ವೀರಣ್ಣನಕೊಪ್ಪಲು ವೀರಭದ್ರೇಶ್ವರ ಸ್ವಾಮಿ ಕೆಂಡೋತ್ಸವ ಸಂಪನ್ನ
ಸಕಲೇಶಪುರ : ತಾಲೂಕಿನ ಬೆಳಗೋಡು ಹೋಬಳಿ ವೀರಣ್ಣನಕೊಪ್ಪಲು ಗ್ರಾಮದ ವೀರಭದ್ರೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಮುಕ್ತಾಯಗೊಂಡಿತು.
ತಾಲೂಕು ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿದ್ದರು ಸಾವಿರಾರು ಭಕ್ತರು ವೀರಭದ್ರೇಶ್ವರ ಸ್ವಾಮಿಯ ದರ್ಶನ ಪಡೆದು ಪುನೀತರಾದರು.ನೂರಾರು ವರ್ಷಗಳ ಇತಿಹಾಸವಿರುವ ಈ ವೀರಭದ್ರೇಶ್ವರ ಸ್ವಾಮಿ ದೇವರಿಗೆ ಅಪಾರ ಭಕ್ತ ಸಮೂಹವಿದೆ.
ಇಂದು ಮುಂಜಾನೆ ಬ್ರಾಹ್ಮೀ ಮೂರ್ಹತದಲ್ಲಿ ದೇವಾಲಯದ ಅರ್ಚಕರ ನೇತೃತ್ವದಲ್ಲಿ ವೀರಭದ್ರೇಶ್ವರಸ್ವಾಮಿ ಮೂಲ ವಿಗ್ರಹಕ್ಕೆ ಕ್ಷೀರಾಭಿಷೇಕ, ಎಳನೀರು ಅಭಿಷೇಕ, ರುದ್ರಾಭಿಷೇಕದೊಂದಿಗೆ ವಿಧದ ಪೂಜೆಗಳು ನಡೆದವು.
ಸೋಮವಾರದಿಂದ ಪ್ರಾರಂಭವಾದ ಜಾತ್ರ ಮಹೋತ್ಸವ ಅಂದು ಬೆಳಗ್ಗೆ ಸ್ವಾಮಿಯವರಿಗೆ ರುದ್ರಾಭಿಷೇಕ,ಬಿಲ್ವಾರ್ಚನೆ ಜರುಗಿತು. ಸಂಜೆ ಗಂಗಾ ಪೂಜೆ ನೆರವೇರಿತು.ಇಂದು ಮುಂಜಾನೆ ಬೆಳಿಗ್ಗೆ 6 ರಿಂದ 8 ಗಂಟೆಗೆ “ಕೆಂಡೋತ್ಸವ” ನೆಡೆಯಿತು. ನಂತರ ಬಿಲ್ವಾರ್ಚನೆ ಹಣ್ಣು, ಕಾಯಿ ಪ್ರಸಾದ ವಿನಿಯೋಗ ನಡೆಯಿತು.ಮಧ್ಯಾಹ್ನ ಹಗಲು ಜಾತ್ರೆ ನೆಡೆದು ಸಂಜೆ ವಿಶೇಷವಾಗಿ ಓಕಳಿ ಹಾಗೂ ನೂರಾರು ಭಕ್ತರ ಸಮ್ಮುಖದಲ್ಲಿ ದೇವರ ಉತ್ಸವ ನಡೆಯಿತು.ಜಾತ್ರೆ ವೇಳೆ ಮರದ ಎತ್ತರಕ್ಕೆ ಕಾಯಿಯನ್ನು ಕಟ್ಟಿ ಕಲ್ಲಿನಿಂದ ಗುರಿ ಹೊಡೆಯುವ ಸ್ಪರ್ಧೆಯಲ್ಲಿ ಗ್ರಾಮದ ರಮೇಶ್ ಅವರ ಪುತ್ರ ಆಕಾಶ್ ಗೆಲುವು ಸಾಧಿಸಿದರು. ಈ ಸ್ಪರ್ಧೆ ನೆರೆದಿದ್ದವರ ಗಮನ ಸೆಳೆಯಿತು.ಈ ಸಂಧರ್ಭದಲ್ಲಿ ಮೈಸೂರು ಗಣೇಶ್ ಬೀಡಿ ವರ್ಕ್ಸ್ ಮಾಲೀಕರಾದ ರಾಮನಾಥ್ ಶೈಣ್ಯ ವಸುಮತಿ ಶೈಣ್ಯ ದಂಪತಿಗಳು ದೇವಸ್ಥಾನಕ್ಕೆ ರೂ. 50.000 ಗಳನ್ನು ದೇಣಿಗೆ ನೀಡಿದರು. ದೇಣಿಗೆ ನೀಡಿದ ದಂಪತಿಗಳಿಗೆ ದೇವಸ್ಥಾನ ಅಭಿವೃದ್ಧಿ ಸಮಿತಿಯಿಂದ ಅಭಿನಂದಿಸಲಾಯಿತು.
ಈ ಸಂಧರ್ಭದಲ್ಲಿ ಮಾಜಿ ಶಾಸಕ ಎಚ್. ಕೆ ಕುಮಾರಸ್ವಾಮಿ,ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಈ.ಕೆ ಬಸವರಾಜು, ಕಾರ್ಯದರ್ಶಿ ಬಾಗೆ ಪರಮೇಶ್, ಖಜಾಂಚಿ ಅಣ್ಣೆಗೌಡ,ಜೆಡಿಎಸ್ ತಾಲೂಕು ಅಧ್ಯಕ್ಷ ಸ್ವಾಮಿಗೌಡ, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್, ಬಿಜೆಪಿ ಮುಖಂಡರಾದ ದೊಡ್ಡದಿಣ್ಣೆ ಜಯ ಪ್ರಕಾಶ್, ಮಂಜುನಾಥ್, ಜಯಶಂಕರ್, ಲೋಕೇಶ್ ಕುಮಾರ್, ಶೇಷೆಗೌಡ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.