ಸೆಕ್ಸ್ ಗೆ ಹುಡುಗಿಯರು ಬೇಕಾ ಎಂದು ಆಮಿಷ.
ಸಕಲೇಶಪುರ,ಬೇಲೂರು ತಾಲೂಕಿನ 8 ವ್ಯಕ್ತಿಗಳ ಮೋಸ. ಕೊಡಗು ಪೊಲೀಸರಿಂದ ಕಾರ್ಯಾಚರಣೆ. ಆರೋಪಿಗಳ ಬಂಧನ
ಕುಶಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೈಚನಹಳ್ಳಿ ನಿವಾಸಿ ಮಂಜು ಎಂಬುವವರು ದಿನಾಂಕ: 29-06-2024 ರಂದು ಮೊಬೈಲ್ ನಲ್ಲಿರುವ Locanto App ನಲ್ಲಿ *Kushalnagar Top Model Sexy Aunties Service Available Kushalnagar* – 23 0 35 ಸೈಟ್‌ನಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದು, ಒಬ್ಬ ವ್ಯಕ್ತಿ ಮಾತನಾಡಿ ನಾನು ಕುಶಾಲನಗರದ ಕಾಳೇಘಾಟ್ ಲಾಡ್ಜ್ ಮೇನೇಜರ್ ಎಂಬುದಾಗಿ ಪರಿಚಯಿಸಿಕೊಂಡು ಲಾಡ್ಜ್‌ನಲ್ಲಿ ಹೆಂಗಸರಿಂದ ಸೆಕ್ಸ್/ಮಸಾಜ್ ಮಾಡಿಸಲಾಗುವುದು ಹಾಗೂ ಆನ್‌ಲೈನ್ ಮೂಲಕ ಮುಂಗಡವಾಗಿ ಹಣ ಕಳುಹಿಸಿದರೆ ಈಗಲೇ ಹೆಂಗಸರ ಏರ್ಪಾಡು ಮಾಡಲಾಗುವುದು ಎಂದು ತಿಳಿಸಿದ.
ದೂರುದಾರರ Whatsapp ಗೆ ಕೆಲವು ಹೆಂಗಸರ ಭಾವಚಿತ್ರಗಳನ್ನು ಕಳುಹಿಸಿ ಕೊಟ್ಟು ಒಂದು ಗಂಟೆಗೆ ರೂ. 1500/- ಮತ್ತು ಒಂದು ರಾತ್ರಿಗೆ ರೂ. 4000/- ಗಳ ಹಣ ನೀಡಬೇಕಾಗುವುದು ಎಂದು ಹೇಳಿದ.
ದೂರುದಾರರೂ ಗೂಗಲ್ ಪೇ ಮುಖಾಂತರ ರೂ. 1500/- ಹಣವನ್ನು ಕಳುಹಿಸಿದ್ದು, ಅದೇ ವ್ಯಕ್ತಿ ಕರೆ ಮಾಡಿ ಕಾಳೇಘಾಟ್ ಲಾಡ್ಜ್ ಬಳಿ ಬಂದು ಲೋಕೇಷನ್ ಕಳುಹಿಸುವಂತೆ ಮತ್ತು ಯಾವ ಬಣ್ಣದ ಬಟ್ಟೆ ಹಾಕಿದ್ದೀರಾ ಎಂದು ತಿಳಿಸುವಂತೆ ಹೇಳಿದ.
ಆ ವ್ಯಕ್ತಿಯು ಹೇಳಿರುವಂತೆ ಕಾಳೇಘಾಟ್ ಲಾಡ್ಜ್‌ನ ಬಳಿ ಹೋಗಿ ಕರೆ ಮಾಡಿದಾಗ ಪುನಃ ಆನ್‌ಲೈನ್‌ನಲ್ಲಿ ಹಣ ಹಾಕಬೇಕು ಎಂದು ಹೇಳಿದ್ದರಿಂದ ಅನುಮಾನ ಬಂದು ಕಾಳೇಘಾಟ್ ಲಾಡ್ಜ್ ಗೆ ತೆರಳಿ ರಿಸೆಪ್‌ಶನ್‌ನಲ್ಲಿ ಈ ಮೇಲಿನ ವಿಚಾರ ಹೇಳಿದಾಗ ಆ ತರಹದ ಯಾವುದೇ ರೀತಿಯ ಅವ್ಯವಹಾರ ಇರುವುದಿಲ್ಲ ಹಾಗೂ ಇದೇ ವಿಚಾರ ಹೇಳಿಕೊಂಡು 3-4 ಜನ ಬಂದಿದ್ದರು ನಿಮಗೆ ಯಾರೋ ಮೋಸ ಮಾಡಿದ್ದಾರೆ ಪೊಲೀಸ್ ಠಾಣೆಗೆ ದೂರು ಕೊಡಿ ಎಂದು ಅಲ್ಲಿ ತಿಳಿಸಿರುತ್ತಾರೆ.
ಅದರಂತೆ ಅಪರಿಚಿತ ವ್ಯಕ್ತಿಗಳು ಕಾಳೇಘಾಟ್ ಹೋಟೇಲ್ ಮತ್ತು ಲಾಡ್ಜ್ ಮೇನೇಜರ್ ಎಂದು ಹೆಸರು ಹೇಳಿಕೊಂಡು ಲಾಡ್ಜ್‌ನಲ್ಲಿ ಹೆಂಗಸರಿಂದ ಸೆಕ್ಸ್ ಮಸಾಜ್ ಮಾಡಿಸುವುದಾಗಿ ನಂಬಿಸಿ ಆನ್‌ಲೈನ್‌ನಲ್ಲಿ ಹಣ ಪಡೆದು ವಂಚನೆ ಮಾಡಿರುವವರನ್ನು ಪತ್ತೆಹಚ್ಚಿ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ದಿನಾಂಕ: 29-06-2024 ರಂದು ದೂರು ಸ್ವೀಕರಿಸಿದ್ದು, ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ 66(ಸಿ), 66 (ಡಿ) ಐಟಿ ಆಕ್ಟ್ & 419, 420, 468 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿತ್ತು
ಸದರಿ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಆರ್.ವಿ. ಗಂಗಾಧರಪ್ಪ, ಡಿವೈಎಸ್‌ಪಿ, ಸೋಮವಾರಪೇಟೆ ಉಪವಿಭಾಗ, ಪ್ರಕಾಶ್.ಬಿ.ಜಿ, ಪಿಐ, ಚಂದ್ರಶೇಖರ್.ಹೆಚ್.ಎ, ಪಿಎಸ್‌ಐ & ಹೆಚ್.ಟಿ.ಗೀತಾ, ಪಿಎಸ್‌ಐ ಕುಶಾಲನಗರ ನಗರ ಪೊಲೀಸ್ ಠಾಣೆ ಹಾಗೂ ಉಪ ವಿಭಾಗ ಮಟ್ಟದ ಅಪರಾಧ ಪತ್ತೆ ಸಿಬ್ಬಂದಿಗಳು ಮತ್ತು ತಾಂತ್ರಿಕ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿ ಅಪರಾಧ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ & ಸಾಕ್ಷಾಧರಗಳನ್ನು ಕಲೆಹಾಕಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ದಿನಾಂಕ: 06-07-2024 ರಂದು ಹಾಸನ ಜಿಲ್ಲೆ ಮೂಲದ 08 ಜನ ಆರೋಪಿಗಳನ್ನು ಬೆಂಗಳೂರುನಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರು ತ್ತದೆ.
*ಆರೋಪಿಗಳ ವಿವರ;*
1. ಮಂಜನಾಥ, 29 ವರ್ಷ, ಸುಳ್ಳಕ್ಕಿ ಗ್ರಾಮ, ಸಕಲೇಶಪುರ ತಾ||, ಹಾಸನ ಜಿಲ್ಲೆ.
2. ಸಂದೀಪ್ ಕುಮಾರ್.ಸಿ.ಎಸ್, 25 ವರ್ಷ, ಚಿಕ್ಕ ಸತ್ತಿಗಾಲ ಗ್ರಾಮ, ಸಕಲೇಶಪುರ ತಾ||, ಹಾಸನ ಜಿಲ್ಲೆ.
3. ರಾಕೇಶ್.ಸಿ.ಬಿ, 24 ವರ್ಷ, ಚಿಕ್ಕ ಸತ್ತಿಗಾಲ ಗ್ರಾಮ, ಸಕಲೇಶಪುರ ತಾ||, ಹಾಸನ ಜಿಲ್ಲೆ.
4. ಜಯಲಕ್ಷ್ಮೀ.ಕೆ, 29 ವರ್ಷ, ಚಿಕ್ಕ ಸತ್ತಿಗಾಲ ಗ್ರಾಮ, ಸಕಲೇಶಪುರ ತಾ||, ಹಾಸನ ಜಿಲ್ಲೆ. 5. ಸಹನ.ಎಸ್, 19 ವರ್ಷ, ರಾಮನಗರ ಗ್ರಾಮ ಬೇಲೂರು ತಾ||, ಹಾಸನ ಜಿಲ್ಲೆ. 6. ಪಲ್ಲವಿ, 30 ವರ್ಷ, ರಾಮನಗರ ಗ್ರಾಮ, ಬೇಲೂರು ತಾ||, ಹಾಸನ.
5. ಸಹನ.ಎಸ್, 19 ವರ್ಷ, ರಾಮನಗರ ಗ್ರಾಮ ಬೇಲೂರು ತಾ||, ಹಾಸನ ಜಿಲ್ಲೆ.
6. ಪಲ್ಲವಿ, 30 ವರ್ಷ, ರಾಮನಗರ ಗ್ರಾಮ, ಬೇಲೂರು ತಾ||, ಹಾಸನ ಜಿಲ್ಲೆ.
7. ಅಭಿಷೇಕ್, 24 ವರ್ಷ, ಇರಗಲ್ ಗ್ರಾಮ, ಸಕಲೇಶಪುರ ತಾ||, ಹಾಸನ ಜಿಲ್ಲೆ
8. ಕಾನೂನು ಸಂಘರ್ಷಕ್ಕೊಳಗಾದ ಅಪ್ರಾಪ್ತ ಬಾಲಕಿ.
*ವಶಪಡಿಸಿಕೊಂಡ ಸ್ವತ್ತುಗಳ ವಿವರ:*
1. 2 – ಕಾರು
2. 17 –
3. 1 –
– ಮೊಬೈಲ್
– ಟ್ಯಾಬ್
4. 1 – ಲ್ಯಾಪ್‌ಟಾಪ್
5. ನಗದು ರೂ. 24,800/-
ಸದರಿ ಆರೋಪಿಗಳು ಕರೆ ಮಾಡಿದ ವ್ಯಕ್ತಿಗಳ ಊರಿನಲ್ಲಿರುವ ಲಾಡ್ಜ್‌ನ ಹೆಸರು ಹೇಳಿಕೊಂಡು ಹಲವು ಜನರಿಗೆ ವಂಚಿಸಿ ರೂ. 3 ಲಕ್ಷಕ್ಕೂ ಹೆಚ್ಚು ಹಣವನ್ನು ಪಡೆದಿರುವುದು ತನಿಖೆಯಲ್ಲಿ ತಿಳಿದುಬಂದಿರುತ್ತದೆ.
ಸದರಿ ಪ್ರಕರಣದ ಆರೋಪಿಗಳನ್ನು ಬಂದಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿರವರುಗಳನ್ನು ಕೆ. ರಾಮರಾಜನ್, ಐಪಿಎಸ್, ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ, ಮಡಿಕೇರಿ ರವರು ಶ್ಲಾಘಿಸಿರುತ್ತಾರೆ.
*ವಿಶೇಷ ಸೂಚನೆ:* ಅಂತರ್ಜಾಲದಲ್ಲಿ ಮಹಿಳೆಯರಿಂದ ಸೆಕ್ಸ್/ಮಸಾಜ್ /ವೇಶ್ಯಾವಾಟಿಕೆ ಸೇವೆಗಳು ಲಭ್ಯ ಎಂಬುದಾಗಿ ಮೊಬೈಲ್ ಸಂಖ್ಯೆಯನ್ನು ನೀಡಿ ಕರೆ ಮಾಡುವಂತೆ ಸೃಷ್ಠಿಸಿರುವ ವೆಬ್ ಸೈಟ್‌ಗಳನ್ನು ಬಳಸಿ ವಂಚನೆಗೆ ಒಳಗಾಗದಂತೆ ಸಾರ್ವಜನಿಕರಲ್ಲಿ ಕೋರಿದೆ ಮತ್ತು ಹೋಂ ಸ್ಟೇ/ರೆಸಾರ್ಟ್/ಲಾಡ್ಜ್ ಗಳಲ್ಲಿ ಸಮಾಜದ ಸ್ವಾಸ್ಥ್ಯ ಹದಗೆಡುವ ರೀತಿಯ ಯಾವುದೇ ರೀತಿಯ ಅನೈತಿಕ ಅಕ್ರಮ ಚಟುವಟಿಕೆಗಳು ನಡೆಸುತ್ತಿರುವುದು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ/ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಹಾಗೂ ಕೆ.ಎಸ್.ಪಿ ತಂತ್ರಾಶದ ಮೂಲಕ ಮಾಹಿತಿ ನೀಡಿ ಸಹಕರಿಸುವಂತೆ ಸಾರ್ವಜನಿಕರಲ್ಲಿ ಕೋರುತ್ತೇವೆ. ಅಕ್ರಮ ಚಟುವಟಿಕೆಗಗಳ ಕುರಿತು ಮಾಹಿತಿ ಒದಗಿಸುವವರ ವಿವರಗಳನ್ನು ಬಹಿರಂಗಪಡಿಸುವುದಿಲ್ಲ.