ಆಯುಷ್ ಇಲಾಖೆ ಉಪನಿರ್ದೇಶರನ್ನ ತರಾಟೆಗೆ ತೆಗೆದುಕೊಂಡ- ಶಾಸಕ ಸಿಮೆಂಟ್ ಮಂಜು.
ಸಕಲೇಶಪುರ : ಅರೋಗ್ಯ ರಕ್ಷಾ ಸಮಿತಿ ಸಭೆಗೆ ಬಾರದ ಆಯುಷ್ ಇಲಾಖೆ ಉಪನಿರ್ದೇಶಕಿ ಮೊಸ್ಯಾಬರ‍್ಯಾ ಅವರನ್ನು ಶಾಸಕ ಸೀಮೆಂಟ್ ಮಂಜು ಕರೆಮಾಡಿ, ಶಾಸಕರು ಕರೆದ ಸಭೆಗೆ ಬರದಿರುವಷ್ಟು ನಿರ್ಲಕ್ಷವೇ ನಿಮಗೆ ಜಿಲ್ಲೆಯಲ್ಲಿ ನಿಮ್ಮ ಆಸ್ಪತ್ರೆಗಳು ಎಷ್ಟಿದೆ. ಕಚೇರಿಯಲ್ಲಿ ಕುಳಿತು ಏನ್ ಮಾಡುತ್ತಿದ್ದಿರ, ಸಾರ್ವಜನಿಕರ ಕೆಲಸಮಾಡಲು ನಾನು ಬಂದಿರುವುದು ನನ್ನ ಸ್ವಂತ ಕೆಲಸ ಮಾಡಲು ಬಂದಿಲ್ಲ. ಜಿಲ್ಲೆಗೆ ನೀವು ಬಂದು ಮೂರು ತಿಂಗಳಾದರು ಇದುವರಗೆ ನಿಮ್ಮ ಮುಖ ನೋಡಿಲ್ಲ. ಇದುವರಗೆ ನಿಮ್ಮನ್ನು ನಾವು ಸಭೆಗೆ ಕರೆದಿದ್ದೇವ, ಮತ್ತೊಮ್ಮೆ ಇದೆ ಪರಿಸ್ಥಿತಿ ಮುಂದುವರೆದರೆ ಉನ್ನತ ಅಧಿಕಾರಿಗಳಿಗೆ ನಿಮ್ಮ ವಿರುದ್ದ ದೂರು ನೀಡಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.