ಜಾತಿನಿಂದನೆ ಪ್ರಕರಣ : ಸತ್ಯಾಂಶವಿದ್ದರೆ ಪಕ್ಷ ಅವರ ವಿರುದ್ದ ಕ್ರಮ ಕೈಗೊಳ್ಳುತ್ತದೆ: ಎಸ್.ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಸಿಮೆಂಟ್ ಮಂಜು
ಸಕಲೇಶಪುರ: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಜಾತಿ ನಿಂದನೆ ಮಾಡಿರುವುದು ನಿಜ ಆದಲ್ಲಿ ಪಕ್ಷ ಅವರ ವಿರುದ್ದ ಕ್ರಮ ಕೈಗೊಳ್ಳುತ್ತದೆ ಎಂದು ರಾಜ್ಯ ಎಸ್.ಸಿ ಮೋರ್ಚಾ ಅಧ್ಯಕ್ಷ ಕ್ಷ ಸಿಮೆಂಟ್ ಮಂಜು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಾತಿ ನಿಂದನೆ ಪ್ರಕರಣದಲ್ಲಿ ಮುನಿರತ್ನ ಅವರ ವಿರುದ್ದ ಕಾಂಗ್ರೆಸ್ ಸರ್ಕಾರ ಆತುರದ ನಿರ್ಧಾರ ಕೈಗೊಂಡಿದೆ. ಮುನಿರತ್ನ ಜಾತಿ ನಿಂದನೆ ಮಾಡಿರುವುದು ಇನ್ನು ಸರಿಯಾಗಿ ಸಾಬೀತಾಗಿಲ್ಲ. ಆಡಿಯೋದಲ್ಲಿನ ಧ್ವನಿ ಅವರದ್ದೆ ಆಗಿದ್ದಾರೆ ಅವರ ವಿರುದ್ದ ಕ್ರಮ ಕೈಗೊಳ್ಳಲಿ ಆದರೆ ಆಡಿಯೋದಲ್ಲಿನ ಧ್ವನಿ ಕುರಿತು ಇನ್ನು ಯಾವುದು ಸಾಬೀತಾಗಿಲ್ಲ. ಒಂದು ವೇಳೆ ಆಡಿಯೋದಲ್ಲಿನ ಧ್ವನಿ ಅವರದ್ದೇ ಆದರೆ ಅವರ ವಿರುದ್ದ ಬಿಜೆಪಿ ಪಕ್ಷ ಕ್ರಮ ಕೈಗೊಳ್ಳುತ್ತದೆ. ಯಾದಗಿರಿಯ ಶಾಸಕರ ಮೇಲೂ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ ಆದರೆ ಮುನಿರತ್ನ ವಿರುದ್ದ ಪ್ರಕರಣ ದಾಖಲಿಸಲು ಬಂದಿಸಲು ತೋರಿದ ಆತುರ ಯಾದಗಿರಿ ಶಾಸಕರ ಮೇಲೆ ಯಾಕೆ ತೋರಿಲ್ಲ.ಈ ನಿಟ್ಟಿನಲ್ಲಿ ಮುನಿರತ್ನ ಬಂಧನ ಅಗತ್ಯವಿರಲಿಲ್ಲ. ರಾಹುಲ್ ಗಾಂಧಿಯವರು ದಲಿತರ ಮೀಸಲಾತಿಯನ್ನು ರದ್ದು ಪಡಿಸುವಂತೆ ವಿದೇಶದಲ್ಲಿ ಮಾತನಾಡಿದರು, ಇದರ ಬಗ್ಗೆ ಧ್ವನಿ ಎತ್ತದ ಕಾಂಗ್ರೆಸ್ಸಿಗರು ಮುನಿರತ್ನ ವಿರುದ್ದ ಇದೀಗ ಅರಚಾಡುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯತೆಯ ಸಿದ್ದಾಂತವುಳ್ಳ ಪಕ್ಷವಾಗಿದ್ದು ಮುನಿರತ್ನ ಇರಲಿ ಪಕ್ಷದ ಯಾರೇ ಆಗಲಿ ಜಾತಿ ನಿಂದನೆ ಮಾಡಿರುವುದು ನಿಜವಾದಲ್ಲಿ ಅಂತಹವರ ವಿರುದ್ದ ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ.