ಸಕಲೇಶಪುರ :ಮರಳು ಸಾಗಾಟ ವಿಷಯಕ್ಕೆ ಮಚ್ಚಿನಿಂದ ಹಲ್ಲೆಗೆ ಯತ್ನ
ಅಕ್ರಮಕ್ಕೆ ಕಡಿವಾಣ ಹಾಕಲು ಪೊಲೀಸರು ವಿಫಲ
ವರದಿ : ಸುಧೀರ್ ಎಸ್. ಎಲ್
ಸಕಲೇಶಪುರ: ಮರಳು ಸಾಗಾಟ ವಿಷಯಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಓರ್ವನ ಮೇಲೆ ಮಚ್ಚಿನಿಂದ ದಾಳಿ ನಡೆದಿರುವ ಘಟನೆ ಪಟ್ಟಣದ ಹಳೇ ಸಂತೇವೇರಿ ಬಡಾವಣೆಯಲ್ಲಿ ನಡೆದಿದೆ.
ಪಟ್ಟಣದ ಹಳೇಸಂತೆವೇರಿ ಬಡಾವಣೆಯಲ್ಲಿ ಸಾಜೀದ್ ಹಾಗೂ ಅನ್ಸರ್ ಎಂಬುವರ ಗುಂಪುಗಳ ನಡುವೆ ಮರಳು ಸಾಗಾಣಿಕೆ ವಿಷಯದಲ್ಲಿ ಘರ್ಷಣೆ ನಡೆದು ಸಾಜೀದ್ ಹಾಗೂ ಇಮ್ರಾನ್ ಎಂಬುವರು ಅನ್ಸರ್ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದು ಈ ಕುರಿತು ನಗರ ಪೋಲಿಸ್ ಠಾಣೆಯಲ್ಲಿ ಸಾಜೀದ್ ಹಾಗೂ ಇಮ್ರಾನ್ ಎಂಬುವರ ಮೇಲೆ ದೂರು ದಾಖಲಾಗಿದೆ.ಪಟ್ಟಣದಲ್ಲಿ ಅಕ್ರಮ ಮರಳುಗಾರಿಕೆ ವ್ಯಾಕವಾಗಿದ್ದು ಕೆಲಸವಿಲ್ಲದ ಯುವಕರು ಅಕ್ರಮ ಮರಳು ಸಾಗಾಣಿಕೆಯನ್ನೆ ಉದ್ಯೋಗವನ್ನಾಗಿ ಮಾಡಿಕೊಂಡಿದ್ದಾರೆ. ಅಕ್ರಮ ಮರಳುಗಾರಿಕೆಯನ್ನು ತಡೆಗಟ್ಟ ಬೇಕಾದ ಪೋಲಿಸರು ಈ ಕುರಿತು ಯಾವುದೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ. ಅಕ್ರಮ ಮರಳುಗಣಿಗಾರಿಕೆಯಿಂದ ಯಾವುದೆ ರೀತಿಯ ಅಹಿತಕರ ಘಟನೆ ಸಂಭವಿಸಲು ಮೊದಲು ಪೋಲಿಸರು ಅಕ್ರಮ ಮರಳು ಗಣಿಗಾರಿಕೆಗೆ ತಡೆವೊಡ್ಡಬೇಕಾಗಿದೆ. ಸರ್ಕಾರ ನೂತನ ಮರಳು ನೀತಿಯನ್ನು ಅನುಷ್ಠಾನ ಮಾಡಲು ಮುಂದಾಗದ ಕಾರಣ ಈ ರೀತಿಯ ಘಟನೆ ಉಂಟಾಗಲು ಕಾರಣವಾಗಿದೆ.ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೆ ನೂತನ ಮರಳು ನೀತಿಯನ್ನು ಅನುಷ್ಠಾನಗೊಳಿಸಿ ಸಾರ್ವಜನಿಕರಿಗೆ ಮರಳು ದೊರಕುವಂತೆ ಮಾಡಬೇಕಾಗಿದೆ.