Wednesday, January 22, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ : ಜೆಜೆಎಂ ಯೋಜನೆ ಕಾಮಗಾರಿಗೆ ಶಾಸಕ ಸಿಮೆಂಟ್ ಮಂಜು ಚಾಲನೆ

ಸಕಲೇಶಪುರ : ಜೆಜೆಎಂ ಯೋಜನೆ ಕಾಮಗಾರಿಗೆ ಶಾಸಕ ಸಿಮೆಂಟ್ ಮಂಜು ಚಾಲನೆ

ಸಕಲೇಶಪುರ : ತಾಲ್ಲೂಕಿನ ಹಾನುಬಾಳು ಹೋಬಳಿಯ ವಿವಿಧ ಗ್ರಾಮಗಳಲ್ಲಿ ಜೆಜೆಎಂ ಯೋಜನೆ ಕಾಮಗಾರಿಗಳಿಗೆ ಶಾಸಕ ಸಿಮೆಂಟ್ ಮಂಜುನಾಥ್ ಗುರುವಾರ ಭೂಮಿಪೂಜೆ ನೆರವೇರಿಸಿದರು.

ಈ ವೇಳೆ ಮಾತಾನಾಡಿದ ಶಾಸಕರು,ಜಲ ಜೀವನ ಮಷಿನ್‌ ಯೋಜನೆಯಡಿ ಹಾನುಬಾಳು ಹೋಬಳಿಯ ಅವರೇಕಾಡು ಗ್ರಾಮಕ್ಕೆ 42 ಲಕ್ಷ, ವೆಂಕಟಿಹಳ್ಳಿ ಗ್ರಾಮಕ್ಕೆ  88 ಲಕ್ಷ, ಇಂದಿರಾ ನಗರ, ಹಾನುಬಾಳು, ಮಕ್ಕಿಹಳ್ಳಿ ಹಾಗೂ ಅಚ್ಚರಡಿ ಗ್ರಾಮಕ್ಕೆ ಸುಮಾರು 4.5 ಕೋಟಿ ರೂಪಾಯಿ ವೆಚ್ಚದಲ್ಲಿ ಓವರ್ ಹೆಡ್ ಟ್ಯಾಂಕ್, ಪೈಪ್ ಲೈನ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು.

ಜಲ ಜೀವನ ಮಷಿನ್‌ ಯೋಜನೆ ಪ್ರಧಾನಿ ಮೋದಿ ಜೀ ಯವರ ಕನಸಿನ ಯೋಜನೆಯಾಗಿದ್ದು ಪ್ರತಿಯೊಬ್ಬರ ಮನೆಗೂ ಕುಡಿಯುವ ನೀರು ಪೂರೈಸುವ ವ್ಯವಸ್ಥೆಯಾಗಿದೆ. ಮನೆ ಮನೆಗೆ ಪೈಪ್‌ಲೈನ್‌ ಮೂಲಕ ಸಮರ್ಪಕ ನೀರೊದಗಿಸುವ ಕೆಲಸವಾಗಿದೆ. ಹೀಗಾಗಿ ಈ ಕಾಮಗಾರಿ ಅಚ್ಚುಕಟ್ಟಾಗಿ ನಿರ್ಮಿಸಿದರೆ ಗ್ರಾಮದ ಯಾರೊಬ್ಬರ ಮನೆಗೂ ನೀರಿನ ಅಭಾವ ಇರುವುದಿಲ್ಲ. ಗುತ್ತಿಗೆದಾರರು ಕಾಮಗಾರಿಯನ್ನು ಆದಷ್ಟು ಬೇಗ ಮತ್ತು ಗುಣಮಟ್ಟವಾಗಿ ಮುಗಿಸಿಕೊಡಬೇಕೆಂದು ಕಿವಿ ಮಾತು ಹೇಳಿದರು.

ಈ ಸಂಧರ್ಭದಲ್ಲಿ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಅಭಿಯಂತರ ಆಶಾ ಲತಾ ಸಹಾಯಕ ಅಭಿಯಂತರ ಹರೀಶ್ ಹಾನುಬಾಳು ಗ್ರಾಮ ಪಂಚಾಯತಿ ಅಧ್ಯಕ್ಷ ಸಂತೋಷ, ಗ್ರಾಪಂ ಸದಸ್ಯ ಸುರೇಶ್ ಲಕ್ಶ್ಮಣ, ಮುಖಂಡರಾದ ಅವರೇಕಾಡು ಪೃಥ್ವಿ, ಸೋಮಶೇಖರ್, ರಾಜಕುಮಾರಿ ಸೇರಿದಂತೆ ಮುಂತಾದವರಿದ್ದರು.

RELATED ARTICLES
- Advertisment -spot_img

Most Popular