಕೃಷ್ಣ, ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಎಇಇ ಆಶಾಲತಾ, ಗ್ರಾಪಂ ಉಪಾಧ್ಯಕ್ಷರಾದ ಶ್ರೀಮತಿ ಶೈಲಾ ಸದಸ್ಯರಾದ ಮೋಹನ್ ಕುಮಾರ್ ಅಚ್ಚರಡಿ, ಸುರೇಶ್, ಯೋಗರಾಜು, ಶೋಭ, ಶಿಲ್ಪ, ವಿಮಲಾ ರಾಜಯ್ಯ, ಹರಿಣಾಕ್ಷಿ, ಮುಖಂಡರಾದ ಮಸ್ತಾರೆ ಲೋಕೇಶ್, ಹಳೆ ವಿದ್ಯಾರ್ಥಿ ಸಂಘದ ಚಂದ್ರಣ್ಣ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಎಂ. ಬಿ.ರಾಜೀವ್,ದಲಿತ ಸಂಘರ್ಷ ಸಮಿತಿ ಹೋಬಳಿ ಸಂಚಾಲಕರು ಶ್ರೀ ಗೋಪಾಲ್ ರೋಟರಿ ಅಧ್ಯಕ್ಷರಾದ ರಘು, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಅಣ್ಣು, ಮಜೀದ್, ಹುರುಡಿ ವಿಕ್ರಮ್ ಹಾಜರಿದ್ದರು.
ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೇಶಕ ರು ಸಮಾಜ ಕಲ್ಯಾಣ ಇಲಾಖೆ ಆನಂದ ಮೂರ್ತಿ, ಪಿಡಿಓ ಮತ್ತು ಸಹಾಯಕ ನಿರ್ದೇಶಕ ರು (ಪಂ.ರಾಜ್) ಹರೀಶ್ ಕೆ ಕಾರ್ಯದರ್ಶಿ ವೀಣಾ ಉಪತಹಶಿಲ್ದಾರ್ ಮಂಜುನಾಥ್, ಡಾ. ನಿಶ್ಚಯ್ ಸೇರಿದಂತೆ ಹಾನುಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವಧರ್ಮದ ಮುಖಂಡರು, ದಲಿತ ಸಂಘಟನೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಇದೆ ವೇಳೆ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತ್ತು. ಸಂವಿಧಾನ ಪೀಠಿಕೆ ಪ್ರಮಾಣ ಬೋದಿಸಲಾಯಿತು. ಕಾರ್ಯಕ್ರಮದಲ್ಲಿ ಎಲ್ಲರಿಗೂ ಲಘು ಉಪಹಾರ ವ್ಯವಸ್ಥೆ ಮಾಡಲಾಗಿತ್ತು.