Friday, November 29, 2024
Homeಸುದ್ದಿಗಳುಸಕಲೇಶಪುರವಿದ್ಯಾರ್ಥಿಗಳಿಂದ ರಕ್ಷಿತಾರಣ್ಯದಲ್ಲಿ ಹಣ್ಣಿನ ಬೀಜಗಳ ಬಿತ್ತನೆ: ಪರಿಸರ ಸಂರಕ್ಷಣಾ ಬಳಗದ ನೇತೃತ್ವದಲ್ಲಿ ಜಾಗೃತಿ ಕಾರ್ಯಕ್ರಮ.

ವಿದ್ಯಾರ್ಥಿಗಳಿಂದ ರಕ್ಷಿತಾರಣ್ಯದಲ್ಲಿ ಹಣ್ಣಿನ ಬೀಜಗಳ ಬಿತ್ತನೆ: ಪರಿಸರ ಸಂರಕ್ಷಣಾ ಬಳಗದ ನೇತೃತ್ವದಲ್ಲಿ ಜಾಗೃತಿ ಕಾರ್ಯಕ್ರಮ.

ವಿದ್ಯಾರ್ಥಿಗಳಿಂದ ರಕ್ಷಿತಾರಣ್ಯದಲ್ಲಿ ಹಣ್ಣಿನ ಬೀಜಗಳ ಬಿತ್ತನೆ: ಪರಿಸರ ಸಂರಕ್ಷಣಾ ಬಳಗದ ನೇತೃತ್ವದಲ್ಲಿ ಜಾಗೃತಿ ಕಾರ್ಯಕ್ರಮ.

ಸಕಲೇಶಪುರ : ಪರಿಸರದಲ್ಲಿ ಗಿಡಮರಗಳನ್ನು ಬೆಳೆಸಿ ಸಂರಕ್ಷಿಸದಿದ್ದರೆ ಭವಿಷ್ಯದಲ್ಲಿ ಭೀಕರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಯುವ ಪೀಳಿಗೆಗೆ ಪರಸರದ ಬಗ್ಗೆ ಜಾಗೃತಿ ಮೂಡಿಸುವುದು ಮುಖ್ಯ ಎಂದು ಪರಿಸರ ಸಂರಕ್ಷಣಾ ಬಳಗದ ಮುಖಂಡ ದೊಡ್ಡದಿಣ್ಣೆ ಜೈ ಪ್ರಕಾಶ್ ಹೇಳಿದರು.

ಶನಿವಾರ ತಾಲೂಕಿನ ಮಾರನಹಳ್ಳಿ ಸಮೀಪ ರಕ್ಷಿತರಣ್ಯದಲ್ಲಿ ಹಣ್ಣಿನ ಹಾಗೂ ಇತರೆ ಕಾಡು ಮರಗಳ ಬೀಜಗಳನ್ನು ವಿದ್ಯಾರ್ಥಿಗಳ ಮೂಲಕ ಬಿತ್ತುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಪರಿಸರ ಸಂರಕ್ಷಣೆ ಎಲ್ಲರ ಕರ್ತ್ಯವ್ಯವಾಗಬೇಕು. ಆರೋಗ್ಯ ಕರವಾಗಿ ಬದುಕಿಗಾಗಿ ಪರಸರ ಉಳಿವು ಅಗತ್ಯ ಜೊತೆಗೆ ಕಾಡು ಪ್ರಾಣಿಗಳು ಇತ್ತೀಚೆಗೆ ಕಾಡಿನಿಂದ ನಾಡಿಗೆ ಬರುವ ಸಂಖ್ಯೆ ಹೆಚ್ಚಳವಾಗಿದ್ದು ಇದರಿಂದ ರೈತರು ಬೆಳೆಗಾರರು ಹಾಗೂ ಸಾರ್ವಜನಿಕರು ಸಂಕಷ್ಟ ಎದುರಿಸುತ್ತಿದ್ದಾರೆ ಈ ನಿಟ್ಟಿನಲ್ಲಿ ಪ್ರಥಮವಾಗಿ ವಿದ್ಯಾರ್ಥಿಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದರು. 

 ಶಾಲಾ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಈ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ರಕ್ಷಿತಾರಣ್ಯದಲ್ಲಿ ಹಣ್ಣಿನ ಬೀಜ ಬಿತ್ತನೆ ಅಭಿಯಾನ ಅಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಪರಿಸರ ಸಂರಕ್ಷಣಾ ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಕಾರವಿದ್ದು ಮುಂದಿನ ದಿನಗಳಲ್ಲಿ ತಾಲೂಕಿನ ಇತರೆ ಶಾಲೆಗಳ ವಿದ್ಯಾರ್ಥಿಗಳೊಂದಿಗೆ ಬೀಜಗಳ ಬಿತ್ತನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಪರಿಸರ ಪ್ರೇಮಿ ಬಿ. ಬಿ ಯುವರಾಜ್ ಮಾತನಾಡಿ,ದೇಶದ ಪ್ರತಿಷ್ಠೆ ಹೆಚ್ಚಾಗಲು ರಾಷ್ಟ್ರದಲ್ಲಿ ಸಮೃದ್ಧವಾದ ಅರಣ್ಯ ಸಂಪತ್ತು ವೃದ್ಧಿಸಬೇಕಿದೆ. ಜಾಗತಿಕ ತಾಪಮಾನ ವರ್ಷದಿಂದ ವರ್ಷಕ್ಕೆ ಏರುತ್ತಿರುವ ಪ್ರಸಕ್ತ ಕಾಲಘಟ್ಟದಲ್ಲಿ ಅರಣ್ಯ ಸಂರಕ್ಷ ಣೆ ಕೇವಲ ಇಲಾಖೆಯ ಜವಾಬ್ದಾರಿ ಆಗಬಾರದು. ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕ ಅರಣ್ಯ ಸಂರಕ್ಷ ಣೆಯಲ್ಲಿ ತನ್ನ ಪಾತ್ರವನ್ನು ಪ್ರಾಮಾಣಿಕವಾಗಿ ನಿರ್ವಹಿಸುವಂತಾಗಬೇಕು. ಹೀಗಾದಲ್ಲಿ ಮಾತ್ರ ಅರಣ್ಯ ಉಳಿಸಿ ಬೆಳೆಸಲು ಸಾಧ್ಯ ಎಂದರು.

ಹಣ್ಣಿನ ಹಾಗೂ ಕಾಡು ಮರಗಳ ವಿವಿಧ ಜಾತಿ ಯ 3000 ಕ್ಕೂ ಹೆಚ್ಚು ಬೀಜಗಳನ್ನು ಬಿತ್ತನೆ ಮಾಡಿದರು. ಕಾರ್ಯಕ್ರಮವನ್ನು ಬಾಳ್ಳುಪೇಟೆಯ ಬ್ಲಾಸಂ ಶಾಲೆಯ ಸುಮಾರು 120 ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಈ ಸಂಧರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪರಿಸರ ಪ್ರೇಮಿಗಳು ಸಾರ್ವಜನಿಕರು ಭಾಗವಹಿಸಿದ್ದರು.

RELATED ARTICLES
- Advertisment -spot_img

Most Popular