ಕಾಡೆಮ್ಮೆ ದಾಳಿಗೊಳಗಾಗಿ ಮೃತಪಟ್ಟ ರೈತನ ಕುಟುಂಬಕ್ಕೆ 20 ಲಕ್ಷ ಪರಿಹಾರ ಮೊತ್ತದ ಚೆಕ್ ವಿತರಿಸಿದ – ಶಾಸಕ ಸಿಮೆಂಟ್ ಮಂಜು
ಸಕಲೇಶಪುರ : ತಾಲೂಕಿನ ವಣಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ತಂಬಲಗೇರಿ ಬಳಿಯ ಕಲ್ಲಹಳ್ಳಿಯಲ್ಲಿ ಕಾಡೆಮ್ಮೆ ದಾಳಿ ನಡೆಸಿದ ಪರಿಣಾಮ ರೈತರೊಬ್ಬರು ದಾರುಣವಾಗಿ ಮೃತಪಟ್ಟಿರುವ ಘಟನೆ ನೆಡೆದಿದೆ.
ವಿಷಯ ತಿಳಿಸಿದಂತೆ ಸ್ಥಳೀಯ ಶಾಸಕ ಸಿಮೆಂಟ್ ಮಂಜು ಘಟನಾ ಸ್ಥಳಕ್ಕೆ ತೆರಳಿ ಕಾಡೆಮ್ಮೆ ದಾಳಿಯಿಂದ ಮೃತಪಟ್ಟ ತಿಮ್ಮಪ್ಪ ನವರ ಶವ ಕಂಡು ದುಃಖಿಸಿದರು. ನಂತರ ತಿಮ್ಮಪ್ಪ ನವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.ಈ ವೇಳೆ ಕಾಡೆಮ್ಮೆ ದಾಳಿಯಿಂದ ಮೃತಪಟ್ಟ ತಿಮ್ಮಪ್ಪ ನವರ ಪತ್ನಿಗೆ 20 ಲಕ್ಷ ರೂಪಾಯಿಗಳ ಪರಿಹಾರ ಧನದ ಚೆಕ್ ವಿತರಿಸಿದರು. ವನ್ಯಜೀವಿಗಳ ಉಪಟಳದಿಂದ ಮಲೆನಾಡು ಭಾಗದ ರೈತರು ಬೆಳೆಗಾರರು ಸಾರ್ವಜನಿಕರು ದಿನನಿತ್ಯ ಆತಂಕದಲ್ಲೇ ಕಾಲ ಕಳೆಯುವಂತಾಗಿದ್ದು ಸರ್ಕಾರ ಕೂಡಲೇ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು