ಸಕಲೇಶಪುರ : ಟ್ಯಾಂಕಿನ ಮೋಟರ್ ಗಳ ಕಳ್ಳತನ.
ಬಾಳ್ಳುಪೇಟೆ ಭಾಗದಲ್ಲಿ ಹೆಚ್ಚಿದ ಕಳ್ಳತನ ಪ್ರಕರಣಗಳು
ಸಕಲೇಶಪುರ: ವಾಸದ ಮನೆಯ ನೀರಿನ ಟ್ಯಾಂಕ್ ಗೆ ಅಳವಡಿಸಿದ್ದ ಮೋಟರ್ ಗಳನ್ನು ಕಳ್ಳತನ ಮಾಡಿರುವ ಘಟನೆ ನೆಡೆದಿದೆ.
ತಾಲೂಕಿನ ಬಾಳ್ಳುಪೇಟೆಯ ವೈಭವ್ ಲೇಔಟ್ ನಲ್ಲಿ ಕಳೆದ ರಾತ್ರಿ ಘಟನೆ ಜರುಗಿದೆ.ತೀರ್ಥ ಕುಮಾರ್ ಎಂಬುವವರಿಗೆ ಸೇರಿದ ಮನೆಯ ಟ್ಯಾಂಕ್ ಗೆ ಅಳವಡಿಸಲಾಗಿದ್ದ ಮೂರು ಮೋಟರ್ಗಳ ವೈರ್ ಗಳನ್ನು ತುಂಡರಿಸಿ ಕದ್ದುಯ್ದಿದ್ದಾರೆ. ಖದೀಮರ ಕೈಚಳಕ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು ಓರ್ವ ಬಿಯರ್ ಬಾಟಲ್ ಹಿಡಿದುಕೊಂಡಿರುವ ದೃಶ್ಯ ಕ್ಯಾಮೆರದಲ್ಲಿ ಸರಿಯಾಗಿದ್ದು ಮನೆಯ ಮತ್ತೊಂದು ಬದಿಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾ ಕಂಡೊಡನೆ ಖದೀಮ ಅಲ್ಲಿಂದ ಪರಾರಿಯಾಗಿದ್ದಾನೆ. ಕೆಲವು ದಿನಗಳಿಂದಷ್ಟೇ ಬಾಳ್ಳುಪೇಟೆ ದೇವಿರಮ್ಮ ದೇವಸ್ಥಾನದಲ್ಲಿ ದೇವರ ಮುಖವಾಡವನ್ನು ಕದ್ದುಯಿದ್ದರು.ಅಂಬೇಡ್ಕರ್ ನಗರ, ಜೆಪಿ ನಗರದಲ್ಲಿ ಬೈಕ್ ಗಳು ಕಳ್ಳತನವಾಗಿದ್ದವು ಇದರಿಂದ ಸಾರ್ವಜನಿಕರು ಆತಂಕದಲ್ಲಿದ್ದಾರೆ. ನೈಟ್ ಬಿಟ್ ಪೊಲೀಸರು ಇನ್ನಷ್ಟು ಚುರುಕಾಗಿ ಕಾರ್ಯನಿರ್ವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.