Saturday, April 19, 2025
Homeಕ್ರೈಮ್ತಾಯಿಯ ಜೊತೆ ಸಂಬಂಧ ಇರಿಸಿ ಕೊಂಡಿದವನಿಗೆ ಮಚ್ಚಿನೇಟು 

ತಾಯಿಯ ಜೊತೆ ಸಂಬಂಧ ಇರಿಸಿ ಕೊಂಡಿದವನಿಗೆ ಮಚ್ಚಿನೇಟು 

ತಾಯಿಯ ಜೊತೆ ಸಂಬಂಧ ಇರಿಸಿ ಕೊಂಡಿದವನಿಗೆ ಮಚ್ಚಿನೇಟು 

ಸಕಲೇಶಪುರ: ಹಲವು ವರ್ಷಗಳಿಂದ ತಾಯಿ ಪ್ರೀತಿ ಸಿಗದಂತೆ ವಂಚಿಸಿದವನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ನೆಡೆದಿದೆ.

ತಾಲೂಕಿನ ವಾಟೇಹಳ್ಳಿ ಗ್ರಾಮದಲ್ಲಿ ವಾಸವಿದ್ದ ಪ್ರದೀಪ್ (45) ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯಾಗಿದ್ದಾನೆ.ಗಾಯಗೊಂಡಿರುವ ವ್ಯಕ್ತಿ ಮಹಿಳೆ ಓರ್ವಳ ಜೊತೆ ಕೆಲವು ವರ್ಷಗಳಿಂದ ಸಂಭಂದ ಹೊಂದಿದ್ದು ಮಹಿಳೆಯ ಮೊದಲ ಗಂಡನ ಮಗ ಅಜಯ್ (19) ಎಂಬಾತ ಪ್ರದೀಪ್ ಮೇಲೆ ಹಲ್ಲೆಗೈದಿರುವ ಆರೋಪಿಯಾಗಿದ್ದಾನೆ.ಮಹಿಳೆಯ ಮೊದಲ ಗಂಡನನ್ನು ಗಾಯಗೊಂಡಿರುವ ಪ್ರದೀಪ್ ಹೆದರಿಸಿ ಓಡಿಸಿದ್ದಾನೆ. ತನ್ನ ತಾಯಿ ಜೊತೆ ಸಂಭಂದ ಇರಿಸಿಕೊಂಡಿದ್ದಲ್ಲದೆ ನನ್ನನ್ನು ಸಹ ತಾಯಿಯಿಂದ ಪ್ರದೀಪ್ ದೂರ ಮಾಡುತ್ತಾನೆ ಎಂಬ ಆತಂಕದಲ್ಲಿ ಆರೋಪಿ ಅಜಯ್ ಪ್ರದೀಪ್ ಮೇಲೆ ಮಚ್ಚಿನಿಂದ ಮನಸೋಇಚ್ಛೆ ಹಲ್ಲೆ ನೆಡೆಸಿದ್ದಾನೆ.ಘಟನೆ ತಿಳಿಯುತ್ತಿದಂತೆ ಕಾರ್ಯಪ್ರವೃತ್ತರಾದ ಗ್ರಾಮಾಂತರ ಪೊಲೀಸರು

ಅಜಯ್ ಜೊತೆ ಕೃತ್ಯಕ್ಕೆ ಸಹಕರಿಸಿದ ಇನ್ನಿಬ್ಬರನ್ನು ಸಹ ಬಂಧಿಸಿ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -spot_img

Most Popular