ಸಕಲೇಶಪುರ : ಕ್ಯಾಂಟೀನ್ ಸುರೇಶ್ ಆತ್ಮಹತ್ಯೆಗೆ ಶರಣು.
ಸಕಲೇಶಪುರ : ವಿವಿಧ ಬಗೆಯ ಚಹಾ ತಯಾರಿಕೆಯಿಂದ ಹೆಸರುವಾಸಿಯಾಗಿದ್ದ ತಾಲೂಕಿನ ಬಾಗೆ ಗ್ರಾಮದ ಉಪ್ಪಿ ಕ್ಯಾಂಟೀನ್ ಮಾಲೀಕ ಸುರೇಶ್ ಇಂದು ಸಂಜೆ ತನ್ನ ಕ್ಯಾಂಟೀನ್ ಒಳಭಾಗದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸುರೇಶ್ ಆತ್ಮಹತ್ಯೆ ಮಾಡಿಕೊಳ್ಳೋ ಮುನ್ನ ಬರೆದಿರುವ ಡೆತ್ ನೋಟ್ ನಲ್ಲಿ ಯಾರು ಕೂಡ ಸಾಲ ಮಾಡಬೇಡಿ ಸಾಲದಿಂದ ಬದುಕು ಹಾಳಾಗುತ್ತೆ. ಹಾಸಿಗೆ ಇದ್ದಷ್ಟು ಕಾಲು ಚಾಚಿ ಎಂದು ಹೇಳಿ. ನನ್ನ ಸಾವಿಗೆ ಯಾರು ಹೊಣೆಗಾರರಲ್ಲ ಎಂದು ಡೆತ್ ನೋಟ್ ಸಿಕ್ಕಿದೆ. ಸುರೇಶ್ ನಿಖರ ಸಾವಿಗೆ
ಪೊಲೀಸರ ತನಿಖೆಯಿಂದಷ್ಟೇ ಹೆಚ್ಚಿನ ಮಾಹಿತಿ ತಿಳಿಯಬೇಕಿದೆ.