ಸಕಲೇಶಪುರ ಪುರಸಭಾ ವ್ಯಾಪ್ತಿಯ ನೀರುಗಂಟಿ ನಿಧನ.
ಸಕಲೇಶಪುರ : ಪುರಸಭಾ ವ್ಯಾಪ್ತಿಯಲ್ಲಿ ನೀರುಗಂಟಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲೋಕೇಶ್ ಇಂದು ಮುಂಜಾನೆ ನಿಧನರಾಗಿದ್ದಾರೆ.
ಕುಡುಗರಳ್ಳಿಯ ಸಂತೋಷ್ ನಗರದಲ್ಲಿ ವಾಸವಿದ್ದ ಮೃತ ಲೋಕೇಶ್ ರವರು ಸುಮಾರು 32 ವರ್ಷಗಳಿಂದ ಸಕಲೇಶಪುರ ಪುರಸಭೆ ವ್ಯಾಪ್ತಿಯಲ್ಲಿ ನೀರುಗಂಟಿ ಕಾರ್ಯ ನಿರ್ವಹಿಸಿದ್ದರು.ನೀರುಗಂಟಿ ಲೋಕೇಶ್ ನಿಧನಕ್ಕೆ ಪುರಸಭೆ ಎಲ್ಲ 23 ವಾರ್ಡಿನ ಸದಸ್ಯರು, ಪುರಸಭಾ ಮುಖ್ಯಧಿಕಾರಿ, ಪುರಸಭಾ ಸಿಬ್ಬಂದಿಗಳು ಸಂತಾಪ ಸೂಚಿಸಿದ್ದಾರೆ.