ಸಕಲೇಶಪುರದಲ್ಲಿ ಸತತ ಮಳೆಗೆ ಮನೆ ಕುಸಿತ : ಮೂರು ದಿನ ಕಳೆದರು ಸ್ಥಳಕ್ಕೆ ಬಾರದ ಅಧಿಕಾರಿಗಳು
ಸಕಲೇಶಪುರ ತಾಲೂಕಿಯಾದ್ಯಂತ ಮುಂದುವರಿದ ರಣಮಳೆಗೆ ಮನೆಯ ಗೋಡೆಗಳು ಕುಸಿಯುತ್ತಿರುವ ಘಟನೆಗಳು ನಡೆಯುತ್ತಿವೆ. ತಾಲೂಕಿನ ಬಾಳ್ಳುಪೇಟೆ ಗ್ರಾಮದಲ್ಲಿ ಮಹಿಳೆಯೊಬ್ಬರ ಮನೆ ಕುಸಿತವಾಗಿರುವ ಘಟನೆ ನಡೆದಿದೆ.
ಗ್ರಾಮದ ರತ್ನಮ್ಮ (59) ಮನೆಯೊಳಗೇ ಇರುವಾಗಲೇ ಮನೆ ಗೋಡೆ ಕುಸಿತವಾಗಿದೆ. ಮನೆ ಕುಸಿತದಿಂದ ಗಾಬರಿಗೊಂಡು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಸದ್ಯ ಈ ಘಟನೆಯಲ್ಲಿ ಯಾವುದೇ ಹಾನಿಗಳು ಆಗಿಲ್ಲ.ಘಟನೆ ನೆಡೆದು ಮೂರು ದಿನಗಳದರೂ ಯಾರೊಬ್ಬ ಅಧಿಕಾರಿಗಳು ಸ್ಥಳಕ್ಕೆ ಬಾರದೆ ಇರುವುದು ವಿಪರ್ಯಾಸ. ಸದ್ಯ ಮನೆ ಕುಸಿತದಿಂದ ಮಹಿಳೆ ಪಕ್ಕದ ಮನೆಗೆ ಸ್ಥಳಾಂತರವಾಗಿದ್ದು ಆ ಮನೆ ಕೂಡ ಶೀಥಿಲಗೊಂಡಿದ್ದು ಆತಂಕದಲ್ಲಿ ಮಹಿಳೆ ರತ್ನಮ್ಮ ವಾಸ ಮಾಡುತ್ತಿದ್ದಾರೆ. ಸರ್ಕಾರದಿಂದ ನನಗೊಂದು ಮನೆ ಮಂಜೂರು ಮಾಡಿಸಿಕೊಡಿ ಎಂದು ಮನವಿ ಮಾಡಿದ್ದಾರೆ.