ಸಿದ್ದೇಶ್ ನಾಗೇಂದ್ರ ಜನುಮ ದಿನಕ್ಕೆ ಶುಭಕೋರಿದ ಬೈರಾಪುರ ಗಣೇಶ್ ಮತ್ತು ಶನಿವಾರಸಂತೆ ಮಧು.
ಹಾಸನ : ಭಾರತೀಯ ಜನತಾ ಪಾರ್ಟಿಯ ಹಾಸನ ಜಿಲ್ಲಾಧ್ಯಕ್ಷರಾದ ಸಿದ್ದೇಶ್ ನಾಗೇಂದ್ರ ಹುಟ್ಟುಹಬ್ಬಕ್ಕೆ ಬಿಜೆಪಿ ಕಾರ್ಯಕರ್ತರಾದ ಬೈರಾಪುರ ಗಣೇಶ್ ಮತ್ತು ಶನಿವಾರಸಂತೆ ಮಧು ರವರು ಶುಭ ಹಾರೈಸಿದ್ದಾರೆ.
ಈ ವೇಳೆ ಮಾತನಾಡಿದ ಗಣೇಶ್, ಸಿದ್ದೇಶ್ ಅಣ್ಣನವರು ತಮ್ಮ ಪ್ರತಿಷ್ಠಾನದ ಮೂಲಕ ಹಲವಾರು ಸಾಮಾಜಿಕ ದೈವಿಕ ಕಾರ್ಯಗಳನ್ನು ಮಾಡುತ್ತ ಬರುತ್ತಿದ್ದಾರೆ. ಜೊತೆಗೆ ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದಾರೆ ಇವರಿಗೆ ದೇವರು ಆಯುರ್ ಆರೋಗ್ಯ ನೀಡಿ ಕಾಪಾಡಲಿ ಎಂದು ಶುಭ ಹಾರೈಸಿದ್ದರು.