Sunday, April 20, 2025
Homeಸುದ್ದಿಗಳುಸಕಲೇಶಪುರಬೆಳಗೋಡು ಹೋಬಳಿ ವ್ಯಾಪ್ತಿಯಲ್ಲಿ ಸಿಮೆಂಟ್ ಮಂಜುನಾಥ್ ಬಿರುಸಿನ ಪ್ರಚಾರ.

ಬೆಳಗೋಡು ಹೋಬಳಿ ವ್ಯಾಪ್ತಿಯಲ್ಲಿ ಸಿಮೆಂಟ್ ಮಂಜುನಾಥ್ ಬಿರುಸಿನ ಪ್ರಚಾರ.

ಬೆಳಗೋಡು ಹೋಬಳಿ ವ್ಯಾಪ್ತಿಯಲ್ಲಿ ಸಿಮೆಂಟ್ ಮಂಜುನಾಥ್ ಬಿರುಸಿನ ಪ್ರಚಾರ.

ಸಕಲೇಶಪುರ :ಸಕಲೇಶಪುರ, ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿಮೆಂಟ್ ಮಂಜುನಾಥ್ ಶುಕ್ರವಾರ ತಾಲೂಕಿನ ಬೆಳಗೋಡು ಹೋಬಳಿ ವ್ಯಾಪ್ತಿಯಲ್ಲಿ ಬಿರುಸಿನ ಪ್ರಚಾರ ನೆಡೆಸಿದರು.
ಅಚಂಗಿ, ಹಲಸುಲಿಗೆ,ಹಸಿಡೆ, ಮಾಸುವಳ್ಳಿ ಬೈಕೆರೆ,ದೊಡ್ಡನಾಗರ, ಕೆಲಗಳಲೆ,ಸುಂಡೇಕೆರೆ, ಬಿರಡಹಳ್ಳಿ,ಉದೇವಾರ, ಬಾಳಗೋಡು,ಕೆಸಗುಲಿ, ಮೂಗಲಿ, ಲಕ್ಕುಂದ, ಹೆಬ್ಬನಹಳ್ಳಿ,ಗೊಳಗೊಂಡೆ, ಬೆಳಗೋಡು ಹಾಗೂ ಹೊಸಪೇಟೆ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಸಾರ್ವಜನಿಕರನ್ನು ಭೇಟಿಯಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ತಿಳಿಸುತ್ತಾರೆ ಮತಯಾಚನೆ ಮಾಡಿದರು.
ಈ ವೇಳೆ ಮಾತನಾಡಿದ ಅಭ್ಯರ್ಥಿ ಸಿಮೆಂಟ್ ಮಂಜುನಾಥ್ ಈ ಬಾರಿ ಸಕಲೇಶಪುರ ತಾಲೂಕಿನ ಸ್ವಾಭಿಮಾನಕ್ಕಾಗಿ ಸಾಮಾನ್ಯ ಅಭ್ಯರ್ಥಿಯಾದ ಸ್ಥಳೀಯನಾದ ನನಗೆ ತಮ್ಮ ಅಮೂಲ್ಯವಾದ ಮತವನ್ನು ನೀಡುವ ಮೂಲಕ ಕ್ಷೇತ್ರದ ಅಭಿವೃದ್ಧಿ ಮಾಡಲು ಸಹಕರಿಸುವಂತೆ ಮನವಿ ಮಾಡಿದರು,

ಈ ಸಂದರ್ಭದಲ್ಲಿ ಬೆಳಗೋಡು ಹೋಬಳಿ ವ್ಯಾಪ್ತಿಯ ಎಲ್ಲಾ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು,ಮುಖಂಡರು ಉಪಸ್ಥಿತರಿದ್ದರು.

RELATED ARTICLES
- Advertisment -spot_img

Most Popular