ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ 16ನೇ ವರ್ಷದ ಸಂಸ್ಥಾಪನ ದಿನಾಚರಣೆ.
ಸಕಲೇಶಪುರ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾವತಿಯಿಂದ ಪಕ್ಷದ 16ನೇ ವರ್ಷದ ಸಂಸ್ಥಾಪನ ದಿನಾಚರಣೆಯ ಪ್ರಯುಕ್ತ ದ್ವಜಾರೋಹಣ ಕಾರ್ಯಕ್ರಮವು ಪಟ್ಟಣದ ಅಜಾದ ರಸ್ತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ, ಆನೆ ಮಹಲ್ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಅಶ್ರಫ್, ಎಸ್ ಡಿ ಪಿ ಐ ಪಕ್ಷದ ಯಶಸ್ಸನ್ನು ಸಹಿಸಲಾಗದ ಕೆಲವರು ನಮ್ಮ ಪಕ್ಷವನ್ನು ಹಿಂದೂ ವಿರೋಧಿ ಪಕ್ಷವೆಂದು ಹೇಳಿಕೊಂಡು ಪಕ್ಷದ ಮೇಲೆ ಗೂಬೆಕೂರಿಸುತ್ತಿದ್ದಾರೆ. ನಮ್ಮ ಪಕ್ಷವು ಜಾತ್ಯಾತೀತ ಸಾಮಾಜಿಕ ನ್ಯಾಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ತಾಲೂಕಿನ ಆನೆ ಮಹಲ್ ಗ್ರಾಮ ಪಂಚಾಯಿತಿಯಲ್ಲಿ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಅಧಿಕಾರವನ್ನು ಪಡೆದ ಸಂದರ್ಭದಲ್ಲಿ ಭ್ರಷ್ಟಾಚಾರ ರಹಿತ ಸಾಮಾಜಿಕ ನ್ಯಾಯದ ಅಡಿಯಲ್ಲಿ ಕಾರ್ಯನಿರ್ವಹಿಸಿದ್ದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು. ದೇಶದಲ್ಲಿ ಬಲಿಷ್ಠವಾದ ಕೋಮುವಾದವನ್ನು ಸೊಲಿಸುವ ಹಾಗೂ ಜನರ ನೈಜ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಮೌಲ್ಯಧಾರಿತ ರಾಜಕಾರಣದ ಅಗತ್ಯವಿದ್ದು, ಈ ಜವಾಬ್ದಾರಿಯನ್ನು ಎಸ್.ಡಿ.ಪಿ.ಐನ ಎಲ್ಲಾ ಸದಸ್ಯರು, ಕಾರ್ಯಕರ್ತರು ಜವಾಬ್ದಾರಿಯುತವಾಗಿ ನಿಭಾಯಸುವ ಮೂಲಕ ಪಕ್ಷವನ್ನು ಇನ್ನಷ್ಟು ಬಲಿಷ್ಠ ಗೊಳಿಸಬೇಕೆಂದು ಕಾರ್ಯಕ್ರಮದ ಮೊದಲಿಗೆ ಧ್ವಜಾರೋಹನವನ್ನು ಹಾಸನ ಜಿಲ್ಲಾ ಗ್ರಾಮಾಂತರ ಎಸ್ ಡಿ ಪಿ ಪಕ್ಷದ ಅಧ್ಯಕ್ಷ ಇಮ್ರಾನ್ ಅರೇಹಳ್ಳಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ವಾಜಿದ್, ಅನ್ಸರ್ ಹೈದರ್ ಇನ್ನಿತರರು ಇದ್ದರು