ರೈಲ್ವೆ ಹಳಿ ಮೇಲೆ ಗುಡ್ಡ ಹಾಗೂ ಬೃಹತ್ ಬಂಡೆಗಳು ಕುಸಿತ: ರೈಲು ಸಂಚಾರದಲ್ಲಿ ವ್ಯತ್ಯಯ
ಸಕಲೇಶಪುರ :ತಾಲ್ಲೂಕಿನ, ಎಡಕುಮಾರಿ ಬಳಿ ಭೂಕುಸಿತ ಹಾಗೂ ಬಂಡೆ ಕುಸಿತದಿಂದ ರೈಲು ಸಂಚಾರದಲ್ಲಿ ವ್ಯತ್ಯಯ ಆಗಿರುತ್ತದೆ.
ಎಡಕುಮೇರಿ ಸಮೀಪ ರಾತ್ರಿ ವೇಳೆ ಬಂಡೆ ಕುಸಿತವಾಗಿದ್ದು ಬಂಡೆ ಬಿದ್ದಿದ್ದ ಸ್ಥಳದ ಅನತಿ ದೂರದಲ್ಲಿ ಬಂದು ರೈಲು ನಿಂತಿರುತ್ತದೆ. ಚಾಲಕನ ಸಮಯ ಪ್ರಜ್ಞೆಯಿಂದ ಬಾರಿ ಅನಾಹುತ ತಪ್ಪಿರುತ್ತದೆ.ಹಲವು ರೈಲುಗಳ ಸಂಚಾರ ಬಂದ್ ಆಗಿದ್ದು ಬಂಡೆ ಉರುಳಿ ಬಿದ್ದಿರುವುದರಿಂದ ರೈಲ್ವೇ ಹಳಿ ಡ್ಯಾಮೇಜ್ ಆಗಿರುತ್ತದೆ.
ಸಕಲೇಶಪುರ ರೈಲ್ವೆ ನಿಲ್ದಾಣದಲ್ಲಿ ರೈಲೊಂದು ನಿಂತಿದ್ದು ಪ್ರಯಾಣಿಕರಿಗೆ ಕಾಫಿ, ತಿಂಡಿ ವ್ಯವಸ್ಥೆಯನ್ನು ರೈಲ್ವೆ ಅಧಿಕಾರಿಗಳು ಮಾಡಿರುತ್ತಾರೆ. ರಾತ್ರಿಯಿಂದಲೂ ರೈಲಿನಲ್ಲಿ ನೂರಾರು ಪ್ರಯಾಣಿಕರು ಕುಳಿತಿದ್ದು ಕೆಲವರು ಬೇರೆ ವಾಹನಗಳಲ್ಲಿ ತೆರಳುತ್ತಿದ್ದಾರೆ