ರೋಟರಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ.
ಸಕಲೇಶಪುರ: ಬದುಕು ಬದಲಿಸಿಕೊಳ್ಳಲು ರೋಟರಿ ಸಂಸ್ಥೆ ಸೇರಿ ಎಂದು ಹಿರಿಯ ರೋಟೆರಿಯನ್ ಶೇಖರ್ ಹೇಳಿದರು.
ಮಂಗಳವಾರ ಪಟ್ಟಣದ ರೋಟರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ರೋಟರಿ ಸಂಸ್ಥೆಗೆ ಬಧುಕು ಕಟ್ಟಿಕೊಳ್ಳಲು ಬರಬೇಡಿ,ಒತ್ತಡ,ಹತಾಸೆುಂದ ಪರಾಗಲು ಸಂಸ್ಥೆಯನ್ನು ಸೇರಿ. ಸಾಮಾನ್ಯವಾಗಿ ಸೇವೆ ಮಾಡುವ ಉದ್ದೇಶಕ್ಕಾಗಿ ರೋಟರಿ ಸೇರುತ್ತೆವೆ ಎಂಬುದು ಸಾಮಾನ್ಯ ಜನರಲ್ಲಿ ಇರುವ ನಂಬಿಕೆ. ಸಮಾಜ ಸೇವೆಗೆ ರೋಟರಿ ಸಂಸ್ಥೆಯನ್ನೆ ಸೇರಬೇಕು ಎಂಬುದು ತಪ್ಪು. ಸೇವೆ ಮಾಡಲು ಹಲವು ವಿಧಾನಗಳಿವೆ. ಆದರೆ, ವ್ಯಕ್ತಿತ್ವ ವಿಕಾಸನ,ಸಂಸ್ಕಾರವಂತರ ಒಡನಾಟಕ್ಕಾಗಿ ರೋಟರಿ ಸೇರಬೇಕು. ನಗುವಿಗೆ ಪ್ರಪಂಚವನ್ನೆ ಗೆಲ್ಲುವ ಶಕ್ತಿುದ್ದು ನಗುವ ಮೂಲಕ ವಾತವಾರಣವನ್ನು ಸಂತಸದಲ್ಲಿಡುವ ಕಲೆಯನ್ನು ರೋಟರಿ ಕಲಿಸುತ್ತದೆ. ಮನುಷ್ಯನ ಮನಸ್ಥಿತಿ ಬದಲಿಸುವ ಶಕ್ತಿ ಸಂಸ್ಥೆಗೆ ಇದೆ ಎಂದರು.
2023-24 ನೇ ಸಾಲಿನ ರೋಟರಿ ಸಂಸ್ಥೆ ಅಧ್ಯಕ್ಷರಾಗಿ ಸುರೇಂದ್ರ,ಕಾರ್ಯಧರ್ಶಿಯಾಗಿ ರವಿರಾಜ್‌ಶೆಟ್ಟಿ, ಉಪಾಧ್ಯಕ್ಷರಾಗಿ ಚಂದ್ರಶೇಖರ್,ಖಜಾಂಚಿಯಾಗಿ ಶಶಿಧರ್ ಆಯ್ಕೆಯಾದರು.
ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಸದಾಶಿವ ಹಾಗೂ ಕಾರ್ಯದರ್ಶಿ ಅವಿನಾಶ್,ಯಶ್ವಂತ್ ಮುಂತಾದವರಿದ್ದರು.
ಈ ವೇಳೆ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿಧ್ಯಾರ್ಥಿಗಳನ್ನು ಸನ್ಮಾನಿಸಲಾಯಿತು