Saturday, April 12, 2025
Homeಸುದ್ದಿಗಳುಬೆಲೆ ಏರಿಕೆ ಭಾಗ್ಯ ಕೊಟ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಯುವ ಮುಖಂಡ ಶರತ್ ವಿರಾಸ್...

ಬೆಲೆ ಏರಿಕೆ ಭಾಗ್ಯ ಕೊಟ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಯುವ ಮುಖಂಡ ಶರತ್ ವಿರಾಸ್ ಆಕ್ರೋಶ.

ಬೆಲೆ ಏರಿಕೆ ಭಾಗ್ಯ ಕೊಟ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಯುವ ಮುಖಂಡ ಶರತ್ ವಿರಾಸ್ ಆಕ್ರೋಶ.

ವಾಹನ ಸವಾರರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಬಿಗ್ ಶಾಕ್ ಕೊಟ್ಟಿದೆ.

ಸಕಲೇಶಪುರ : ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟದ ತೆರಿಗೆ ದರವನ್ನ ಹೆಚ್ಚಳ ಮಾಡಿದೆ. ಹೊಸ ದರ ಇಂದಿನಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. ಸರ್ಕಾರದ ಈ ನಿರ್ಧಾರಕ್ಕೆ ರಾಜ್ಯದೆಲ್ಲೆಡೆ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕು ಬಿಜೆಪಿ ಯುವ ಮುಖಂಡ ಶರತ್ ವಿರಾಸ್ ಮಾತನಾಡಿ ಈಗಾಗಲೇ ಎಲ್ಲಾ ಬೆಲೆಗಳು ಜಾಸ್ತಿಯಾಗಿವೆ. ಇದೀಗ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ‌ ಮಾಡಿದ್ದಾರೆ. ಹೀಗೆ ಬೆಲೆ‌ ಏರಿಕೆಯಾದರೆ ಬಡವರು ಏನು ಮಾಡಬೇಕು. ತರಕಾರಿಯಿಂದ‌ ಹಿಡಿದು ದಿನಸಿವರೆಗೂ ಬೆಲೆ ಜಾಸ್ತಿಯಾಗಿದೆ.ತೈಲ ಬೆಲೆ ಏರಿಕೆ‌ ಜನ ವಿರೋಧಿಯಾಗಿದೆ. ಚುನಾವಣೆ ಮುಗಿದ ಮೇಲೆ ಬೆಲೆ ಏರಿಕೆ‌ ಮಾಡಿದ್ದಾರೆ. ಬೆಲೆ ಏರಿಕೆ ಜನ ಸಾಮಾನ್ಯರಿಗೆ ಬರೆ ಎಳೆದಂತೆ. ಅಭಿವೃದ್ಧಿ ಹಾಗೂ ಗ್ಯಾರಂಟಿಗಳಿಗಾಗಿ ಬೆಲೆ ಏರಿಕೆ ಯಾಕೆ? ಜನರ ಹಣ ಕಿತ್ತು ಕೆಲಸ‌ ಮಾಡಿದಂತಾಗುತ್ತದೆ. ಪೆಟ್ರೋಲ್, ಡಿಸೈಲ್ ದರ ಏರಿಕೆ ಮಾಡುವುದು ಸರಿಯಲ್ಲ. ಇದಕ್ಕೆ ನಮ್ಮ ವಿರೋಧವಿದೆ ಕ್ಯಾಬ್‌‍, ಟ್ಯಾಕ್ಸಿ ಕಾರುಗಳು, ಸರಕು ಸಾಗಾಣೆ ಹಾಗೂ ಖಾಸಗಿ ಬಸ್‌‍, ಹಾಲಿನ ವಾಹನಗಳು, ಜೆಸಿಬಿ, ಟ್ಯಾಂಕರ್‌ ಗಳು ಒಳಗೊಂಡಂತೆ 83ಲಕ್ಷಕ್ಕೂ ಅಧಿಕ ಹಳದಿ ಬೋರ್ಡ್‌ ವಾಹನಗಳು ರಾಜ್ಯದಲ್ಲಿ ಸಂಚರಿಸುತ್ತವೆ. ದರ ಏರಿಕೆಯಿಂದ ಎಲ್ಲಾ ವಸ್ತುಗಳ ಬೆಲೆ ಹೆಚ್ಚಳಕ್ಕೆ ದಾರಿಯಾಗುತ್ತದೆ. ವಾಣಿಜ್ಯ ವಾಹನಗಳ ಮಾಲೀಕರು ಮತ್ತು ಚಾಲಕರಿಗೆ ದರ ಏರಿಕೆ ಬರೆ ಎಳೆದಂತಾಗಿದೆ ಎಂದು ಅವರು ತಿಳಿಸಿದ್ದಾರೆ.

RELATED ARTICLES
- Advertisment -spot_img

Most Popular