Sunday, April 20, 2025
Homeಸುದ್ದಿಗಳುಸಕಲೇಶಪುರಕೊಚ್ಚಿ ಹೋದ ಕಿರು ಸೇತುವೆ : ಕೃಷಿ ಜಮೀನಿಗಳಿಗೆ ತೆರಳಲು ಕಂಟಕ 

ಕೊಚ್ಚಿ ಹೋದ ಕಿರು ಸೇತುವೆ : ಕೃಷಿ ಜಮೀನಿಗಳಿಗೆ ತೆರಳಲು ಕಂಟಕ 

ಕೊಚ್ಚಿ ಹೋದ ಕಿರು ಸೇತುವೆ : ಕೃಷಿ ಜಮೀನಿಗಳಿಗೆ ತೆರಳಲು ಕಂಟಕ 

ಸಕಲೇಶಪುರ : ಕಳೆದ ಒಂದು ವಾರದಿಂದ ಸುರಿದ ಧಾರಕಾರ ಮಳೆಗೆ ತಾಲೂಕಿನ್ಯಾದ್ಯಂತ ಹಲವಾರು ಅವಾಂತರಗಳು ಸೃಷ್ಟಿಯಾಗಿದೆ.

ತಾಲೂಕಿನ ಕೆಲಗಳಲೆ ಗ್ರಾಮದದಲ್ಲಿದ್ದ ಕಿರು ಸೇತುವೆ ಕೊಚ್ಚಿ ಹೋಗಿದ್ದು ಪರಿಣಾಮ ರೈತರು, ಬೆಳೆಗಾರರು ತಮ್ಮ ಕೃಷಿ ಜಮೀನುಗಳಿಗೆ ತೆರಳಲು ಇದೀಗ ಸಂಕಷ್ಟ ಎದುರಾಗಿದೆ.ಕಿರು ಸೇತುವೆಯಿಂದ ಆಚೆಗೆ ಸುಮಾರು 400 ಎಕರೆ ಗದ್ದೆ, ತೋಟಗಳಿದ್ದು ಕೃಷಿ ಚಟುವಟಿಕೆ ನೆಡಸಲು ಸಂಪರ್ಕ ಕಡಿದು ಕೊಂಡಿದ್ದಾರೆ. ಕಿರು ಸೇತುವೆ ನಿರ್ಮಾಣದ ವೇಳೆ ತಡೆಗೋಡೆ ನಿರ್ಮಿಸದೆ ಅವೈಜಾನಿಕ ಕಾಮಗಾರಿಯಿಂದ ಸೇತುವೆ ಕುಸಿದು ಹೋಗಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.ಶನಿವಾರದಿಂದ ಮಳೆ ಬಿಡುವು ನೀಡಿದ್ದರು ವ್ಯವಸಾಯ ನಡೆಸಲು ತಮ್ಮ ಜಮೀನಿಗೆ ಸಾಧ್ಯವಾಗುತ್ತಿಲ್ಲ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಶೀಘ್ರವಾಗಿ ಕಿರು ಸೇತುವೆ ನಿರ್ಮಿಸಿ ಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

RELATED ARTICLES
- Advertisment -spot_img

Most Popular