Friday, April 4, 2025
Homeಸುದ್ದಿಗಳುಸಕಲೇಶಪುರಎಸ್.ಎಸ್.ಎಫ್ ಹಾಸನ ಜಿಲ್ಲಾ ಸಮಿತಿ ಪಟ್ಟಣದಲ್ಲಿ ಆಝಾದಿ ರ‍್ಯಾಲಿ

ಎಸ್.ಎಸ್.ಎಫ್ ಹಾಸನ ಜಿಲ್ಲಾ ಸಮಿತಿ ಪಟ್ಟಣದಲ್ಲಿ ಆಝಾದಿ ರ‍್ಯಾಲಿ

ಸಕಲೇಶಪುರ ಭಾರತ ಪರಂಪರೆಯ ಹಿನ್ನಲೆಯ ರಾಷ್ಟ್ರ ಅದನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರದು ಎಂದು ಹುಸೈನ್ ಮುಇನಿ ಆಲ್ ಅಹ್ಸನಿ ಹೇಳಿದರು.

 ಎಸ್.ಎಸ್.ಎಫ್ ಹಾಸನ ಜಿಲ್ಲಾ ಸಮಿತಿ ಪಟ್ಟಣದಲ್ಲಿ ಆಯೋಜಿಸಿದ್ದ ಆಝಾದಿ ರ‍್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದರು. ದೇಶದ ಏಕತೆ, ಸಂವಿಧಾನ ಮತ್ತು ಸಮಗ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಎಸ್‌ಎಸ್‌ಎಫ್ ಕೆಲಸ ಮಾಡುತ್ತಿದೆ ಎಂದರು. ಭಾರತವು ಪ್ರತಿಯೊಬ್ಬ ಭಾರತೀಯನಿಗೂ ಸೇರಿದೆ ಎಂದು ಅವರು ಹೇಳಿದರು. ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು ಮತ್ತು ಸೂಫಿ-ಸಂತರು ತುಂಬಿದ ತಪಸ್ಸು ಮತ್ತು ಮೌಲ್ಯಗಳಿಂದ ನಮ್ಮ ನಾಡು ರೂಪುಗೊಂಡಿದೆ. ರಾಜ್ಯದ ಪ್ರತಿಯೊಬ್ಬ ವ್ಯಕ್ತಿಗೂ ಸಂವಿಧಾನದಡಿಯಲ್ಲಿ ರಕ್ಷಣೆಯ ಭರವಸೆ ಇದೆ ಎಂದರು. ಪ್ರಸ್ತುತ ಕಾಲಘಟ್ಟದಲ್ಲಿ ಹೆಸರು, ಜಾತಿ ಮತ್ತು ಧರ್ಮದ ಆಧಾರದಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳಲು ಮತ್ತು ತಾರತಮ್ಯ ಮಾಡಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಪ್ರಜಾಪ್ರಭುತ್ವ ಭಾರತದಲ್ಲಿ ಧಾರ್ಮಿಕ ದ್ವೇಶವಿಲ್ಲದೆ ಐಕ್ಯತೆಯಿಂದ ಬದುಕಬೇಕು. ಭಾರತ ಎಲ್ಲರಿಗೂ ಸೇರಿದ್ದು, ಯಾವುದೇ ಧರ್ಮಕ್ಕೆ ಸೀಮಿತವಲ್ಲ ಎಂದರು. ಇಸ್ಲಾಮಿನ ಉದಾತ್ತ ಸಂದೇಶವಾದ ಮನುಷ್ಯ ಮನುಷ್ಯರಲ್ಲಿ ಪ್ರೀತಿ ಸ್ನೇಹ ಸೌಹಾರ್ಧತೆಯನ್ನು ಸಾರುವ ಆಶಯವನ್ನು ದೇಶದಲ್ಲಿ SSF ಹರಡುತ್ತಿರುವುದು ಎಂದರು.

ಭಾರತಕ್ಕಾಗಿ ಮಹನೀಯರ ತ್ಯಾಗವನ್ನು ಸ್ಮರಿಸಿದರು. ಭಾರತಕ್ಕೆ ಸರಿಸಾಟಿಯಾದ ದೇಶ ಬೇರೊಂದಿಲ್ಲ ಎಂದರು. ನಮ್ಮೊಳಗಿನ ಭಾರತ ಜಾಗೃತಗೊಳ್ಳಲಿ ಎಂಬ ಧ್ಯೇಯ ವಾಕ್ಯದೊಂದಿಗೆ ಎಸ್.ಎಸ್.ಎಫ್. ಕರ್ನಾಟಕ ರಾಜ್ಯ ಸಮಿತಿಯ ನಿರ್ದೇಶನದಂತೆ ಎಲ್ಲಾ ಜಿಲ್ಲೆಗಳಲ್ಲೂ ವರ್ಷಂಪ್ರತಿ ಆಝಾದಿ ರ‍್ಯಾಲಿ ನಡೆಯುತ್ತಿದೆ ಎಂದರು.

 ಕ್ವಿಟ್ ಇಂಡಿಯಾ ಚಳುವಳಿಯ ದಿನದ ಸ್ಮರಣೆಯ ಅಂಗವಾಗಿ ಎಸ್.ಎಸ್.ಎಫ್ ಹಾಸನ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಮಟ್ಟದ ಬೃಹತ್ ಆಝಾದಿ ರ‍್ಯಾಲಿ ಅಜಾದ್ ರಸ್ತೆಯ ಜಾಮಿಯಾ ಮಸೀದಿ ಮುಂಭಾಗದಿಂದ ಪ್ರಾರಂಭಗೊಂಡು ರಾಜ ಬೀದಿಯಲ್ಲಿ ಸಾಗಿ ಹಳೆ ಬಸ್ ನಿಲ್ದಾಣದಲ್ಲಿ ಸಮಾಪ್ತಿಗೊಂಡಿತು.

 ಈ ಸಂದರ್ಭದಲ್ಲಿ ಎಸ್ವೈಎಸ್ ರಾಜ್ಯ ಕಾರ್ಯದರ್ಶಿ ಮಾರನಹಳ್ಳಿ, ತಂಞಲ್ sjm ಅಧ್ಯಕ್ಷರು ಬದ್ರಿಯಾ ಜಮಾ ಮಸೀದಿಯ ಖದೀಬರಾದ ಅಬ್ದುಲ್ ರಝಾಕ್ ಸಖಾಫಿ, ಎಸ್ಎಸ್ಎಫ್ ಎಸ್ವೈಎಸ್ ಮುಖಂಡ ಆನೆ ಮಹಲ್ ಹಸೈನಾರ್, ವಾಜಿದ ಬಾಳ್ಳುಪೇಟೆ, ರಫೀಕ್ ಮದನಿ ಇನ್ನಿತರರು ಉಪಸ್ಥಿತರಿದ್ದರು

RELATED ARTICLES
- Advertisment -spot_img

Most Popular