ಸಕಲೇಶಪುರ : ಸುಭಾಷ್ ಮೈದಾನದಲ್ಲೆ ಸಕಲೇಶ್ವರಸ್ವಾಮಿ ಜಾತ್ರೆ ವಸ್ತುಪ್ರದರ್ಶನ ನಡೆಸ ಬೇಕು ಎಂದು ಹಿಂದೂಪರ ಸಂಘಟನೆ ಹಾಗೂ ನಾಗರೀಕರವೇದಿಕೆ ಶನಿವಾರ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಳೆದ 65 ವರ್ಷಗಳಿಂದ ಪಟ್ಟಣದಲ್ಲಿ ಪ್ರತಿವರ್ಷ ಹಳೆಸಂತೆ ಮೈದಾನದಲ್ಲಿ ಪೆಬ್ರವರಿ ತಿಂಗಳಿನಲ್ಲಿ ನಡೆಯುತ್ತಿದ್ದ ಜಾತ್ರೆಗೆ ಈ ಬಾರಿ ಪುರಸಭೆ ತ್ಯಾಜ್ಯ ಹಾಗೂ ಜಾಗದ ಸಮಸ್ಯೆ ತಲೆದೊರಿರುವುದರಿಂದ 66 ನೇ ಜಾತ್ರೆ ವಸ್ತುಪ್ರದರ್ಶನ ನಡೆಸುವುದು ಯಕ್ಷಪ್ರರ್ಶನೆಯಾಗಿದ್ದು. ಅನಿವಾರ್ಯವಾಗಿ ಸುಭಾಷ್ ಮೈದಾನದಲ್ಲಿ ಜಾತ್ರೆವಸ್ತುಪ್ರದರ್ಶನ ನಡೆಸಲು ತೀರ್ಮಾನಿಸಲಾಗಿದೆ. ಆದರೆ, ಇದಕ್ಕೆ ಕೆಲವು ಕ್ರೀಡಾಪಟುಗಳು ವಿರೋಧ ವ್ಯಕ್ತಪಡಿಸುತ್ತಿದ್ದರೆ ಇದು ಅಕ್ಷಮ್ಯ. ವಸ್ತುಪ್ರದರ್ಶನಕ್ಕೆ ಬರುವ ಸಾರ್ವಜನಿಕರಿಗೆ ಈ ಬಾರಿ ಹೊರೆಯಾಗದಂತೆ ಧರನಿಗದಿಪಡಿಸಲಾಗುವುದು ಹಾಗೂ ವಸ್ತುಪ್ರದರ್ಶನದಿಂದ ಬಂದ ಆಧಾಯದಲ್ಲಿ ಸುಭಾಷ್‌ಮೈದಾನ ಸಾರ್ವಂಗಿಣ ಅಭಿವೃದ್ದಿಗೊಳಿಸುವುದಾಗಿ ಶಾಸಕರು ಈಗಾಗಲೇ ಸಭೆಯಲ್ಲಿ ಹೇಳಿದ್ದಾರೆ. ಆದರೆ, ಶಾಸಕರ ತೇಜೋವಧೆಗಾಗಿ ಒಂದು ತಂಡ ಕೆಲಸ ಮಾಡುತ್ತಿದೆ. ಇವರ ವರ್ತನೆ ಹೀಗೆ ಮುಂದುವರೆದರೆ ಸಕಲೇಶ್ವರಸ್ವಾಮಿ ರಥೋತ್ಸವದ ವೇಳೆ ಬಾರಿ ಪ್ರತಿಭಟನೆ ನಡೆಸುವುದು ನಿಶ್ಚಿತ ಎಂದು ಎಚ್ಚರಿಸಿದ ಪ್ರತಿಭಟನಕಾರರು ಉಪವಿಭಾಗಾಧಿಕಾರಿ ಶೃತಿ ಅವರಿಗೆ ಮನವಿ ನೀಡಿದರು.
ವೇಳೆ ಮಾತನಾಡಿದ ಭಜರಂಗದಳದ ಮುಖಂಡ ರಘು,66ನೇ ದನಗಳ ಹಾಗೂ ವಸ್ತು ಪ್ರದರ್ಶನ ನೆಡೆಯುವ ಜಾತ್ರಾ ಸ್ಥಳದಲ್ಲಿ ಹೆಚ್ಚು ತ್ಯಾಜ್ಯ ಸುರಿದಿರುವುದ್ದರಿಂದ ಜಾತ್ರೆ ನೆಡೆಸಲು ಅನಾನುಕೂಲವಾಗಿದೆ ಹಾಗಾಗಿ ಶಾಸಕರು ಅಧಿಕಾರಿಗಳು, ಪುರಸಭಾ ಸದಸ್ಯರು ಹಾಗೂ ಸಾರ್ವಜನಿಕರೊಂದಿಗೆ ಚರ್ಚಿಸಿ ಸುಭಾಷ್ ಮೈದಾನದಲ್ಲಿ ಜಾತ್ರಾ ಮಹೋತ್ಸವ ನಡೆಸಲು ಸೂಕ್ತ ಸ್ಥಳವಾಗಿದೆ ಎಂದು ತಿಳಿಸಿದ್ದಾರೆ.ಆದರೆ ಕೆಲ ಪಟಭದ್ರ ಇತ ಶಕ್ತಿಗಳ ಗುಂಪು ಸುಭಾಷ್ ಮೈದಾನದಲ್ಲಿ ಜಾತ್ರೆ ನಡೆಸಿದಂತೆ ಆಕ್ಷೇಪಣೆ ಸಲ್ಲಿಸಿರುವುದು ತಾಲೂಕಿನ ಜನರಿಗೆ ಮಾಡಿದ ಅಪಮಾನವಾಗಿದೆ. ಈ ಕುರಿತಂತೆ ನಾವು ಶುಭಾಷ್ ಮೈದಾನದಲ್ಲಿ ಜಾತ್ರಾ ನಡೆಸುವಂತೆ ಉಪವಿಭಾಗಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಸಕಲೇಶ್ವರ್ ಸ್ವಾಮಿ ದೇವಸ್ಥಾನದ ಅಭಿವೃದ್ಧಿಗಾಗಿ ಶಾಸಕರು ಈಗಾಗಲೇ 10 ಲಕ್ಷ ರೂ ನಷ್ಟು ಅನುದಾನ ತಂದಿದ್ದಾರೆ. ಈಗಾಗಲೇ ಪುರಸಭೆಯ ನಿರ್ಧಾರದಂತೆ ಜಾತ್ರಾ ಮಹೋತ್ಸವ ನಡೆದರೆ ಒಳ್ಳೆಯದು ಇಲ್ಲದಿದ್ದರೆ ರಥೋತ್ಸವ ದಿನ ಉಗ್ರ ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ವಳಲಹಳ್ಳಿ ಅಶ್ವಥ್,ಮಾಜಿ ಪುರಸಭಾ ಸದಸ್ಯರಾದ ಮೋಹನ್ ಚೇತನಾ ರುದ್ರೇಶ್,ದೀಪಕ್, ಜಾನೇಕೆರೆ ಲೋಕೇಶ್, ಕೌಶಿಕ್ ನವೀನ್,ಬಾಸ್ಕರ್,ಸೋಮಶೇಖರ್, ರಘು ಗೌಡ ಬಾಳ್ಳು ಶಿವಕುಮಾರ್, ಮುಂತಾದವರಿದ್ದರು.