ಸಕಲೇಶಪುರ:
ತಾಲೂಕಿನ ಕುದುರಂಗಿ ಶ್ರೀ ವೀರಭದ್ರಸ್ವಾಮಿ ರಥೋತ್ಸವ ಮಂಗಳವಾರ ಸಾವಿರಾರು ಭಕ್ತಾರ ಸಮ್ಮುಖದಲ್ಲಿ ವಿಂಜ್ರಭಣೆಯಿಂದ ನೆರವೇರಿತು.
ಸೋಮವಾರದಿಂದಲೇ ಕುದರಂಗಿ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಜಾತ್ರಮಹೋತ್ಸವದ ಪ್ರಯುಕ್ತ ವಿವಿಧ ಪೂಜಾ ವಿಧಿವಿಧಾನಗಳು ನಡೆದಿದ್ದು ಮಂಗಳವಾರ ದೇವಾಲಯದ ಮುಂಭಾಗ ಬೆಳಿಗ್ಗೆ 8.30 ರಿಂದ 8.40 ವರಗೆ ಪುಷ್ಪರಥೋತ್ಸವ ಜರುಗಿತು. ನಂತರ ದೇವಸ್ಥಾನದಲ್ಲಿ ವಿವಿಧ ಪೂಜಾ ಕೈಕಾರ್ಯ ನಡೆದು ಬಲಿ ಹೊಡೆಯುವ ಪೂಜಾವಿಧಾನಗಳು ಮುಗಿದ ನಂತರ ಮದ್ಯಾಹ್ನ 12.40 ರ ಶುಭಲಗ್ನದಲ್ಲಿ ಬ್ರಹ್ಮರಥೋತ್ಸವ ಜರುಗಿತು. ರಥೋತ್ಸವ ಮುಗಿದ ಮರುಕ್ಷಣವೆ ಭಕ್ತಾಧಿಗಳು ಪ್ರಸಾಧಕ್ಕಾಗಿ ಮುಗಿ ಬಿದಿದ್ದರಿಂದ ಕೆಲಕಾಲ ಪ್ರಸಾದ ವಿತರಿಸುವ ಸ್ಥಳದಲ್ಲಿ ಗೊಂದಲ ಉಂಟಾಗಿತ್ತು.
ವಿಶೇಷ: ಪ್ರತಿವರ್ಷ ಶ್ರೀ ವೀರಭದ್ರಸ್ವಾಮಿ ರಥೋತ್ಸವಕ್ಕೆ ಸುಮಾರು ನೂರು ಅಡಿ ಉದ್ದದ ಏಕ ಭೆತ್ತದಿಂದ ರಥ ಎಳೆಯುವುದು ಇಲ್ಲಿನ ವಿಶೇಷಗಳಲ್ಲಿ ಒಂದಾಗಿದೆ. ರಥೋತ್ಸವಕ್ಕಾಗಿ ಅಭಯಾರಣ್ಯದಿಂದ ದೇವಸ್ಥಾನದ ಭಕ್ತರು ಭೆತ್ತ ಆರಸಿ ತರುವುದು ಇಲ್ಲಿನ ಸಂಪ್ರಧಾಯಗಳಲ್ಲಿ ಒಂದಾಗಿದೆ.
ಒಟ್ಟು ನಾಲ್ಕು ದಿನಗಳ ಜಾತ್ರಮಹೋತ್ಸವದಲ್ಲಿ ಬುದುವಾರ ಮುಂಜಾನೆ ದೇವರ ಪಲ್ಲಕ್ಕಿ ಉತ್ಸವ ಮದ್ಯಾಹ್ನ ಇಡುಗಾಯಿ ಸಮರ್ಪಣೆ ನೆರವೇರಿದರೆ. ಗುರುವಾರ ರಾತ್ರಿ ದೇವರಿಗೆ ಅವಭೃತ ಸ್ನಾನಮಾಡಿಸುವುದರೊಂದಿಗೆ ಜಾತ್ರೆಗೆ ತೆರೆಬೀಳಲಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ದೇವರ ದರ್ಶನಕ್ಕೆ ಮುಗಿಬಿದ್ದಿದ್ದು ಕಂಡು ಬಂತು.