Sunday, November 24, 2024
Homeಸುದ್ದಿಗಳುಸಕಲೇಶಪುರಕಡಿಮೆ ದರದಲ್ಲಿ ಎಳನೀರು ಮಾರಾಟ: ಸ್ಥಳೀಯ ವ್ಯಾಪಾರಸ್ಥರಿಂದ ವಲಸಿಗರ ವಿರುದ್ಧ ಆಕ್ರೋಶ:

ಕಡಿಮೆ ದರದಲ್ಲಿ ಎಳನೀರು ಮಾರಾಟ: ಸ್ಥಳೀಯ ವ್ಯಾಪಾರಸ್ಥರಿಂದ ವಲಸಿಗರ ವಿರುದ್ಧ ಆಕ್ರೋಶ:

ಕಡಿಮೆ ದರದಲ್ಲಿ ಎಳನೀರು ಮಾರಾಟ: ಸ್ಥಳೀಯ ವ್ಯಾಪಾರಸ್ಥರಿಂದ ವಲಸಿಗರ ವಿರುದ್ಧ ಆಕ್ರೋಶ:

ಸಕಲೇಶಪುರದ ಸ್ಥಳೀಯ ವ್ಯಾಪಾರಿಗಳ ನೆಡೆಗೆ ಅಸಮಾಧಾನ ವ್ಯಕ್ತಪಡಿಸಿದ ಸಾರ್ವಜನಿಕರು

ಸಕಲೇಶಪುರ: ಪಟ್ಟಣದ ವಿವಿಧ ಕಡೆಗಳಲ್ಲಿ ಚನ್ನರಾಯಪಟ್ಟಣ ಮೂಲದ ರೈತರು ಕಡಿಮೆ ದರಕ್ಕೆ ಎಳೆನೀರು ಮಾರಾಟ ಮಾಡುತ್ತಿರುವುದು ಸ್ಥಳೀಯ ವರ್ತಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

 ಕಳೆದ 15 ದಿನಗಳಿಂದ ತಾಲೂಕಿನಾದ್ಯಂತ ಅರಸೀಕೆರೆ, ಚನ್ನರಾಯಪಟ್ಟಣ ಮೂಲದ ರೈತರು ನೇರವಾಗಿ ಎಳೆನೀರುಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಮಾರಾಟ ಮಾಡುತ್ತಿರುವುದರಿಂದ ರೈತರು ತಲಾ ಒಂದಕ್ಕೆ 25 ರೂಪಾಯಿಗಳಿಗೆ ಎಳನೀರನ್ನು ಮಾರಾಟ ಮಾಡುತ್ತಿರುವುದು ಪಟ್ಟಣದ ಜನರಿಗೆ ಸಂತೋಷ ತಂದಿದೆ.

ಕಡಿಮೆ ದರದಲ್ಲಿ ದೊರಕುವ ಎಳ ನೀರನ್ನು ಖರೀದಿ ಮಾಡಲು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸುತ್ತಿದ್ದು ಇದರಿಂದ ಆತಂಕಕ್ಕೆ ಒಳಗಾದ ಸ್ಥಳೀಯ ವ್ಯಾಪಾರಿಗಳು ಕಡಿಮೆ ದರದಲ್ಲಿ ವ್ಯಾಪಾರ ಮಾಡುತಿದ್ದ ರೈತನಿಗೆ ವ್ಯಾಪಾರ ನಿಲ್ಲಿಸುವಂತೆ ಬೆದರಿಕೆ ಹಾಕಿರುವ ಘಟನೆ ಜರುಗಿದೆ.ಆದರೆ ಸ್ಥಳದಲ್ಲಿದ್ದ ಗ್ರಾಹಕರು ದುಬಾರಿ ದರದಲ್ಲಿ ಎಳ ನೀರು ಮಾರಾಟ ಮಾಡುತಿದ್ದ ಸ್ಥಳೀಯ ವಾಪಾರಸ್ಥರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಹಾಗೂ ವಲಸಿಗ ವ್ಯಾಪಾರಸ್ಥರ ನಡುವೆ ಮಾತಿನ ಚಕ್ಕಮಕಿ ನಡೆದು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ಎಲ್ಲರನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದರು. ನಂತರ ಸುಗಮವಾಗಿ ವ್ಯಾಪಾರ ನಡೆಯಿತು.

RELATED ARTICLES
- Advertisment -spot_img

Most Popular