ದೇವಾಲದಕೆರೆ ಸರ್ಕಾರಿ ಪ್ರೌಢಶಾಲೆ ಯ ನೂತನ ಸಭಾಂಗಣಕ್ಕೆ ಭೇಟಿ ನೀಡಿದ ಶಾಸಕ ಸಿಮೆಂಟ್ ಮಂಜುನಾಥ್.
ಸಕಲೇಶಪುರ : ತಾಲೂಕಿನ ಹಾನುಬಾಳು ಹೋಬಳಿ ದೇವಾಲದಕೆರೆಯ ಸರ್ಕಾರಿ ಪ್ರೌಢಶಾಲೆಯ ಸಭಾಂಗಣವನ್ನು ಬುಧುವಾರ ಭೇಟಿ ನೀಡಿದರು.
ಉದ್ಘಾಟನೆ ವೇಳೆ ಗೈರಾಗಿದ್ದ ಶಾಸಕರು ಇಂದು ಭೇಟಿ ನೀಡಿದರು ಈ ವೇಳೆ ಶಾಲೆ ಹಾಗೂ ಗ್ರಾಮಸ್ಥರಿಂದ ಗೌರವ ಸ್ವೀಕರಿಸಿದರು.
ನಂತರ ಮಾತನಾಡಿದ ಶಾಸಕರು,ಶಾಲೆಯ ಶಿಕ್ಷಕರಲ್ಲಿ ಇಚ್ಚಾ ಶಕ್ತಿ ಇದ್ದರೆ ಮಾತ್ರ ಶಾಲಾ ಅಭಿವೃದ್ಧಿ ಮಾಡಲು ಸಾಧ್ಯ.ಸಭಾಂಗಣ ಉತ್ತಮವಾಗಿ ನಿರ್ಮಿಸಿಲಾಗಿದೆ. ದಾನಿಗಳು ಸಾಕಷ್ಟು ಜನರಿದ್ದಾರೆ ಆದರೆ ಅವರನ್ನು ಸಂಪರ್ಕಿಸಿ ಅವರಿಂದ ಸಹಾಯ ಪಡೆಯಲು ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ನೆಡೆಸುತ್ತೇನೆ. ದೇವಾಲದಕೆರೆಯ ಸುತ್ತಮುತ್ತಲಿನ ಗ್ರಾಮಗಳ ಅಭಿವೃದ್ಧಿ ಸದಾ ಸಿದ್ದನಗಿರುವುದಾಗಿ ಭರವಸೆ ನೀಡಿದರು.
ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಗ್ರಾಮಸ್ಥರು ತಮ್ಮ ವಿವಿಧ ಬೇಡಿಕೆಗಳ ಮನವಿಯನ್ನು ಶಾಸಕರಿಗೆ ಸಲ್ಲಿಸಿದರು.
ಇದೇ ವೇಳೆ ಮುಖ್ಯ ಶಿಕ್ಷಕರಾಗಿರುವ ಜಗದೀಶ್ ಹಾಗೂ ಸಹ ಶಿಕ್ಷಕರಾದ ಹರೀಶ್ ಅವರನ್ನು ಸೀಮೆಟ್ ಮಂಜು ಅಭಿನಂದಿಸಿದರು.
ಈ ಸಂಧರ್ಭದಲ್ಲಿ ಗ್ರಾಪಂ ಅಧ್ಯಕ್ಷ ಭರತ್, SDMC ಅಧ್ಯಕ್ಷ ಸೀನ, ಶಾಲೆಯ ಮುಖ್ಯ ಶಿಕ್ಷಕರಾದ ಜಗದೀಶ್, ಸಹ ಶಿಕ್ಷಕ ಹರೀಶ್ ತಾಲೂಕು ಬಿಜೆಪಿ ಅಧ್ಯಕ್ಷ ಮಂಜುನಾಥ್ ಸಂಘಿ, ಋಷಿಕೇಶ್ ಮಂದಾರ, ಅನಿಲ್ ಸಂಪಗೂಡು ಸೇರದಂತೆ ಮುಂತಾದವರು ಉಪಸ್ಥಿತರಿದ್ದರು