Friday, November 29, 2024
Homeಸುದ್ದಿಗಳುಸಕಲೇಶಪುರಹಾನುಬಾಳು ಗ್ರಾಮ ಪಂಚಾಯಿತಿಯಲ್ಲಿ 2024-25 ನೇ ಸಾಲಿನ ಮೊದಲ ಹಂತದ ಕೆಡಿಪಿ ಸಭೆ

ಹಾನುಬಾಳು ಗ್ರಾಮ ಪಂಚಾಯಿತಿಯಲ್ಲಿ 2024-25 ನೇ ಸಾಲಿನ ಮೊದಲ ಹಂತದ ಕೆಡಿಪಿ ಸಭೆ

ಹಾನುಬಾಳು ಗ್ರಾಮ ಪಂಚಾಯಿತಿಯಲ್ಲಿ 2024-25 ನೇ ಸಾಲಿನ ಮೊದಲ ಹಂತದ ಕೆಡಿಪಿ ಸಭೆ

ಸಕಲೇಶಪುರ : ತಾಲೂಕಿನ ಹಾನುಬಾಳು ಗ್ರಾಮ ಪಂಚಾಯಿತಿಯಲ್ಲಿ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಸಂತೋಶ್ ಕೆ ಆರ್ ರವರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ಜರುಗಿತು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ಮುಖ್ಯವಾಗಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಡೆಂಗ್ಯೂ ನಿಯಂತ್ರಣದ ಬಗ್ಗೆ ಗ್ರಾಮ ಪಂಚಾಯಿತಿ ಪ್ರಾಥಮಿಕ ಆರೋಗ್ಯ ವೈದ್ಯಾಧಿಕಾರಿಗಳಾದ ರಾಧಕೃಷ್ಟ ರವರು ಮಾಹಿತಿ ನೀಡಿದರು. ನಂತರ ಸಮಾಜ ಕಲ್ಯಾಣ ಇಲಾಖೆಯಿಂದ ಇಲಾಖೆ ಮತ್ತು ಹಾಸ್ಟೆಲ್ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಅಂಗನವಾಡಿ ಮತ್ತು ಗೃಹ ಲಕ್ಷ್ಮೀ ಯೋಜನೆಗಳ ಬಗ್ಗೆ ಸಭೆಗೆ ಮಾಹಿತಿ ಒದಗಿಸಿದರು. ಅಂಗನವಾಡಿಗಳಲ್ಲಿ ದೊರೆಯುವ ಆಹಾರದ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಹಾಯಕ ಕೃಷಿ ನಿರ್ದೇಶಕರು, ಪಶು ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಎಲ್ಲಾ ಶಾಲೆಗಳ ಮುಖ್ಯ ಶಿಕ್ಷರು, ಅಂಗನವಾಡಿ ಶಿಕ್ಷಕಿಯರು ಹಾಜರಿದ್ದರು. ಪೋಲೀಸ್, ಅಬಕಾರಿ, ಚೆಸ್ಕಾಂ ಇಲಾಖೆಯಿಂದ ಸಿಬ್ಬಂದಿ ಹಾಜರಾಗಿಲ್ಲದ್ದರ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮೇಲಾಧಿಕಾರಿಗಳಿಗೆ ಪತ್ರ ಬರೆಯುವಂತೆ ಸಭೆಯಲ್ಲಿ ತಿಳಿಸಿದರು. 

ಈ ವೇಳೆ ಗ್ರಾಮ ಪಂಚಾಯಿತಿ ಸಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮೋಹನ್ ಕುಮಾರ್ ಅಚ್ಚರಡಿ ಮಾತನಾಡಿ ಈ ಸಭೆ ಪ್ರಗತಿ ಪರಿಶೀಲನಾ ಸಭೆಯಾಗಬೇಕು ಕೇವಲ ಸೌಲಭ್ಯಗಳ ವಿವರಣೆ ನೀಡುವಂತಾಗಬಾರದು. ಗ್ರಾಮ ಪಂಚಾಯಿತಿ ಮತ್ತು ಸ್ಥಳೀಯ ಇಲಾಖೆಯ ಹೊಂದಾಣಿಕೆ ಈ ಸಭೆ ಅತ್ಯಗತ್ಯವಿದ್ದು, ಮುಂದಿನ ಸಭೆಗೆ ಇನ್ನು ಅಚ್ಚುಕಟ್ಟಾಗಿ ವರದಿಯೊಂದಿಗೆ ಹಾಜರಾಗಲು ಕೋರಿದರು. 

ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಶೈಲಾ ಹಾಜರಿದ್ದರು, ಸದಸ್ಯರಾದ ಗೀರೀಶ್, ಸುರೇಶ್, ಯೋಗರಾಜ್, ಶ್ರೀಮತಿ ಶಿಲ್ಪ, ಶ್ರೀಮತಿ ವಿಮಲ, ಶೋಭಾ, ಹರಿಣಾಕ್ಷಿ ಹಾಜರಿದ್ದರು, ಸಹಾಯಕ ನಿರ್ದೇಶಕರು & ಪಂ. ಅ. ಅ ಹರೀಶ್ ಕಾರ್ಯದರ್ಶಿ ವೀಣಾ ಉಪಸ್ಥಿತರಿದ್ದರು.

RELATED ARTICLES
- Advertisment -spot_img

Most Popular