ಪರೀಕ್ಷೆ ನೆಪದಲ್ಲಿ ಜನಿವಾರ ಕಟ್ ಮುಂದಿನ ದಿನಗಳಲ್ಲಿ ಉಡುದಾರ ಕಟ್ ಮಾಡಲು ಮುಂದಾಗುವುದರಲ್ಲಿ ಅನುಮಾನವಿಲ್ಲ: ಪತ್ರಕರ್ತ ಸುಧೀರ್ ಆಕ್ರೋಶ
ಸಕಲೇಶಪುರ: ಪರೀಕ್ಷೆ ಹೆಸರಿನಲ್ಲಿ ಇಂದು ಜನಿವಾರ ತೆಗೆಸಿದವರು ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಉಡುದಾರ ತೆಗೆಸುವುದರಲ್ಲಿ ಅನುಮಾನವಿಲ್ಲ ಎಂದು ಪತ್ರಕರ್ತ ಹಾಗೂ ಬ್ರಾಹ್ಮಣ ಸಮಾಜದ ಮುಖಂಡ ಸುಧೀರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತೀರ್ಥಹಳ್ಳಿ ಹಾಗೂ ಬೀದರ್‌ನಲ್ಲಿ ಬ್ರಾಹ್ಮಣ ಸಮಾಜವನ್ನು ಗುರಿಯಾಗಿಸಿಕೊಂಡು ಜನಿವಾರ ತೆಗೆಸಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು ಜನಿವಾರದಿಂದ lಯಾರಾದರೂ ಕಾಫಿ ಹೊಡೆಯಲು ಸಾಧ್ಯವಾಗುತ್ತದೆಯೆ? ಕೆಲವರ ಬ್ರಾಹ್ಮಣ ಸಮುದಾಯದ ಮೇಲಿನ ದ್ವೇಷದಿಂದ ಈ ರೀತಿಯ ಘಟನೆ ಉಂಟಾಗಿದೆ. ಇಂದು ಜನಿವಾರ ತೆಗೆಸಿದವರು ಮುಂದಿನ ದಿನಗಳಲ್ಲಿ ಎಲ್ಲಾ ಹಿಂದೂ ಸಮಾಜದವರು ಹಾಕುವ ಉಡುದಾರವನ್ನು ತೆಗೆಸಬಹುದು. ಕೂಡಲೇ ಪರೀಕ್ಷೆ ವಂಚಿತ ವಿದ್ಯಾರ್ಥಿ ಗೆ ಪುನಃ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು. ಈ ರೀತಿಯ ಘಟನೆಯನ್ನು ಎಲ್ಲಾರು ಜಾತಿ, ಧರ್ಮ ಭೇದ ಬಿಟ್ಟು ಖಂಡಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೂಡಲೆ ತಪಿಸ್ಥತರ ವಿರುದ್ದ ಕ್ರಮ ಕೈಗೊಳ್ಳಬೇಕು ಹಾಗೂ ನಿಜವಾದ ಅಲ್ಪಸಂಖ್ಯಾತರಿಗೆ ಸೂಕ್ತ ರಕ್ಷಣೆ ಕೊಡಬೇಕು ಎಂದು ಹೇಳಿಕೆ ನೀಡಿದ್ದಾರೆ.