Thursday, November 21, 2024
Homeಸುದ್ದಿಗಳುಸಕಲೇಶಪುರಸಂವಿಧಾನ ಜಾಗೃತಿ ಜಾಥ ಹೆಸರಿನಲ್ಲಿ ಕಾಂಗ್ರೆಸ್ ಗ್ಯಾರಂಟಿಗಳ ಪ್ರಚಾರಕ್ಕೆ ಮುಂದಾಗಿರುವುದು ಖಂಡನೀಯ: ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್...

ಸಂವಿಧಾನ ಜಾಗೃತಿ ಜಾಥ ಹೆಸರಿನಲ್ಲಿ ಕಾಂಗ್ರೆಸ್ ಗ್ಯಾರಂಟಿಗಳ ಪ್ರಚಾರಕ್ಕೆ ಮುಂದಾಗಿರುವುದು ಖಂಡನೀಯ: ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ

ಸಕಲೇಶಪುರ/ಹಾಸನ : ಸಂವಿಧಾನ ಜಾಗೃತಿ ಜಾಥ ಹೆಸರಿನಲ್ಲಿ ಕಾಂಗ್ರೆಸ್ ಗ್ಯಾರಂಟಿಗಳ ಪ್ರಚಾರ ಮಾಡಲು ಮುಂದಾಗಿರುವುದು ಸರಿಯಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಹೇಳಿದರು.

  ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಂವಿಧಾನ ಜಾಗೃತಿ ಜಾಥ ಚುನಾವಣಾ ಗಿಮಿಕ್ ಆಗಿದೆ. ಕಾಂಗ್ರೆಸ್ ಸರ್ಕಾರ ಯಾವತ್ತು ಅಂಬೇಡ್ಕರ್ ಸಿದ್ದಾಂತಗಳನ್ನು ಪಾಲನೆ ಮಾಡಲಿಲ್ಲ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ವಿಶ್ವಮಾನವರಾಗಿದ್ದು ಅವರ ಯಾವುದೇ ಸಿದ್ದಾಂತಗಳನ್ನು ಕಾಂಗ್ರೆಸ್ ಸರ್ಕಾರ ಅಳವಡಿಸಿಕೊಳ್ಳದೆ ಸಂವಿಧಾನ ಜಾಗೃತಿ ಜಾಥ ಹೆಸರಿನಲ್ಲಿ ತನ್ನ ಗ್ಯಾರಂಟಿ ಯೋಜನೆಗಳ ಪ್ರಚಾರಕ್ಕೆ ಮುಂದಾಗಿದೆ. ಅಂಬೇಡ್ಕರ್ ರಾಜಕೀಯೇತರವಾಗಿ ದೇಶವನ್ನು ಕಟ್ಟಿದ ನಾಯಕರಾಗಿದ್ದು ಆದರೆ ಅವರ ಹೆಸರನ್ನು ಕಾಂಗ್ರೆಸ್ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ರಾಜ್ಯದಲ್ಲಿ ಅಭಿವೃದ್ದಿ ಕಾರ್ಯಗಳನ್ನು  ನಡೆಸಲು ಹಣ ಇಲ್ಲದಂತಾಗಿದೆ. ಅಂಬೇಡ್ಕರ್ ಚುನಾವಣೆಯಲ್ಲಿ ನಿಂತರೂ ಸಹ ಅವರನ್ನು ಸೋಲಿಸಿದ್ದು ಇದೇ ಕಾಂಗ್ರೆಸ್ ಇದೀಗ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಅಂಬೇಡ್ಕರ್ ಹೆಸರನ್ನು ಕಾಂಗ್ರೆಸ್ ಪಕ್ಷ ಬಳಸುತ್ತಿವೆ. ಜನರಿಗೆ ಹಳೇಯ ವರ್ತನೆಯನ್ನೆ ಮತ್ತೇ ನಾಟಕದ ಪ್ರದರ್ಶನ ಮಾಡುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮವಾಗುವುದರಲ್ಲಿ ಅನುಮಾನವಿಲ್ಲ. ಜಿಲ್ಲೆಯಲ್ಲಿ ಬಿಜೆಪಿ ಬಲಿಷ್ಠವಾಗಿದ್ದು ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಕುರಿತು ಪಕ್ಷದ ಹೈಕಮಾಂಡ್ ತೀರ್ಮಾನಿಸಲಿದ್ದು ಅಲ್ಲಿಯವರೆಗೂ ಎಲ್ಲರು ಸುಮ್ಮನಿರಬೇಕೆಂದು ಹೇಳಿದರು.

RELATED ARTICLES
- Advertisment -spot_img

Most Popular