ತಾಲೂಕಿನ ಹೊಂಗಡಹಳ್ಳ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ವನಜಾಕ್ಷಿ ಆಯ್ಕೆಯಾಗಿದ್ದು ತಾಂತ್ರಿಕ ಅಡಚಣೆಯ ಹಿನ್ನೆಲೆ ಸೋಮವಾರ ಅಧಿಕೃತವಾಗಿ ಘೋಷಣೆ ಮಾಡಲಾಗುವುದು ಎಂದು ತಿಳಿದು ಬಂದಿದೆ
ಚುನಾವಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಚುನಾವಣಾ ಅಧಿಕಾರಿ ಆದಿತ್ಯ ಮಧ್ಯಮದೊಂದಿಗೆ ಮಾತನಾಡಿ ಚುನಾವಣೆಗೆ ವನಜಾಕ್ಷಿ ಒಬ್ಬರೇ ನಾಮಪತ್ರ ಸಲ್ಲಿಸಿದರು. ಆರು ಜನ ಸದ್ಯಸರಲ್ಲಿ ಕೊರಂಗಾಗಿ ಮೂವರು ಸದಸ್ಯರ ಅಗತ್ಯತೆವಿತ್ತು, ಆದರೆ ಇಬ್ಬರು ಮಾತ್ರ ಹಾಜರಿದ್ದ ಕಾರಣ, ಅರ್ಧಗಂಟೆಗಳ ಕಾಲ ಹೆಚ್ಚುವರಿಯಾಗಿ ಸಮಯ ನೀಡಲಾಯಿತು ಆದರೆ ಯಾರು ಬಾರದೆ ಇರುವ ಕಾರಣ ಸೋಮವಾರ ಮತ್ತೆ ಸಭೆ ನಡೆಯಲಿದೆ. ಈ ಸಭೆಯಲ್ಲಿ ಅಭ್ಯರ್ಥಿಯ ಆಯ್ಕೆ ಯನ್ನು ಘೋಷಣೆ ಮಾಡಲಾಗಿದ್ದು ಸೋಮವಾರ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ನಿಯೋಜಿತ ಗ್ರಾ ಪಂ ಅಧ್ಯಕ್ಷೆ ವನಚಾಕ್ಷಿ, ಇಂದು ನನ್ನ ಅಧಿಕೃತ ಘೋಷಣೆಯಾಗಬೇಕಾಗಿತ್ತು, ಇದಕ್ಕೆ ಅಡಚಣೆ ಆಗಿದ್ದು ನಾನು ದಲಿತ ಮಹಿಳೆ ಆಗಿದ್ದು ಈ ಸ್ಥಾನವನ್ನು ಅಲಂಕರಿಸುವುದನ್ನ ನೋಡಲು ಸಾಧ್ಯವಾಗದ ರೀತಿಯ ಮನಸ್ಥಿತಿಯನ್ನ ಸದಸ್ಯರು ಹೊಂದಿದ್ದಾರೆ ಎಂದು ದುಃಖವನ್ನು ತೊಡಿಕೊಂಡರು.
ಕಾಂಗ್ರೆಸ್ ಮುಖಂಡ ಬಾಚಳ್ಳಿ ಪ್ರತಾಪ್ ಗೌಡ ಮಾತನಾಡಿ, ಹೊಂಗಡಹಳ್ಳ ಇತಿಹಾಸದಲ್ಲಿ ಗ್ರಾಮಪಂಚಾಯತಿಗೆ ಕಾಂಗ್ರೆಸ್ ಅಧ್ಯಕ್ಷರ ಸ್ಥಾನ ಇಂದು ದಕ್ಕಿದೆ. ಈ ದಿನ ಒಂದು ಐತಿಹಾಸಿಕ ದಿನ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಅಧ್ಯಕ್ಷರಾಗಿದ್ದಾರೆ. ಇದನ್ನು ಸಹಿಸದವರು ಗೈರು ಹಾಜರಾಗಿದ್ದಾರೆ ಆದರೆ ಸೋಮವಾರ ಅಧಿಕೃತವಾಗಿ ಘೋಷಣೆ ಆಗಲಿದೆ. ಹೊಗಡಹಳ್ಳ ಅಭಿವೃದ್ಧಿಯಲ್ಲಿ ಬಾಳಷ್ಟು ಹಿಂದಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು ಮುಖಾಂತರ ಈ ಕ್ಷೇತ್ರದ ಅಭಿವೃದ್ಧಿಗೆ ನಾನು ಸಹ ಕೂಡ ಸಹಕರಿಸುತ್ತೇನೆ ಎಂದು ತಿಳಿಸಿದ್ರು
ಇದೇ ಸಂದರ್ಭದಲ್ಲಿ ಗ್ರಾಮಪಂಚಾಯ್ತಿ ಸದಸ್ಯ ಸುಜಾತ, ಮಹಿಳಾ ಕಾಂಗ್ರೆಸ್ ಸದಸ್ಯೆ ಲಕ್ಷ್ಮಿ ,ಕಿರಣ್, ಕೃಷ್ಣೇಗೌಡ, ಮಂಜು, ವಿಜಯ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.