Sunday, November 24, 2024
Homeಸುದ್ದಿಗಳುಸಕಲೇಶಪುರಭೂ ಮಾಪನ ಇಲಾಖೆ ಕಚೇರಿ ಬಾಗಿಲು ಹಾಕಿ ಆಲೂರು ರೈತ ಸಂಘದ ವತಿಯಿಂದ ಪ್ರತಿಭಟನೆ.

ಭೂ ಮಾಪನ ಇಲಾಖೆ ಕಚೇರಿ ಬಾಗಿಲು ಹಾಕಿ ಆಲೂರು ರೈತ ಸಂಘದ ವತಿಯಿಂದ ಪ್ರತಿಭಟನೆ.

ಭೂ ಮಾಪನ ಇಲಾಖೆ ಕಚೇರಿ ಬಾಗಿಲು ಹಾಕಿ ಆಲೂರು ರೈತ ಸಂಘದ ವತಿಯಿಂದ ಪ್ರತಿಭಟನೆ.

ಜಮೀನು ವ್ಯಾಜ್ಯ ಸಂಬಂಧ ಅಧಿಕಾರಿಗಳ ಎಡವಟ್ಟಿನಿಂದ ಪ್ರತಿಭಟನೆಗಿಳಿದ ರೈತ ಸಂಘ.

ಪೊಲೀಸರ ಮಧ್ಯಪ್ರವೇಶದಿಂದ ತಿಳಿಗೊಂಡ ಪರಿಸ್ಥಿತಿ.

ಸಕಲೇಶಪುರ: ಸಹಾಯಕ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ವಿರುದ್ದ ಆಲೂರು ರೈತ ಸಂಘದ ವತಿಯಿಂದ ಕಚೇರಿ ಬಾಗಿಲು ಹಾಕಿ ಪ್ರತಿಭಟನೆ ಮಾಡಿದ ಘಟನೆ ಸೋಮವಾರ ನಡೆಯಿತು.
ತಾಲೂಕಿನ ಹಾದಿಗೆ ಗ್ರಾಮದ ಸರ್ವೇ ನಂಬರ್ 101 ರ ಜಮೀನು ಸರ್ವೇ ಸಂಬಂದ ಏಕವ್ಯಕ್ತಿ ಪರವಾಗಿ ಸಹಾಯಕ ನಿರ್ದೇಶಕ ಪರಮೇಶ್ ಕೆಲಸ ಮಾಡುತ್ತಿರುವುದರಿಂದ ಮತ್ತೊರ್ವರಿಗೆ ಅನ್ಯಾಯವಾಗುತ್ತಿದೆ. ಈ ಸಂಭಂದ ಹಲವು ಬಾರಿ ಮನವಿ ಮಾಡಿದ್ದರು ಯಾವುದೆ ಪ್ರಯೋಜನವಾಗಿಲ್ಲ. ಸರ್ವೇ ಕಚೇರಿಯ ಬಗ್ಗೆ ಹಲವು ದೂರುಗಳಿದ್ದು ಇಲ್ಲಿನ ಪ್ರತಿಯೊಬ್ಬ ಸರ್ವೇಯರ್‌ಗಳು ಸಹ ಹಣ ಪಡೆಯದೆ ಕೆಲಸ ಮಾಡುವುದಿಲ್ಲ. ಹೆಚ್ಚು ಹಣಕೊಟ್ಟವರ ಪರವಾಗಿ ನಕ್ಷೆ ಸಿದ್ದಪಡಿಸುವ ಕೆಲಸ ನಡೆಯುತ್ತಿರುವುದರಿಂದ ತಾಲೂಕಿನಲ್ಲಿ ಭೂ ಸಂಭಂದ ಕೌಟಂಬಿಕ ವ್ಯಾಜ್ಯಗಳು ಹೆಚ್ಚುತ್ತಿವೆ ಎಂದು ಆರೋಪಿಸಿ ಕಚೇರಿಗೆ ಸಹಾಯಕ ನಿರ್ದೇಶಕರು ಕಚೇರಿಗೆ ಆಗಮಿಸ ಬೇಕು ಎಂದು ಆಗ್ರಹಿಸಿ ಕಚೇರಿಗೆ ಬಾಗಿಲು ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಈ ವೇಳೆ ದೂರವಾಣಿಯಲ್ಲಿ ಮಾತನಾಡಿದ ಭೂ ದಾಖಲೆಗಳ ಉಪನಿರ್ದೇಶಕರು ಕಚೇರಿ ಬಾಗಿಲು ಹಾಕುವುದು ಬೇಡ ಸ್ಥಳಕ್ಕೆ ಸಹಾಯಕ ನಿರ್ದೇಶಕರನ್ನು ಕಳುಸಿಕೊಡಲಾಗುವುದು ಸಹನೆಯಿಂದ ವರ್ತಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಆಲೂರು ರೈತ ಸಂಘದ ಬಣದವರು ಸದರಿ ಜಮೀನಿನ ಸರ್ವೆ ಏಕಾಏಕಿ ಆಗಬಾರದು ಏಕೆಂದರೆ ಸರ್ವೆಯರ್ ಮಾಡಿರುವ ಸ್ಕೆಚ್ ತಪ್ಪಿದೆ, ಇದನ್ನು ಸರಿಪಡಿಸಬೇಕೆಂದು ವಾದಿಸಿದರೆ ಇನ್ನೊಂದು ಬಣ ಸ್ಥಳಕ್ಕೆ ಆಗಮಿಸಿ ಸದರಿ ಜಾಗದ ಸರ್ವೆ ಮಾಡಲು ಸರ್ವೆ ಇಲಾಖೆ ಇಂದು ಮುಂದಾಗಿದ್ದು, ಆದರೆ ಕೆಲವರು ರೈತ ಸಂಘದವರನ್ನು ಮುಂದೆ ಇಟ್ಟುಕೊಂಡು ಸರ್ವೆಯನ್ನು ಮುಂದೂಡುವ ತಂತ್ರ ಮಾಡುತ್ತಿದ್ದಾರೆ. ಕೂಡಲೆ ಸರ್ವೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರಿಂದ ಎರಡು ಗುಂಪಿನ ನಡುವೆ ಪರಸ್ಪರ ವಾದ ವಿವಾದ ವಿಕೋಪಕ್ಕೆ ಹೋಗಿಯಿತು. ಈ ಹಿನ್ನಲೆಯಲ್ಲಿ ಸ್ಥಳಕ್ಕೆ ಬಂದ ಪೋಲಿಸರು ಪ್ರತಿಭಟನಕಾರರನ್ನು ಕಚೇರಿಯಿಂದ ಹೊರಕಳುಹಿಸುವಲ್ಲಿ ಯಶಸ್ವಿಯಾದರು. ನಂತರ ಡಿವೈಎಸ್‌ಪಿ ಮಿಥುನ್ ಎರಡು ಬಣದವರನ್ನು ಠಾಣೆಗೆ ಕರೆಸಿ ಶಾಂತಿಕಾಪಾಡುವಂತೆ ಸೂಚನೆ ನೀಡಿದ್ದು, ಸಹಾಯಕ ನಿರ್ದೇಶಕರ ನಿರ್ಧಾರಕ್ಕೆ ಇಬ್ಬರು ಬದ್ದರಾಗಿರುವಂತೆ ಸರ್ವೆ ಕಾರ್ಯಕ್ಕೆ ಭೂ ಮಾಪನ ಇಲಾಖೆಯವರು ಸರ್ವೆ ಕಾರ್ಯ ನಡೆಸಲು ಭದ್ರತೆ ಕೇಳಿದಲ್ಲಿ ಸೂಕ್ತ ಪೋಲಿಸ್ ವ್ಯವಸ್ಥೆ ಮಾಡಲಾಗುವುದು ಎಂದರು.

RELATED ARTICLES
- Advertisment -spot_img

Most Popular