Thursday, November 28, 2024
Homeಸುದ್ದಿಗಳುಸಕಲೇಶಪುರಅಸ್ತಿ ವಿಚಾರ ನ್ಯಾಯಲಯಲ್ಲಿದ್ದರು ಸಹ ಅನಾಧಿಕೃತವಾಗಿ ಮರಗಳ ಕಡಿತ : ಪ್ರಕರಣ ದಾಖಲಿಸಿಕೊಳ್ಳಲು ಅರಣ್ಯ ಇಲಾಖೆ...

ಅಸ್ತಿ ವಿಚಾರ ನ್ಯಾಯಲಯಲ್ಲಿದ್ದರು ಸಹ ಅನಾಧಿಕೃತವಾಗಿ ಮರಗಳ ಕಡಿತ : ಪ್ರಕರಣ ದಾಖಲಿಸಿಕೊಳ್ಳಲು ಅರಣ್ಯ ಇಲಾಖೆ ಮೀನಮೇಶ

ಅಸ್ತಿ ವಿಚಾರ ನ್ಯಾಯಲಯಲ್ಲಿದ್ದರು ಸಹ ಅನಾಧಿಕೃತವಾಗಿ ಮರಗಳ ಕಡಿತ : ಪ್ರಕರಣ ದಾಖಲಿಸಿಕೊಳ್ಳಲು ಅರಣ್ಯ ಇಲಾಖೆ ಮೀನಮೇಶ

ಹಾಸನ ಡಿ.ಎಫ್.ಓ ಸಾರ್ ನೀವು ಗಮನಿಸಿಬೇಕಾದ ವಿಚಾರ… 👇👇👇

ಸಕಲೇಶಪುರ : ಆಸ್ತಿ ವಿಚಾರವಾಗಿ ಎರಡು ಕುಟುಂಬಗಳು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು ಒಂದು ಕುಟುಂಬ ಮಾತ್ರ ಅಕ್ರಮವಾಗಿ ಮರಗಳನ್ನು ಕಡಿದಿರುವ ಪ್ರಕರಣ ನೆಡೆದಿದೆ.

ತಾಲೂಕಿನ ಹುರುಡಿ ಗ್ರಾಮದ ಪ್ರವೀಣ್ ಹಾಗೂ ಆಗನಿ ಗ್ರಾಮದ ಮಂಜುನಾಥ್ ಹಾಗೂ ಶಿವರಾಜ್   ರವರ ನಡುವೆ ಆಸ್ತಿ ಹಂಚಿಕೆ ವಿಚಾರವಾಗಿ ಎರಡು ಕುಟುಂಬಗಳು ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿದ್ದವು. ಆದರೆ ಕಳೆದ ಮೂರು ದಿನಗಳ ಹಿಂದೆ ಆಗನಿ ಗ್ರಾಮದ ಮಂಜುನಾಥ್ ಹಾಗೂ ಶಿವರಾಜ್  ಎಂಬುವವರು   ರಾತ್ರೋರಾತ್ರಿ ವಿವಾದದ ಜಾಗದಲ್ಲಿದ್ದ ವಿವಿಧ ಜಾತಿಯ 30ಕ್ಕೂ ಹೆಚ್ಚು ಮರಗಳನ್ನು ಕಡಿದ್ದಾರೆ ಎಂದು ಪ್ರವೀಣ್ ಆರೋಪಿಸಿದ್ದಾರೆ.

 ಮರಗಳನ್ನು ಕಡಿದಿರುವ ವಿಚಾರವಾಗಿ ಪ್ರವೀಣ್ ರವರು ಹಾನುಬಾಳು ವೃತ್ತದ ಅರಣ್ಯ ಪಾಲಕರಾದ ಉಮೇಶ್ ರವರ ಗಮನಕ್ಕೆ ತಂದಿದ್ದರು ಯಾವುದೇ ಪ್ರಯೋಜನವಾಗಿಲ್ಲ. ನಂತರ ಪ್ರವೀಣ್ ರವರು ವಲಯ ಅರಣ್ಯ ಅಧಿಕಾರಿ ಶಿಲ್ಪ ಅವರಿಗೆ ಪ್ರಕರಣದ ಬಗ್ಗೆ ಗಮನಕ್ಕೆ ತಂದಿದ್ದಾರೆ. ತಪ್ಪು ಮಾಡಿರುವವರ ವಿರುದ್ಧ ಪ್ರಕರಣ ದಾಖಲಿಸುತ್ತೇನೆ ಎಂದು ಭರವಸೆ ನೀಡಿರುವ ಶಿಲ್ಪಾ ರವರು ಇದುವರೆಗೂ ಮರ ಕಡಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 30ಕ್ಕೂ ಹೆಚ್ಚು ಮರಗಳನ್ನು ಕರೆದಿದ್ದು ಆದರೆ ಕಡಿದ ಮರಗಳು ಸ್ಥಳದಲ್ಲಿ ಇಲ್ಲ ಕಡಿದ ಮರಗಳನ್ನು ಸ್ಥಳದಿಂದ ಸಾಗಿಸಿದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆಗೆ ಬಂದರೆ ಏನು ಪ್ರಯೋಜನವಿದೆ ಎಂದು ಪ್ರಶ್ನಿಸಿದ್ದಾರೆ.ಹಾನುಬಾಳು ವೃತ್ತದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಮೇಶ್ ರವರು ನಮ್ಮ ಎದುರಾಳಿ ಅವರಿಂದ ಹಣ ಪಡೆದಿರುವ ಅನುಮಾನವಿದ್ದು ಪ್ರಕರಣವನ್ನು ಮುಚ್ಚಿ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಈ ಹಿನ್ನಲೆಯಲ್ಲಿ ಮರ ಕಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದರೆ ಉಪ ಸಂರಕ್ಷಣಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಕುಳಿತುಕೊಳ್ಳುವುದಾಗಿ ಪ್ರವೀಣ್ ರವರು ಎಚ್ಚರಿಕೆ ನೀಡಿದ್ದಾರೆ.

RELATED ARTICLES
- Advertisment -spot_img

Most Popular