Friday, November 22, 2024
Homeಸುದ್ದಿಗಳುಸಕಲೇಶಪುರಜೂನ್ 17 ರಿಂದ 19 ರವರಗೆ ಹಸಗವಳ್ಳಿ ಶ್ರೀ ಬನಶಂಕರಿ ಅಮ್ಮನವರ ಜಾತ್ರಾ ಮಹೋತ್ಸವ.

ಜೂನ್ 17 ರಿಂದ 19 ರವರಗೆ ಹಸಗವಳ್ಳಿ ಶ್ರೀ ಬನಶಂಕರಿ ಅಮ್ಮನವರ ಜಾತ್ರಾ ಮಹೋತ್ಸವ.

ಜೂನ್ 17 ರಿಂದ 19 ರವರಗೆ ಹಸಗವಳ್ಳಿ ಶ್ರೀ ಬನಶಂಕರಿ ಅಮ್ಮನವರ ಜಾತ್ರಾ ಮಹೋತ್ಸವ.

ಸಕಲೇಶಪುರ ತಾಲೂಕಿನಲ್ಲಿರುವ ಏಕೈಕ ಬನಶಂಕರಿ ಅಮ್ಮನವರ ದೇವಸ್ಥಾನ.

ಸಕಲೇಶಪುರ : ತಾಲೂಕಿನ ಬೆಳಗೋಡು ಹೋಬಳಿ ಬಾಳ್ಳುಪೇಟೆ ಸಮೀಪದ ಹಸಗವಳ್ಳಿಯ ಬನಶಂಕರಿ ಅಮ್ಮನವರ ಚರಮೂರ್ತಿ ಪ್ರತಿಷ್ಠಾಪನೆ ಹಾಗೂ ಅದ್ದೂರಿ ಜಾತ್ರಾ ಮಹೋತ್ಸವ ಇದೆ ಜೂನ್ 17 (ಸೋಮವಾರ)ದಿಂದ 19 (ಬುಧುವಾರ) ವರೆಗೂ ಜರುಗಲಿದೆ ಎಂದು ಶ್ರೀ ಬನಶಂಕರಿ ದೇವಾಲಯ ಸಮಿತಿ ತಿಳಿಸಿದೆ.

ತಾಲೂಕಿನಲ್ಲೆಯೇ ಬನಶಂಕರಿ ಅಮ್ಮನವರ ದೇವಾಲಯ ಇದಾಗಿದ್ದು ದಿನಾಂಕ 17 ರಂದು ಬನಶಂಕರಿ ದೇವಿಯ ಉತ್ಸವ ಹಾಗೂ ಸಂಜೆ 6:30ಕ್ಕೆ ದೇವತಾ ಪ್ರಾರ್ಥನೆ, ಗಂಗಾ ಪೂಜೆ, ಗೋ ಪೂಜೆ, ದೇವಾಲಯ ಪ್ರವೇಶ, ಮಹಾಗಣಪತಿ ಪೂಜೆ ಮಹಾಸಂಕಲ್ಪ, ಪುಣ್ಯಾಹವಾಚನ ಋತ್ವಿಕ್ ವರ್ಣನೆ ದೇವಾನಾಂದಿ ಪಂಚಗವ್ಯ ಸಂಪನ್ನೇ, ಸರ್ಷಪ ವಿಕಿರಣ, ಬಿಂಬಶುದ್ದಿ,ಅಗುತ್ತರಣ, ರಕ್ಷಾ ಸೂತ್ರಧಾರಣ, ಅಂಕುರಾರ್ಪಣ ನೆರವೇರಲಿದೆ.

ಎರಡನೇ ದಿನವಾದ ಜೂನ್ 18-06-2024ನೇ ಮಂಗಳವಾರ ಬೆಳಗ್ಗೆ ಕಲಶಸ್ಥಾಪನೆ, ಜಲಾದಿವಾಸ, ಕ್ಷೀರಾಧಿವಾಸ, ಧಾನ್ಯಾಧಿವಾಸ, ವಸ್ತ್ರಾಧಿವಾಸ,ಫಲಾಧೀವಾಸ, ರತ್ನಾಧಿವಾಸ, ಪುಷ್ಪಾಧಿವಾಸ ಸಂಜೆ 5 ಘಂಟೆಯಿಂದ ಮಂಡಲರಚನೆ, ದೇವತಾಪೂಜೆ, ನವಗ್ರಹ ಹೋಮ, ರಾಕೋಘ್ನ ಹೋಮ, ಪರ್ಯಾಯತ್ರಯ ಹೋಮ, ಪೂರ್ಣಾಹುತಿ ಪ್ರಾಕಾರಶುದ್ಧಿ, ದಿಗ್ಗಲಿ, ಶಯಾದಿವಾಸ, ಪುರುಷಸೂಕ್ತ, ಶ್ರೀ ಸೂಕ್ತನ್ಯಾಸ, ಪೂರ್ವಕ, ನಿದ್ರಾಕಲಶ ಸ್ಥಾಪನೆ, ಮಂಗಳಾರತಿ ಜರುಗಲಿದ್ದು ರಾತ್ರಿ ವಿಶೇಷವಾಗಿ ವೀರಗಾಸೆ ಕುಣಿತ ಹಾಗೂ ಸಿಡಿಮದ್ದು ಸಿಡಿಸುವ ಕಾರ್ಯಕ್ರಮವಿದೆ.

ಮೂರನೇ ದಿನವಾದ ಜೂನ್ 19 ಬುಧವಾರ ಬೆಳಗ್ಗೆ ಬ್ರಾಹಿಂ ಮುಹೂರ್ತದಲ್ಲಿ ಶಿಖರ ಪ್ರತಿಷ್ಠೆ ನೇತ್ರೋನ್‌ಮಿಲನ, ಪ್ರಾಣಪ್ರತಿಷ್ಠೆ ಪೂಜಾಂಗ ಪ್ರತಿಷ್ಠಾಂಗ ಹೋಮ,ತತ್ವನ್ಯಾಸ, ಕಲಾನ್ಯಾಸ ಹೋಮ, ದುರ್ಗಾಹೋಮ, ಸುಬ್ರಹ್ಮಣ್ಯ ಗಣಪತಿ ಹೋಮ, ಪುಣ್ಯಾಹುತಿ, ನಿರೀಕ್ಷಣೆ ಕಲಶಾಭಿಷೇಕ ಮಹಾಪೂಜೆ, ಮಹಾ ನೈವೇದ್ ನಡೆಯಲಿದ್ದು ನಂತರ ಧಾರ್ಮಿಕ ಸಮ್ಮೇಳನ ನೆಡೆಯಲಿದೆ. ಧಾರ್ಮಿಕ ಸಮ್ಮೇಳನಕ್ಕೆ ದಿವ್ಯ ಸಾನಿಧ್ಯವನ್ನು ಶ್ರೀ ಶ್ರೀ ದಯಾನಂದ ಪುರಿ ಸ್ವಾಮಿಗಳು ವಹಿಸಲಿದ್ದು, ವಿಶೇಷ ಅತಿಥಿಗಳಾಗಿ ಶ್ರೀ ಎಮ್. ಡಿ ಲಕ್ಷ್ಮೀನಾರಾಯಣ ರವರು ಆಗಮಿಸಲಿದ್ದಾರೆ ಎಲ್ಲಾ ಕಾರ್ಯಕ್ರಮಗಳಿಗೂ ತಾಲೂಕಿನ ಎಲ್ಲಾ ಭಕ್ತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಾಯಿಯವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಬನಶಂಕರಿ ದೇವಾಲಯ ಸಮಿತಿ ತಿಳಿಸಿದೆ.

RELATED ARTICLES
- Advertisment -spot_img

Most Popular