ಮಲೆನಾಡು ರಕ್ಷಣಾ ಸೇನೆಯ ಬಾಗೆ ಘಟಕ ಉದ್ಘಾಟನೆ.
ಅಧ್ಯಕ್ಷರಾಗಿ ಮಂಜು ನೇಮಕಮಾಡಿ ರಾಜ್ಯಾದ್ಯಕ್ಷ ಸಾಗರ್ ಜಾನೆಕೆರೆ ಆದೇಶ
ಸಕಲೇಶಪುರ: ಮನೆನಾಡು ಭಾಗದ ಜ್ವಲಂತ ಸಮಸ್ಯೆಗಳಿಗೆ ದ್ವನಿಯಾಗಿರುವ ಮಲೆನಾಡು ರಕ್ಷಣಾ ಸೇನೆಯು ತನ್ನ ಘಟಕಗಳನ್ನು ವಿಸ್ತಾರಿಸುತ್ತಿದೆ ಈ ನಿಟ್ಟಿನಲ್ಲಿ ತಾಲೂಕಿನ ಬೆಳಗೋಡು ಹೋಬಳಿ ಬಾಗೆ ಗ್ರಾಮದಲ್ಲಿ ತನ್ನ ಘಟಕವನ್ನು ಗುರುವಾರ ಉದ್ಘಾಟನೆ ಮಾಡಿದೆ.
ರಾಜ್ಯ ಸಂಸ್ಥಾಪಕ ರಾಜ್ಯಾಧ್ಯಕ್ಷರು ಸಾಗರ್ ಜಾನೇಕೆರೆರವರ ಆದೇಶದ ಮೇರೆಗೆ ಮಲೆನಾಡು ರಕ್ಷಣಾ ಸೇನೆಯ ಬಾಗೆ ಘಟಕವನ್ನು ಉದ್ಘಾಟನೆ ಮಾಡಲಾಯಿತು.ನೂತನ ಅಧ್ಯಕ್ಷರಾಗಿ ಮಂಜು ಅವರನ್ನು ನೇಮಕ ಮಾಡಲಾಗಿದೆ.ಘಟಕದ ಗೌರವಾಧ್ಯಕ್ಷರಾಗಿ ಸಂತೋಷ್, ಉಪಾಧ್ಯಕ್ಷರಾಗಿ ಶೇಖರ್, ಖಜಾಂಚಿಯಾಗಿ ರವಿ, ಕಾರ್ಯದರ್ಶಿಯಾಗಿ ಗಣೇಶ್, ಸಂಚಾಲಕರಾಗಿ ರಮೇಶ್ ಉಸ್ತುವಾರಿ ಸಂಘಟನಾ ಕಾರ್ಯದರ್ಶಿಯಾಗಿ ಕಿರಣ್ ಅವರನ್ನು ಆಯ್ಕೆ ಮಾಡಲಾಯಿತು
ಈ ಸಂದರ್ಭದಲ್ಲಿ ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷರಾದ ವನಜಾಕ್ಷಿ,ತಾಲ್ಲೂಕು ಅಧ್ಯಕ್ಷ ಸತೀಶ್ ಕಾರ್ಯದರ್ಶಿ ರುತೇಶ್,ಸಂಚಾಲಕರು ಭರತ್ ,ಬಾಗೆ ಗ್ರಾಮದ ಹಿರಿಯರಾದ ಸುಶೀಲಮ್ಮ ಉಪಸ್ಥಿತರಿದ್ದರು