ಪೊಲೀಸರು ಹಾಗೂ ಗ್ರಾಮಸ್ಥರಿಂದ ಮದ್ಯ ಮುಕ್ತ ಗ್ರಾಮಕ್ಕೆ ಪಣ.
ಪೊಲೀಸರ ವಿನೂತನ ಕಾರ್ಯಕ್ರಮಕ್ಕೆ ಎಲ್ಲೆಡೆ ಮೆಚ್ಚುಗೆ.
ಅಕ್ರಮ ಮಧ್ಯ ಮಾರಾಟ ನಡೆಸುವವರಿಗೆ ಗಡಿಪಾರಿನ ಎಚ್ಚರಿಕೆ.
ಸಕಲೇಶಪುರ ತಾಲೂಕಿನ ಅಗಲಟ್ಟಿ ಗ್ರಾಮದಲ್ಲಿ ಇನ್ನು ಮದ್ಯ ಮಾರಾಟ ಬಂದ್
ಸಕಲೇಶಪುರ : ಮದ್ಯಪಾನ ದೇಶವ್ಯಾಪಿಯಾಗಿದ್ದು, ಸಾವಿರಾರು ಮಂದಿ ಕುಡಿತದ ವ್ಯಸನಕ್ಕೆ ಬಲಿಯಾಗಿ ಕುಟುಂಬದ ನೆಮ್ಮದಿಯನ್ನೇ ಹಾಳುಮಾಡುತ್ತಿದ್ದಾರೆ. ಹೆಣ್ಣುಮಕ್ಕಳು ಇದರಿಂದ ಹೆಚ್ಚಿನ ಆತಂಕಕ್ಕೆ ಸಿಲುಕುತ್ತಿದ್ದಾರೆ ಎಂದು ಸಹಾಯಕ ಪೊಲೀಸ್ ಅಧೀಕ್ಷಕ ಮಿಥುನ್ ಬೇಸರಿಸಿದರು.
ಪೊಲೀಸರು ರಕ್ಷಣಾ ಕಾರ್ಯ, ಬಂದೋಬಸ್ತ್, ಸಂಚಾರ ನಿಮಯ ಪಾಲನೆ, ಕಳ್ಳತನ, ಕೊಲೆ ಪ್ರಕರಣ ಭೇದಿಸುವುದರಲ್ಲಿಯೇ ಬ್ಯುಸಿ ಆಗಿರುತ್ತಾರೆ. ಆದರೆ, ತಾಲೂಕಿನ ಗ್ರಾಮಾಂತರ ಠಾಣೆ ಪೊಲೀಸರು ತಮ್ಮ ವ್ಯಾಪ್ತಿಯ ಗ್ರಾಮಗಳನ್ನು ಸಾರಾಯಿ ಮುಕ್ತಗೊಳಿಸಲು ಹೊರಟಿರುವುದು ಶ್ಲಾಘನೆಗೆ ಪಾತ್ರವಾಗಿದೆ.
ತಾಲೂಕಿನ ಕ್ಯಾಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಗಲಟ್ಟಿ, ದಬ್ಬೆಗದ್ದೆ, ಮಾವಿನಹಳ್ಳಿ ಗ್ರಾಮದ ಮಹಿಳೆಯರು ಹಾಗೂ ಸಂಘ ಸಂಸ್ಥೆಗಳ ಕಾರ್ಯಕರ್ತರು ತಮ್ಮ ಗ್ರಾಮದಲ್ಲಿ ಮದ್ಯ ಮಾರಾಟ ನಿಲ್ಲಿಸಿ ಎಂದು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದು, ಅವರ ಮನವಿಗೆ ಸ್ಪಂದಿಸಿ ಗ್ರಾಮಗಳಿಗೆ ಹೋಗಿ ಮದ್ಯ ಸೇವನೆ ದುಷ್ಟರಿಣಾಮ ಕುರಿತು ಪೊಲೀಸ್ ಇಲಾಖೆಯಿಂದ ತಿಳುವಳಿಕೆ ಹಾಗೂ ಜಾಗೃತಿ ಮೂಡಿಸಲಾಗುತ್ತದೆ ಎಂದು ಸಹಾಯಕ ಪೊಲೀಸ್ ಅಧೀಕ್ಷಕ ಮಿಥುನ್ ತಿಳಿಸಿದ್ದಾರೆ.
ಮದ್ಯಮುಕ್ತ ಗ್ರಾಮವನ್ನಾಗಿ ಘೋಷಣೆ ಮಾಡಿದ ನಂತರ ಆ ಗ್ರಾಮದಲ್ಲಿ ಯಾರಾದರೂ ಮದ್ಯ ಮಾರಾಟ ಮಾಡಿದರೆ, ಮದ್ಯ ಸೇವಿಸಿ ಗಲಾಟೆ ಮಾಡಿದರೆ ಮೇಲಿಂದ ಮೇಲೆ ಮದ್ಯ ಸೇವಿಸಿದ ಪ್ರಕರಣ ಕಂಡು ಬಂದರೆ ಅಂತವರನ್ನು ಗ್ರಾಮದಿಂದ ಗಡಿಪಾರು ಮಾಡುವ ಕ್ರಮವನ್ನು ಪೊಲೀಸ್ ಇಲಾಖೆ ತೆಗೆದುಕೊಳ್ಳಲಿದೆ ಎಂದು ಸಹಾಯಕ ಪೊಲೀಸ್ ಅಧಿಕ ಮಿಥುನ್ ಅಕ್ರಮ ಮಧ್ಯ ಮಾರಾಟ ನಡೆಸುವವರಿಗೆ ಎಚ್ಚರಿಕೆ ನೀಡಿದ್ದಾರೆ.
ಪೊಲೀಸರು, ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಗ್ರಾಮೀಣ ಭಾಗವನ್ನು ಸಾರಾಯಿ ಮುಕ್ತ ಗ್ರಾಮ ಮಾಡಲು ಮುಂದಾಗಿರುವುದು ಸ್ವಾಗತಾರ್ಹ. ಜನತೆ ಇದಕ್ಕೆ ಸ್ಪಂದಿಸಬೇಕು.ಕರವೇ ಸ್ವಾಭಿಮಾನಿ ಸೇನೆಯ ಹಾನುಬಾಳು ದಿಲೀಪ್ ಶೈವ ಹೇಳಿದ್ದಾರೆ.
ತಾಲೂಕಿನ ಗ್ರಾಮಾಂತರ ಠಾಣೆಯ ಡಿ.ವೈ.ಎಸ್.ಪಿ, ಸಿಪಿಐ, ಪಿಎಸ್‌ಐ, ಎಎಸ್‌ಐಗಳು ಪ್ರತಿ ಗ್ರಾಮಗಳಲ್ಲಿ ಮದ್ಯ ಸೇವನೆಯ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ತಿಳಿ ಹೇಳುವ ಕೆಲಸ ಮಾಡುತ್ತಿದ್ದಾರೆ. ಕೆಳ ಹಂತದ ಪೊಲೀಸರು ಮುತುವರ್ಜಿ ವಹಿಸಿ ಕಾರ್ಯ ನಿರ್ವಹಣೆ ಮಾಡುತ್ತಿರುವುದರಿಂದ ಮದ್ಯಪಾನ ಮುಕ್ತ ಗ್ರಾಮಗಳು ಹೆಚ್ಚಾಗುತ್ತಿವೆ. ಗ್ರಾಮಗಳ ಪರಿವರ್ತನೆಗೆ ಪೊಲೀಸ್ ಇಲಾಖೆಯ ಸಹಕಾರ ನೀಡುತ್ತಿದ್ದು, ಇಲಾಖೆಯ ಕಾರ್ಯವೈಖರಿಯನ್ನು ಗ್ರಾಮಸ್ಥರು ಶ್ಲಾಘಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಮದ್ಯ ಮುಕ್ತ ಪರಿವರ್ತನೆಯ ಗಾಳಿ ಬೀಸಿದ್ದು, ಮಹಾತ್ಮ ಗಾಂಧೀಜಿ ಕಂಡ ಗ್ರಾಮ ಸ್ವರಾಜ್ ಕನಸು ಹಂತ – ಹಂತದಲ್ಲಿ ಜಾರಿಗೊಳುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ತಿಳಿಸಿದ್ದಾರೆ.
ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದವರನ್ನು ಹಲವು ಬಾರಿ ಎಚ್ಚರಿಸಿದರೂ ಕೂಡ ಪುನಹ ಮದ್ಯ ಮಾರಾಟದಲ್ಲಿ ತೊಡಗಿದ್ದವರನ್ನು ನೆನ್ನೆ ನಡೆದ ಗ್ರಾಮಸ್ಥರ ನಡುವಿನ ಸಭೆಯಲ್ಲಿ ಒಟ್ಟು ಏಳು ಜನರಿಗೆ ಛೀಮಾರಿ ಹಾಕಲಾಯಿತು.
ವೃತ್ತ ನಿರೀಕ್ಷಕ ಚೈತನ್ಯ, ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜ್ , ಭೀಮ ಕೋರೆಂಗಾವ್ ಸಮಿತಿಯ ಸಂಚಾಲಕ ಶಾಂತರಾಜ್ ಹೆನ್ನಲಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಗ್ರಾಮಸ್ಥರು ಹಾಜರಿದ್ದರು.
ಸದ್ಯ ತಾಲೂಕಿನಲ್ಲಿ ಹೊಸ ಪರಿವರ್ತನೆ ಗಾಳಿ ಬೀಸಿದ್ದು, ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.