Saturday, June 28, 2025
Homeಸುದ್ದಿಗಳುಸಕಲೇಶಪುರಶಾಸಕ ಸಿಮೆಂಟ್ ಮಂಜು ಮನವಿ ಮೇರೆಗೆ ನೂತನ ಸಕಲೇಶಪುರ ಯೋಜನಾ ಪ್ರಾಧಿಕಾರ ರಚನೆ ರಾಜ್ಯ ಸರ್ಕಾರ...

ಶಾಸಕ ಸಿಮೆಂಟ್ ಮಂಜು ಮನವಿ ಮೇರೆಗೆ ನೂತನ ಸಕಲೇಶಪುರ ಯೋಜನಾ ಪ್ರಾಧಿಕಾರ ರಚನೆ ರಾಜ್ಯ ಸರ್ಕಾರ ಅಸ್ತು.

ಶಾಸಕ ಸಿಮೆಂಟ್ ಮಂಜು ಮನವಿ ಮೇರೆಗೆ ನೂತನ ಸಕಲೇಶಪುರ ಯೋಜನಾ ಪ್ರಾಧಿಕಾರ ರಚನೆ ರಾಜ್ಯ ಸರ್ಕಾರ ಅಸ್ತು.

ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ ಶಾಸಕರು.

ಸಕಲೇಶಪುರ: ನಗರದ ಸಮಗ್ರ ಅಭಿವೃದ್ಧಿಯ ಹಿತ ದೃಷ್ಟಿ ಯಿಂದ ಸ್ಥಳೀಯ ಯೋಜನಾ ಪ್ರಾಧಿಕಾರ ರಚಿಸುವ ಕುರಿತಂತೆ ರಾಜ್ಯ ಸರ್ಕಾರಕ್ಕೆ ಶಾಸಕ ಸಿಮೆಂಟ್ ಮಂಜು ಮಾಡಿದ ಮನವಿಗೆ ಸರ್ಕಾರ ಇದೀಗ ಗ್ರೀನ್ ಸಿಗ್ನಲ್ ನೀಡಿದೆ.

ಸಕಲೇಶಪುರ ಪುರಸಭೆ ಸ್ಥಳೀಯ ಯೋಜನಾ ಪ್ರದೇಶಕ್ಕೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಕಲಂ 4(ಎ)1 ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸುತ್ತಾ ಹಾಲಿ ಸ್ಥಳೀಯ ಯೋಜನಾ ಪ್ರದೇಶವನ್ನು ಒಳಗೊಂಡಂತೆ, 15 ಗ್ರಾಮಗಳನ್ನು ಸೇರಿಸಿ, ಹಾಲಿ ಸ್ಥಳೀಯ ಯೋಜನಾ ಪ್ರದೇಶವನ್ನು ವಿಸ್ತರಿಸಲಾಗಿದೆ ಎಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಶಾಸಕರ ಪತ್ರದ ಸಾರಾಂಶ : ಸಕಲೇಶಮರ ಪುರಸಭೆ ವ್ಯಾಪ್ತಿಗೆ ಸ್ಥಳೀಯ ಯೋಜನಾ ಪ್ರದೇಶ ಘೋಷಿಸಿದ್ದು, ಮುಖ್ಯಾಧಿಕಾರಿಗಳು ಸದರಿ ಯೋಜನಾ ಪ್ರದೇಶಕ್ಕೆ ಸದಸ್ಯ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿರುವುದು ಕಂಡುಬಂದಿರುತ್ತದೆ. ಹಾಗೂ ಪುರಸಭಾ ಸ್ಥಳೀಯ ಯೋಜನಾ ಪ್ರದೇಶಕ್ಕೆ 2019 ರಲ್ಲಿ ಸರ್ಕಾರದಿಂದ ತಾತ್ಕಾಲಿಕ ತಯಾರಿಸಿದ್ದು, ಈ ಮಹಾಯೋಜನೆಯ ನಕ್ಷೆಯಲ್ಲಿ ಹಲವಾರು ಲೋಪದೋಷಗಳು ಇರುತ್ತದೆ ಹಾಗೂ ಈ ಮಹಾಯೋಜನೆಯು ಕೇವಲ ಪಟ್ಟಣಕ್ಕೆ ಮಾತ್ರ ತಯಾರಿಸಿದ್ದು, ಸಕಲೇಶಮರ ಪಟ್ಟಣಕ್ಕೆ ಹೊಂದಿಕೊಂಡಂತೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ರಸ್ತೆಯನ್ನು ನಗರದ ಹೊರಭಾಗದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಈ ರಸ್ತೆಯ ಅಕ್ಕಪಕ್ಕ ವಾಣಿಜ್ಯ ಮಳಿಗೆಗಳು ಬರುತ್ತಿರುತ್ತವೆ. ಪಟ್ಟಣಕ್ಕೆ ಹೊಂದಿಕೊಂಡಂತೆ ಹಲವಾರು ಸರ್ಕಾರಿ ಕೆರೆಗಳು ಇದ್ದು, ಈ ಕೆರೆಗಳನ್ನು ಒತ್ತುವರಿ ಮಾಡಿ ಅನಧಿಕೃತವಾಗಿ ಬಡಾವಣೆಗಳು ನಿರ್ಮಾಣವಾಗುತ್ತಿರುತ್ತವೆ. ಹಾಗಾಗಿ ಕೆರೆಗಳನ್ನು ಸಂರಕ್ಷಿಸುವುದು ಅಗತ್ಯವಾಗಿದ್ದು, ಪುರಸಭೆಯಲ್ಲಿ ಕೆರೆಗಳನ್ನು ಸಂರಕ್ಷಿಸಲು/ಅಭಿವೃದ್ಧಿಪಡಿಸಲು ಹಣದ ಅಭಾವ ಇರುವುದರಿಂದ ಸಕಲೇಶಮರ ಪಟ್ಟಣಕ್ಕೆ ಹೊಂದಿಕೊಂಡಿರುವ ಗ್ರಾಮಗಳನ್ನು ಸಹ ಯೋಜನಾ ಪ್ರದೇಶಕ್ಕೆ ಸೇರಿಸಿಕೊಂಡು ಪರಿಷ್ಕೃತ ಸ್ಥಳೀಯ ಯೋಜನಾ ಪ್ರದೇಶ ರಚಿಸಿ ಸಮಗ್ರವಾದ ಮಹಾಯೋಜನೆ ತಯಾರಿಸಲು ಸಕಲೇಶಪುರ ನಗರಕ್ಕೆ ಪ್ರತ್ಯೇಕ ಯೋಜನಾ ಪ್ರಾಧಿಕಾರ ರಚಿಸಲು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲು ಈ ಮೂಲಕ ತಿಳಿಸಲಾಗಿದೆ ಎಂದು ಏಪ್ರಿಲ್ ತಿಂಗಳಿನಲ್ಲೇ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇನೆ ಎಂದು ತಿಳಿಸಿದರು.

 ನನ್ನ ಮನವಿಗೆ ಪೂರಕವಾಗಿ ಸ್ಪಂದಿಸಿರುವ ರಾಜ್ಯ ಸರ್ಕಾರಕ್ಕೆ ಸಕಲೇಶಪುರ ನಗರದ ಜನತೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

RELATED ARTICLES
- Advertisment -spot_img

Most Popular