ಸಕಲೇಶಪುರ : ಅಜಾದ್ ರಸ್ತೆಯ ನಿವಾಸಿಗಳಿಗೆ ಭರವಸೆ ಮೂಡಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ.
ಸಕಲೇಶಪುರ :ಶ್ರೀ ಕ್ಷೇತ್ರ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಪರವಾಗಿ ಇಂದು ಹೇಮಾವತಿ ನದಿಯ ಪ್ರವಾಹ ಪೀಡಿತ ಪ್ರದೇಶವಾದ ಅಜಾದ್ ರೋಡ್ ನಲ್ಲಿ ವಿಪತ್ತು ನಿರ್ವಹಣಾ ಕಾರ್ಯಗಳನ್ನು ನೆರವೇರಿಸಲಾಯಿತು ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸಾರ್ವಜನಿಕರಿಗೆ ಮನವರಿಕೆ ಮಾಡಲಾಯಿತು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ವಿಪತ್ತು ನಿರ್ವಹಣೆ ಘಟಕವು ಸದಾ ನಿಮ್ಮೊಟ್ಟಿಗೆ ಇದೆ ಎಂಬಂತಹ ಭರವಸೆಯನ್ನು ನೀಡಲಾಯಿತು. ಈ ವಿಪತ್ತು ಕಾರ್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮೇಲ್ವಿಚಾರಕರಾದ ಚಿರಂತ್ ಮೊಗವೀರ್ ರವರು ಭಾಗವಹಿಸಿ ಮಾಹಿತಿ ಮಾರ್ಗದರ್ಶನ ನೀಡಿದರು ಹಾಗೂ ಈ ಕಾರ್ಯದಲ್ಲಿ ವಿಪತ್ತು ನಿರ್ವಹಣಾ ಘಟಕದ ಘಟಕ ಪ್ರತಿನಿಧಿ ಮಧುವರನ್ ರವರು. ಹಾಗೂ ಎಲ್ಲಾ ವಿಪತ್ತು ಯೋಧರು ಭಾಗವಹಿಸಿದ್ದರು.