ಸಕಲೇಶಪುರ :ಬ್ಯಾಕರವಳ್ಳಿ ಪಂಚಾಯಿತಿ ಕಾಫಿ ಬೆಳೆಗಾರರ ಸಂಘದ ಕಛೇರಿಯ ಉದ್ಘಾಟನೆ.
ಸಕಲೇಶಪುರ : ಬೆಳೆಗಾರರ ಕುಂದು ಕೊರತೆಗಳು ಹಾಗೂ ಬೆಳೆಗಾರರ ಶ್ರೇಯೋಭಿವೃದ್ಧಿಗೆಗಾಗಿ ಪಂಚಾಯಿತಿ ಮಟ್ಟದಲ್ಲಿ ಬೆಳೆಗಾರರ ಸಂಘದ ಕಚೇರಿ ಉದ್ಘಾಟನೆ ಮಾಡಲಾಗುತ್ತಿದ್ದು.
ಇಂದು ತಾಲೂಕಿನ ಬ್ಯಾಕರವಳ್ಳಿ ಪಂಚಾಯಿತಿ ಕಾಫಿ ಬೆಳೆಗಾರರ ಸಂಘದ ಕಛೇರಿಯ ಉದ್ಘಾಟನೆ ನೆರವೇರಿಸಲಾಯಿತು.
ಕಚೇರಿಯನ್ನು ಉದ್ಘಾಟಿಸಿದ ಬ್ಯಾಕರವಳ್ಳಿ ಪಂಚಾಯಿತಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಶ್ರೀ ಬಿ ಎಂ ಪ್ರಸನ್ನ ಬೆಳೆಗಾರರನ್ನು ಕುರಿತು ಮಾತನಾಡಿದರು. ಸಂಘದ ಬೆಳವಣಿಗೆ, ಸಂಘದಿಂದ ದೊರೆಯುವ ಸೌಲಭ್ಯಗಳು ಕುರಿತು ಬೆಳೆಗಾರರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬ್ಯಾಕರವಳ್ಳಿ ಪಂಚಾಯಿತಿ ಕಾಫಿ ಬೆಳೆಗಾರರ ಸಂಘದ ಕಾರ್ಯದರ್ಶಿ ಅರೆಕೆರೆ ಕುಮಾರಸ್ವಾಮಿ, ಉಪಾಧ್ಯಕ್ಷರಾದ ಎ ಕೆ ಯಶ್ವಂತ್, ಕಸಬಾ ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷರಾದ ರಾಮೇನಹಳ್ಳಿ ಚಂದ್ರಶೇಖರ್, ಉಪಾಧ್ಯಕ್ಷರಾದ ಮೇಘರಾಜ ಕಾಮನಹಳ್ಳಿ, ಕಾರ್ಯದರ್ಶಿ ಬಿ ಎಂ ಮದನ್ ಕುಮಾರ್, ನಿರ್ದೇಶಕರುಗಳಾದ ಹರ್ಷ ಐಹಲ್ಲಿ, ಅಭಿಷೇಕ್ ಬ್ಯಾಕರವಳ್ಳಿ, ಕಾಫಿ ಬೆಳೆಗಾರರಾದ ಎ ವಿ ನರೇಶ್, ಹಿರಿಯರಾದ ಶ್ರೀ ಅಪ್ಪಣ್ಣಗೌಡ್ರು , ಜಯಣ್ಣ ಕಾಮನಹಳ್ಳಿ, ಪಂಚಾಯಿತಿಯ ಉಪಾಧ್ಯಕ್ಷರಾದ ಚೆನ್ನಯ್ಯ ಮತ್ತು ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಬೆಳೆಗಾರರು ಹಾಜರಿದ್ದರು.